/newsfirstlive-kannada/media/post_attachments/wp-content/uploads/2025/02/MYS_apartment.jpg)
ಮೈಸೂರು: ಒಂದೇ ಕುಟುಂಬದ ನಾಲ್ವರು ಕೊನೆಯುಸಿರೆಳೆದಿರುವ ಘಟನೆ ನಗರದ ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್ ನಿವಾಸಿಗಳಾದ ಚೇತನ್( 45), ರೂಪಾಲಿ (43), ಪ್ರಿಯಂವದ (65) ಹಾಗೂ ಕುಶಾಲ್ (15) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಚೇತನ್ ಮೊದಲು ತನ್ನ ತಾಯಿ, ಪತ್ನಿ ಹಾಗೂ 15 ವರ್ಷದ ಮಗನಿಗೆ ವಿಷ ಉಣಿಸಿ ಜೀವ ತೆಗೆದಿರುವ ಅನುಮಾನ ವ್ಯಕ್ತಪಡಿಸಲಾಗಿದೆ.
ಮೂವರಿಗೆ ವಿಷ ಉಣಿಸಿದ ಮೇಲೆ ಚೇತನ್ ತಾನು ಕೂಡ ನೇಣು ಬಿಗಿದುಕೊಂಡಿದ್ದಾನೆ. ಆದರೆ ಈ ಘಟನೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವಿದ್ಯಾರಣ್ಯಪುರಂ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಇನ್ಸ್ಪೆಕ್ಟರ್ ಮೋಹಿತ್, ಡಿಸಿಪಿ ಜಾಹ್ನನಿ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸ್ಥಳದಲ್ಲೇ ಇದ್ದಾರೆ. ಘಟನೆ ಸಂಬಂಧ ತನಿಖೆ ಆರಂಭಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ