/newsfirstlive-kannada/media/post_attachments/wp-content/uploads/2024/10/bunker.jpg)
ಅಂಟಾರ್ಟಿಕ ಅಂದ್ರೆ ಸುತ್ತಲೂ ಹಬ್ಬಿರುವ ಹಿಮಾವೃತ ಪ್ರದೇಶವೇ ನಮಗೆ ಎಲ್ಲೆಲ್ಲಿಯೂ ಕಾಣುತ್ತದೆ. ಅಂಟಾರ್ಟಿಕ ಖಂಡದ ಈ ಹಿಮಾವೃತ ಪ್ರದೇಶದಲ್ಲಿ ನೂರಾರು ರಹಸ್ಯಗಳನ್ನು ಭೇದಿಸದೇ ಮನುಷ್ಯ ಈಗಲೂ ಕಂಗಾಲಾಗಿದ್ದಾನೆ. ತನ್ನ ಒಡಲಲ್ಲಿ ಹೀಗೆ ಹಲವು ರಹಸ್ಯಗಳನ್ನು ಅಡಗಿಸಿಕೊಂಡಿರುವ ಅಂಟಾರ್ಟಿಕಾದಲ್ಲಿ ಈಗ ಒಂದು ದ್ವಾರ ದೊಡ್ಡದಾಗಿ ಸದ್ದು ಮಾಡುತ್ತಿದೆ. ಈ ರಹಸ್ಯ ದ್ವಾರದ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ.
ಇದನ್ನೂ ಓದಿ:ಗೆದ್ದ ಮಗಳ ತಬ್ಬಿ ಕಣ್ಣೀರು ಹಾಕಿದ ಅಬುಧಾಬಿ ರಾಜಕುಮಾರ; ತಂದೆ ಮಮತೆ ಕಂಡು ಭಾವುಕರಾದ ಜನ
ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಂಟಾರ್ಟಿಕಾದಲ್ಲಿರುವ ಈ ಒಂದು ರಹಸ್ಯ ದ್ವಾರದ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಈ ಒಂದು ರಹಸ್ಯ ದ್ವಾರದ ಬಗ್ಗೆ ಹಲವು ಊಹಾಪೋಹಗಳು ತೆರೆದುಕೊಳ್ಳುತ್ತಿವೆ. ಹಿಮಾವೃತ ಪ್ರದೇಶದಲ್ಲಿ ಗೂಗಲ್ ಮ್ಯಾಪ್ನಲ್ಲಿ ಕಂಡು ಬಂದಿರುವ ಈ ರಹಸ್ಯ ದ್ವಾರ, ಬಂಕರ್ಗಳನ್ನು ತಲುಪಲು ಅಂತ ನಿರ್ಮಾಣವಾದ ರಹಸ್ಯ ರಸ್ತೆಯ ಮಹಾದ್ವಾರ ಎಂದು ಹೇಳಲಾಗುತ್ತಿದೆ. ಸ್ಯಾಟ್ಲೈಟ್ ಫೋಟೋದಲ್ಲಿ ಹಿಮಚ್ಛಾದಿತ ಪ್ರದೇಶದಲ್ಲಿ ಕಂಡು ಬಂದಿರುವ ದ್ವಾರದಂತಹ ಚಿತ್ರವನ್ನು ಕಂಡು ಜನರು ಇದು ಬಂಕರ್ಗೆ ಲಿಂಕ್ ಆಗುವ ರಹಸ್ಯಮಾರ್ಗದ ದ್ವಾರ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಭಾರತದ ಮೇಲೆ ಮತ್ತೆ ವಿಷ ಕಾರಿದ ಕೆನಡಾ; ವಿದೇಶಾಂಗ ಸಚಿವೆಯಿಂದ ದೊಡ್ಡ ಹೇಳಿಕೆ
ಆದರೆ ವಿದೇಶಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಇದೊಂದು ಮಂಜುಗಡ್ಡಯಷ್ಟೇ ಅದರ ಹಿಂದೆ ಯಾವ ರಹಸ್ಯವೂ ಇಲ್ಲ ಎಂದು ಹೇಳುತ್ತಿವೆ. ಸದ್ಯ ರಹಸ್ಯದ್ವಾರ ಎಂದು ಕರೆಯಲ್ಪಡುತ್ತಿರುವ ಆ ಒಂದು ಚಿತ್ರದಲ್ಲಿ ಇರುವುದು ಜಸ್ಟ್ ಒಂದು ಐಸ್ಬರ್ಗ್. ಬೃಹತ್ತ ಮಂಜುಗಡ್ಡೆ ಈಗ ಕರಗುತ್ತಿದೆ. ಇದರಿಂದಾಗಿಯೇ ಅದು ಒಂದು ದ್ವಾರದ ರೂಪ ಪಡೆದುಕೊಂಡಿದೆ. ಇದರ ಹಿಂದೆ ಬೇರಾವ ರಹಸ್ಯವೂ ಇಲ್ಲ ಎನ್ನುತ್ತಿದ್ದಾರೆ ತಜ್ಞರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ