newsfirstkannada.com

ಮಹಿಳೆ ಕಿಡ್ನಾಪ್​ ಕೇಸಲ್ಲಿ HD ರೇವಣ್ಣಗೆ ಜಾಮೀನು; ಕೋರ್ಟ್​​ನಲ್ಲಿ SIT ಪರ ವಕೀಲರು ವಾದಿಸಿದ್ದೇನು?

Share :

Published May 14, 2024 at 6:14am

    ಜನಪ್ರತಿನಿಧಿಗಳ ಕೋರ್ಟ್​​ನಲ್ಲಿ ಜಾಮೀನು ಅರ್ಜಿ ವಿಚಾರಣೆ

    ರೇವಣ್ಣಗೆ ಜಾಮೀನು ನೀಡದಂತೆ ಎಸ್​ಐಟಿ ವಕೀಲರ ವಾದ

    ಎಸ್​ಐಟಿ ವಾದಕ್ಕೆ ರೇವಣ್ಣ ಪರ ವಕೀಲರ ಪ್ರಬಲ ಪ್ರತಿವಾದ

ಮೈಸೂರು ಮಹಿಳೆ ಅಪಹರಣ ಕೇಸ್​ನಲ್ಲಿ ಬಂಧಿತರಾಗಿರುವ ಹೆಚ್​.ಡಿ ರೇವಣ್ಣ ಜಾಮೀನು‌ ಅರ್ಜಿ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಾದ ಪ್ರತಿವಾದ ಜೋರಾಗಿತ್ತು. ರೇವಣ್ಣಗೆ ಜಾಮೀನು ವಿಚಾರವಾಗಿ ಇಡೀ ದಿನ ಎಸ್ಐಟಿ ಪರ ವಕೀಲರು ಮತ್ತು ಹೆಚ್​ಡಿ ರೇವಣ್ಣ ಪರ ವಕೀಲರು ತಮ್ಮ ತಮ್ಮ ವಾದವನ್ನು ಮಂಡಿಸಿದ್ರು.

ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್

ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಎಸ್​ಪಿಪಿ ಜಾಯ್ನಾ ಕೊಠಾರಿ, ಪ್ರಕರಣದ ತನಿಖಾಧಿಕಾರಿಯವರಿಂದ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಇದಕ್ಕೆ ರೇವಣ್ಣ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ ಬಳಿಕ ಅವರಿಗೂ ತನಿಖಾ ವರದಿಯನ್ನು ನೀಡಲಾಯ್ತು. ಕೋರ್ಟ್​ಗೆ ತನಿಖಾ ವರದಿ ಸಲ್ಲಿಕೆ ಬಳಿಕ ವಾದ ಮುಂದುವರಿಸಿದ ಎಸ್​ಐಟಿ ಎಸ್​ಪಿಪಿ ಜಾಯ್ನಾ ಕೊಠಾರಿ, ರೇವಣ್ಣಗೆ ಜಾಮೀನು ನೀಡದಂತೆ ಪ್ರಬಲವಾಗಿ ವಾದ ಮಂಡಿದ್ರು. ಐಪಿಸಿ 364 ಎ ಸೆಕ್ಷನ್​ನಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಕೇಸ್​ನ ಅಪರಾಧ ತೀವ್ರತೆ ಅರಿಯಬೇಕು. ಆರೋಪ ಸಾಬೀತಾದ್ರೆ ಮರಣದಂಡನೆ ವಿಧಿಸಬಹುದಾಗಿದೆ. ಆರೋಪಿ ರೇವಣ್ಣ ಪುತ್ರ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ​ ತಲೆಮರೆಸಿಕೊಂಡಿದ್ದಾರೆ. ಒಂದು ವೇಳೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸಬಹುದು. ಆರೋಪಿ ಪ್ರಭಾವಿ ಎಂದು ಅಂಶವನ್ನ ಪರಿಗಣಿಸಬೇಕು. ‌

ಮಹಿಳೆಯನ್ನ ಅಪಹರಿಸಿ ಬೆದರಿಕೆ ಹಾಕಿದ ಪ್ರಕರಣ ಮಾತ್ರವಲ್ಲ ಕಿಡ್ನ್ಯಾಪ್​ ಆದ ಮಹಿಳೆ ಅತ್ಯಾಚಾರ ಪ್ರಕರಣದ ಸಂತ್ರಸ್ತೆ. ಇನ್ನು ಸಂತ್ರಸ್ತೆಯ ಕಿಡ್ನ್ಯಾಪ್​ ದೂರು ನೀಡದಂತೆ ಮಾಡಿದ ಯತ್ನ. ಇತರೆ ಸಂತ್ರಸ್ತೆಯರನ್ನು ಬೆದರಿಸಲು ಅಪಹರಿಸಲಾಗಿತ್ತು. ಇತರೆ ಸಾಕ್ಷಿಗಳ ಹೇಳಿಕೆ‌ ಇನ್ನೂ ದಾಖಲಿಸಿಕೊಳ್ಳಬೇಕು. ಸಂತ್ರಸ್ತರು ದೂರು ಕೊಡಬೇಕಾದ್ರೆ ರೇವಣ್ಣಗೆ ಜಾಮೀನು ನೀಡಕೂಡದು ಎಂದು ಮನವಿ ಮಾಡಿ ಜಾಯ್ನಾ ಕೊಠಾರಿ ತಮ್ಮ ವಾದವನ್ನು ಮುಗಿಸಿದ್ರು. ಎಸ್​ಐಟಿ ಎಸ್​ಪಿಪಿ ಜಾಯ್ನಾ ಕೊಠಾರಿ ಬಳಿಕ ಮತ್ತೊಬ್ಬ ಎಸ್​ಐಟಿ ಎಸ್​ಪಿಪಿ ಅಶೋಕ್​ ನಾಯಕ್​ ವಾದ ಶುರು ಮಾಡಿದ್ರು. ಪ್ರಕರಣದಲ್ಲಿ 120ಬಿ ಸೇರಿಸಲಾಗಿದ್ದು, ಏಕೆ ಈ ಕೇಸ್ ನಲ್ಲಿ ಒಳಸಂಚು ಹಾಕಲಾಗಿದೆ ಎಂದು ವಾದ ಮಂಡನೆ ಮಾಡಿದ್ರು.

ಎಸ್​ಐಟಿ ಎಸ್​ಪಿಪಿ ಅಶೋಕ್ ನಾಯಕ್

ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ಪ್ರಜ್ವಲ್ ದೇಶ ತೊರೆದಿದ್ದಾರೆ. ಪೆನ್​ಡ್ರೈವ್​ ವಿಡಿಯೊ ವೈರಲ್ ಆಗುತ್ತಿದ್ದಂತೆ ರೇವಣ್ಣ ಪತ್ನಿ ಕರೆಯಿಸಿಕೊಂಡಿದ್ದಾರೆ. ತಾಯಿಯ ಅತ್ಯಾಚಾರದ ವಿಡಿಯೋ ನೋಡಿ ಪುತ್ರ ದೂರು ಕೊಟ್ಟಿದ್ದರು. ಯಾರೂ ಕಿಡ್ನ್ಯಾಪ್​ ಮಾಡಿಲ್ಲ ಎಂಬ ಸಂತ್ರಸ್ತೆಯ ವಿಡಿಯೋವನ್ನು ತನಿಖೆಯ‌‌ ದಿಕ್ಕು ತಪ್ಪಿಸಲು ಹರಿಬಿಡಲಾಗಿದೆ. ಸಂತ್ರಸ್ತೆಯನ್ನ ಮೊದಲು ಬೈಕ್​, ಕಾರಿನಲ್ಲಿ ಕರೆದೊಯ್ದು ಅಪಹರಿಸಿದ್ದಾರೆ‌. ಸಂತ್ರಸ್ತೆಯನ್ನ ತೋಟದ ಮನೆಗೆ ಬಲವಂತವಾಗಿ ಕರೆದೊಯ್ದು, ನಾಲ್ಕೈದು ದಿನ ಆಕೆಗೆ ತೊಂದರೆ‌ ಕೊಟ್ಟಿದ್ದಾರೆ. ಸಂತ್ರಸ್ತೆಯ 161, 164 ಹೇಳಿಕೆ ಇದ್ದು, ಕೋರ್ಟ್​ಗೆ ಸಲ್ಲಿಸಿದ್ದೇವೆ. ಇನ್ನು, ಕಸ್ಟಡಿಯಲ್ಲಿದ್ದಾಗ ಸಲ್ಲಿಸಿದ್ದ ಬೇಲ್​ ಅರ್ಜಿಯನ್ನ ಪರಿಗಣಿಸಬಾರದು. ಆರೋಪಿ ರೇವಣ್ಣ ಎಸ್​ಐಟಿ ವಿಚಾರಣೆಗೆ ಸಹಕಾರ ನೀಡಿಲ್ಲ. ರಾಹುಕಾಲ, ಗುಳಿಕ ಕಾಲ, ಹೊಟ್ಟೆನೋವು ಎಂದು ಕುಳಿತಿದ್ದರು. ಇನ್ನು ಇದೇ ವೇಳೆ 2019ರ ಚುನಾವಣಾ ಅಕ್ರಮದಲ್ಲಿ ರೇವಣ, ಪ್ರಜ್ವಲ್​ ಅನರ್ಹತೆ ಬಗ್ಗೆ ಉಲ್ಲೇಖ ಮಾಡಿಲಾಗಿದ್ದು, ಅವರದ್ದು ಕರಪ್ಟ್ ಪ್ರಾಕ್ಟೀಸ್, ಹೀಗಾಗಿ ಜಾಮೀನು ನೀಡದಂತೆ ಎಸ್​ಐಟಿ ಎಸ್​ಪಿಪಿ ಅಶೋಕ್​ ನಾಯಕ್​ ಮನವಿ ಮಾಡಿದರು.

ಎಸ್​ಐಟಿ ಎಸ್​ಪಿಪಿಗಳಾದ ಜಾಯ್ನಾ ಕೊಠಾರಿ ಮತ್ತು ಅಶೋಕ್​ ನಾಯಕ್​ ಮಾಡಿದ ವಾದಕ್ಕೆ ರೇವಣ್ಣ ಪರ ವಕೀಲರಾದ ಸಿ.ವಿ.ನಾಗೇಶ್​, ಅಷ್ಟೇ ಪ್ರಬಲವಾಗಿ ಪ್ರತಿವಾದ ಮಾಡಿದ್ರು. ರಿಮ್ಯಾಂಡ್​ ಅರ್ಜಿ ಮತ್ತು ಒಳ ಸಂಚು ವಾದಕ್ಕೆ ಪ್ರತಿವಾದ ಮಂಡಿಸಿದ್ರು.

ಕಿಡ್ನ್ಯಾಪ್​ ಪ್ರಕರಣದಲ್ಲಿ ಏಕೆ ತಡವಾಗಿ ದೂರು ನೀಡಲಾಗಿದೆ‌?

ದೂರು ತಡವಾದ ಬಗ್ಗೆ SITಯಿಂದ ಸ್ಪಷ್ಟನೆಯಿಲ್ಲ. ಮೇ 2ರಂದು ಅಪಹರಣದ ದೂರು ಯಾಕೆ ನೀಡಿಲ್ಲ. ಮಹಿಳೆಯು ರೇವಣ್ಣ ಕುಟುಂಬಕ್ಕೆ‌ ರಕ್ತ ಸಂಬಂಧಿ ಆಗ್ಬೇಕು. ತಾಯಿ ಮನೆಗೆ ಬಂದಿಲ್ಲ ಎಂದು ದೂರುದಾರ ಉಲ್ಲೇಖಿಸಿದ್ದಾನೆ. ಅಪಹರಣ ಮಾಡಿದ್ದಾರೆ ಎಂಬುದು ದೂರುದಾರನ ಊಹೆ. ಟಿವಿಯಲ್ಲಿ ವಿಡಿಯೋ ಬಂದಿದೆ ಅಂದುಕೊಂಡು ದೂರು ನೀಡಲಾಗಿದೆ. ಚುನಾವಣೆಗೆ ಮುನ್ನ ಮನೆಗೆ ಕರೆದಿದ್ದಾರೆ, ಇದು ಕಿಡ್ನ್ಯಾಪ್​ ಹೇಗಾಗುತ್ತೆ? ಪ್ರಕರಣದಲ್ಲಿ ಎರಡು ರಿಮ್ಯಾಂಡ್​ ಅರ್ಜಿಯನ್ನು ಸಲ್ಲಿಕೆ ಆಗಿದೆ. ರೇವಣ್ಣ ಅರೆಸ್ಟ್​ ಆದ ದಿನವೇ ಸಂತ್ರಸ್ತ ಮಹಿಳೆ ಪತ್ತೆಯಾಗಿದ್ದರು. ಅದೇ ದಿನ 161 ಹೇಳಿಕೆ ಪಡೆದಿದ್ದು, ರೇವಣ್ಣ ಬಗ್ಗೆ ಆರೋಪಿಸಿಲ್ಲ.

ಇದನ್ನೂ ಓದಿ: ಕುಡುಗೋಲಿನಿಂದ ಕತ್ತರಿಸಿ ವ್ಯಕ್ತಿಯ ಬರ್ಬರ ಕೊಲೆ.. ತ್ರಿಬಲ್ ಮರ್ಡರ್ ಬೆನ್ನಲ್ಲೇ ಮತ್ತೆ ಬೆಚ್ಚಿಬಿದ್ದ ಶಿವಮೊಗ್ಗ

ಇದುವರೆಗೂ ಯಾಕೆ CRPC 164ನಡಿ ಹೇಳಿಕೆ ದಾಖಲಿಸಿಲ್ಲ. ಒಂದು ವಾರಗಳ ಕಾಲ ಸಂತ್ರಸ್ತೆಯ ಆಪ್ತ ಸಮಾಲೋಚನೆ ಅಗತ್ಯವಿತ್ತಾ? 364ಎ ಪ್ರಕರಣದಡಿ ಎಸ್​ಐಟಿ ಯಾಕೆ ಸಾಕ್ಷ್ಯ ಸಂಗ್ರಹಿಸಿಲ್ಲ. 364A ಹಾಕಲು ಇಲ್ಲಿ ಬೆದರಿಕೆ ಮತ್ತು ಒತ್ತಾಯ, ಡಿಮ್ಯಾಂಡ್ ಇಲ್ಲ. 364ಎ ಪ್ರಕರಣದಲ್ಲಿನ ಸುಪ್ರಿಂಕೋರ್ಟ್, ಹೈಕೋರ್ಟ್​ ತೀರ್ಪುಗಳನ್ನು ರೇವಣ್ಣ ಪರ ವಕೀಲರು ಉಲ್ಲೇಖಿಸಿದ್ರು. ಮರಣದಂಡನೆ ಅಥವಾ ಜೀವಾವಧಿಯಂಥ ಕಠಿಣ ಶಿಕ್ಷೆ ವಿಧಿಸುವ ಅಪರಾಧ ಇದ್ದರೆ ಬೇಲ್​ ತಿರಸ್ಕರಿಸಬಹುದು. ಆದ್ರೆ, ಇಲ್ಲಿ ಅಂತಹ ಯಾವುದೇ ಸತ್ಯ & ಸಂದಾರ್ಭಿಕ ಸಾಕ್ಷಿಗಳಿಲ್ಲ. ಕಿಡ್ನ್ಯಾಪ್​ ಕೇಸ್​ನಲ್ಲಿ ರೇವಣ್ಣ ಮಾತ್ರ ಆರೋಪಿ, ಪ್ರಜ್ವಲ್​ ಆರೋಪಿಯಲ್ಲ. ರಾಜಕೀಯ ದುರುದ್ದೇಶವಿದ್ದು, ಊಹೆಗಳನ್ನು ಪರಿಗಣಿಸಬಾರದು. ಹೀಗಾಗಿ ದಯವಿಟ್ಟು ಜಾಮೀನು ಮಂಜೂರು ಮಾಡಬೇಕೆಂದು ರೇವಣ್ಣ ಪರ ವಕೀಲರಾದ ಸಿ.ವಿ.ನಾಗೇಶ್​ ಮನವಿ ಮಾಡಿದ್ರು. ಒಟ್ಟಾರೆ ಎರಡೂ ಕಡೆಯ ಸುದೀರ್ಘ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಸಂತೋಷ್​ ಗಜಾನನ ಭಟ್​ ತಮ್ಮ ತೀರ್ಪನ್ನು ಪ್ರಕಟಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆ ಕಿಡ್ನಾಪ್​ ಕೇಸಲ್ಲಿ HD ರೇವಣ್ಣಗೆ ಜಾಮೀನು; ಕೋರ್ಟ್​​ನಲ್ಲಿ SIT ಪರ ವಕೀಲರು ವಾದಿಸಿದ್ದೇನು?

https://newsfirstlive.com/wp-content/uploads/2024/05/hd-revanna1.jpg

Load More