newsfirstkannada.com

‘ಎಸಿ ರೂಮ್​ ಬಿಟ್ಟು ಹೋಗುವುದು ಕಷ್ಟದ ವಿಷ್ಯವಲ್ಲ’- ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ರಾಜವಂಶಸ್ಥ ಯದುವೀರ್

Share :

Published March 15, 2024 at 7:10am

  ನಾನು ರಾಜನಲ್ಲ, ಕಾಲು ತೊಳೆಯುವುದನ್ನು ನಿರಾಕರಿಸಿದ ಒಡೆಯರ್

  ರಾಜಾಳ್ವಿಕೆಯಿಂದ ರಾಜಕೀಯದೆಡೆಗೆ ಪಯಣ ಬೆಳೆಸಿದ ಯದುವೀರ್

  ಅರಮನೆಯಿಂದ ನೇರ ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ಭೇಟಿ

ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ್ ಬಿಜೆಪಿ ಟಿಕೆಟ್ ಗಿಟ್ಟಿಸಿ ಕೇಸರಿ ಶಾಲು ಧರಿಸಿದ್ದಾರೆ. ಕಮಲ ಹಿಡಿದ ಬೆನ್ನಲ್ಲೇ ರಾಜ್ಯ, ಜಿಲ್ಲಾ ನಾಯಕರ ಮನೆಗಳಿಗೂ ಭೇಟಿ ನೀಡಿ ಎಲ್ಲರ ವಿಶ್ವಾಸ ಗಳಿಸುವ ಯತ್ನ ಮಾಡಿದ್ದಾರೆ. ರಾಜಾಳ್ವಿಕೆಯಿಂದ ರಾಜಕೀಯದೆಡೆಗೆ ಪಯಣ ಬೆಳೆಸಿರುವ ಅವರು ಚುನಾವಣೆ ತಯಾರಿ ಮಾಡುವ ಜೊತೆಗೆ ತಮ್ಮ ವಿರುದ್ಧದ ಮಾತಿಗೆ ಟಾಂಗ್ ಕೊಟ್ಟಿದ್ದಾರೆ.

ಅದ್ಯಾವಾಗ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ‌ ಟಿಕೆಟ್ ಸಿಕ್ತೋ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಖತ್ ಌಕ್ಟಿವ್ ಆಗಿದ್ದಾರೆ. ನಿನ್ನೆ ಮೈಸೂರು ಅರಮನೆಯಿಂದ ನೇರವಾಗಿ ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ತೆರಳಿದ್ರು. ಹಿರಿಯರ ಆಶೀರ್ವಾದ ಪಡೆದ ಬಳಿಕ ರಾಜ್ಯಾಧ್ಯಕ್ಷ ವಿಜಯೇಂದ್ರ ಸಲಹೆ ಪಡೆದರು. ಬಿಜೆಪಿ ಕಚೇರಿಗೆ ತೆರಳಿ ನಾಯಕರ ಪರಿಚಯ ಮಾಡಿಕೊಂಡ್ರು.

ಬಿಜೆಪಿ ನಾಯಕರಾದ ರಾಮದಾಸ್, ನಾಗೇಂದ್ರ ಮನೆಗೆ ಭೇಟಿ

ಇನ್ನು ಬೆಂಗಳೂರಿನಿಂದ ನೇರವಾಗಿ ಮೈಸೂರಿಗೆ ಆಗಮಿಸಿದ ಯದುವೀರ್ ಬಿಜೆಪಿ ಕಚೇರಿಗೆ ಆಗಮಿಸಿದ್ರು. ಮಾಜಿ ಸಚಿವ ರಾಮದಾಸ್, ಮೈಸೂರು ನಗರ ಅಧ್ಯಕ್ಷ ಎಲ್.ನಾಗೇಂದ್ರ ಸೇರಿದಂತೆ ಹಲವರ ಮನೆಗೆ ಭೇಟಿ ನೀಡಿದ್ರು. ಅಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಮಹಿಳೆಯರು ಹಾರ ಹಾಕಿ ಆರತಿ ಎತ್ತಿದ್ರು. ಈ ಭೇಟಿ ವೇಳೆ ಕಾಲು ತೊಳೆಯಲು ಬಂದಿದ್ದಕ್ಕೆ ನಿರಾಕರಿಸಿ ನಾನು ರಾಜನಲ್ಲ ನಿಮ್ಮವರಲ್ಲೊಬ್ಬ ಅನ್ನೋ ಸಂದೇಶ ಸಾರಿದ್ರು. ಇದೇ ವೇಳೆ ಹಲವು ನಾಯಕರನ್ನ ಭೇಟಿ ಮಾಡಿದ್ದಲ್ಲದೇ, ರಸ್ತೆ ಬದಿ ಕುಳಿತು ಟೀ ಕುಡಿದು ಗಮನ ಸೆಳೆದ್ರು.

ಎಸಿ ರೂಮಲ್ಲಿ ಕೂರುವವನಲ್ಲ ಎಂದು ಟಾಂಗ್ ಕೊಟ್ಟ ಯದುವೀರ್

ಇನ್ನು ಸರ್ಕಾರದ ವಿರುದ್ಧ ಅನೇಕ ವಿಚಾರಗಳಲ್ಲಿ ಅರಮನೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬಹುಶಃ ಅದೆಲ್ಲವೂ ಇನ್ನು ಬಗೆಹರಿಯಬಹುದು. ಮಹಾರಾಜರು ಅರಮನೆಯ ಎಸಿ ರೂಮಿನಿಂದ ಜನಸೇವೆಗೆ ಬರುವುದಾದರೆ ಅವರಿಗೆ ಸ್ವಾಗತ ಅಂತ ಸಂಸದ ಪ್ರತಾಪ ಸಿಂಹ ಹೇಳಿದ್ರು. ಇದಕ್ಕೆ ಯದುವೀರ್ ತಿರುಗೇಟು ನೀಡಿದ್ದಾರೆ. ಎಸಿ ರೂಮ್​ನಿಂದ ಜನರ ಮಧ್ಯೆ ಬರುವುದು ಕಷ್ಟವೇನಲ್ಲ. ನಾನು ರಾಜನಾಗಿ ಯಾರ ಕೈಗೂ ಸಿಗಲ್ಲ ಅನ್ನೋದು ಸುಳ್ಳು. ನಾನು ಜನಗಳ ಮಧ್ಯೆ ಇದ್ದು ಜನ ಸೇವೆಗೆ ಸಿದ್ಧ. ಪ್ರಧಾನಿ ಮೋದಿ, ಬಿಜೆಪಿ ಕಾರ್ಯವೈಖರಿ ಗಮನಿಸಿ‌ ಸ್ಪರ್ಧೆ ಮಾಡಿದ್ದೇನೆ. ಜನರು ಅವಕಾಶ ಕೊಟ್ಟರೆ ಮೈಸೂರು-ಕೊಡಗು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಕುಟುಂಬದ ವ್ಯಾಜ್ಯ ಕಾನೂನಿನ ಅನುಸಾರ ನಡೆಯುತ್ತದೆ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

‘ಕೋರ್ಟ್​ ಪ್ರಕಾರ ನಡೆಯುತ್ತದೆ’

ಎಸಿ ರೂಮ್​ ಬಿಟ್ಟು ಹೋಗುವುದು ಕಷ್ಟದ ವಿಷ್ಯವಲ್ಲ. ಅದು ಮಾಡೋದು ಮಾಡಬೇಕಾಗಿದೆ. ಸಾರ್ವಜನಿಕ ಸ್ಥಳಕ್ಕೆ ಬಂದಾಗ ಸಾರ್ವಜನಿಕ ಜವಾಬ್ದಾರಿಗಳು ಏನೇನು ಇವೆ ಅವುಗಳನ್ನು ಮಾಡಬೇಕು. ಎಲ್ಲ ತಿಳಿದುಕೊಂಡೆ ನಾನು ಬಂದಿರೋದು. ಕಾನೂನಿನ ಚೌಕಟ್ಟಿನಲ್ಲಿ ಏನೇನು ಇವೆ ಅವೆಲ್ಲದಕ್ಕೆ ಕೋರ್ಟ್​ನಲ್ಲಿ ಯಾವ ರೀತಿ ನಿರ್ದೇಶನ ಬರುತ್ತೆ ಅದರಂತೆ ಮುಂದೆ ಹೋಗುತ್ತೇವೆ.

ಯದುವೀರ್ ಒಡೆಯರ್, ಬಿಜೆಪಿ ಅಭ್ಯರ್ಥಿ

ಟಿಕೆಟ್ ತಪ್ಪಿದ ತಕ್ಷಣ ಟ್ವೀಟ್ ಮಾಡಿ ಬಾವುಟ ಕಟ್ಟೋಣ, ನಾಳೆಯಿಂದ ಪ್ರಚಾರ ಆರಂಭಿಸೋಣ ಎಂದಿದ್ದ ಪ್ರತಾಪ ಸಿಂಹ ನಾಪತ್ತೆ ಆಗಿದ್ದರು. ಮೈಸೂರಲ್ಲೂ ಇರದೆ, ಯಾರ ಕೈಗೂ ಸಿಗದೆ ಕಾಣೆಯಾಗಿದ್ರು. ಆ ಮೂಲಕ ತಮಗಿರುವ ಅಸಮಾಧಾನವನ್ನ ಪರೋಕ್ಷವಾಗಿ ಹೊರ ಹಾಕಿದ್ದಾರೆ.

ಮೈಸೂರು ಸಂಸ್ಥಾನದಿಂದ ಲೋಕ‌ ಕದನಕ್ಕೆ ರಾಜರು ಎಂಟ್ರಿ ಕೊಟ್ಟಿದ್ದಾರೆ. ರಾಜಾಳ್ವಿಕೆಯಿಂದ ರಾಜಕೀಯ ಆಳ್ವಿಕೆಯತ್ತ ಪಯಣ ಬೆಳೆಸಲು ಮುಂದಾಗಿದ್ದಾರೆ. ಯದುವೀರ್ ಎಂಟ್ರಿಯಿಂದ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರಲ್ಲಿ ಹೊಸ ಹುಮ್ಮಸ್ಸು ಬಂದಂತಾಗಿದೆ. ಈಗಾಗಲೇ ಯದುವೀರ್ ಕ್ಷೇತ್ರ ಸಂಚಾರ ಮಾಡುವ ಮೂಲಕ ಚುನಾವಣಾ ತಯಾರಿ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಎಸಿ ರೂಮ್​ ಬಿಟ್ಟು ಹೋಗುವುದು ಕಷ್ಟದ ವಿಷ್ಯವಲ್ಲ’- ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ರಾಜವಂಶಸ್ಥ ಯದುವೀರ್

https://newsfirstlive.com/wp-content/uploads/2024/03/YADUVEER_PRATAP_1.jpg

Load More