newsfirstkannada.com

ಕಸದ ಬುಟ್ಟಿಯಲ್ಲಿದ್ದ ನಿಗೂಢ ವಸ್ತು ಸ್ಫೋಟ.. ರಾಮೇಶ್ವರಂ ಕೆಫೆಯಲ್ಲಿ ತಪ್ಪಿದೆ ದೊಡ್ಡ ಅನಾಹುತ

Share :

Published March 1, 2024 at 3:28pm

Update March 1, 2024 at 3:32pm

    ಸ್ಫೋಟಗೊಂಡ ವಸ್ತುವಿನ ಸ್ಯಾಂಪಲ್ ಕಲೆಕ್ಟ್ ಮಾಡುತ್ತಿರೋ FSL ಸಿಬ್ಬಂದಿ

    ಗಂಭೀರವಾಗಿ ಗಾಯಗೊಂಡವರು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು

    ಹ್ಯಾಂಡ್ ವಾಶ್ ಪಕ್ಕದಲ್ಲಿದ್ದ ಡಸ್ಟ್ ಬಿನ್​ನಲ್ಲಿ ಇಟ್ಟಿದ್ದ ವಸ್ತುವಿನಿಂದ ಸ್ಫೋಟ

ಬೆಂಗಳೂರು:  ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತುವಿನಿಂದಲೇ ಸ್ಫೋಟವಾಗಿರೋದು ಮೇಲ್ನೋಟಕ್ಕೆ ಖಚಿತವಾಗಿದೆ. ಆದರೆ ಪೊಲೀಸರ ಮಾಹಿತಿ ಪ್ರಕಾರ ರಾಮೇಶ್ವರಂ ಕೆಫೆಯಲ್ಲಿ ಯಾವುದೇ ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ. ಸ್ಫೋಟವಾಗ್ತಿದ್ದಂತೆ ಸಿಲಿಂಡರ್ ಬ್ಲಾಸ್ಟ್ ಆಗೋಯ್ತು ಎಂದು ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ.

ಇದನ್ನು ಓದಿ: ಇಂದಿರಾನಗರ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ.. ಐವರಿಗೆ ಗಂಭೀರ ಗಾಯ

ಇಂದಿರಾನಗರ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ರಾಮೇಶ್ವರಂ ಕೆಫೆ ಸೇರಿ ಸುತ್ತಮುತ್ತಲಿನ ಸಿಸಿಟಿವಿ ಡಿವಿಆರ್ ಅನ್ನು ವಶಕ್ಕೆ ಪಡೆದಕೊಂಡು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಖುದ್ದು ಡಿಸಿಪಿ ಶಿವಕುಮಾರ್ ಅವರು ಹಾಜರಿದ್ದು ಎಲ್ಲಾ ರೀತಿಯ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಸ್ಫೋಟಕ್ಕೆ ಯಾವ ರೀತಿಯ ವಸ್ತು ಬಳಸಿದ್ದಾರೆ ಎಂಬುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಫ್​ಎಸ್ಎಲ್ ಸಿಬ್ಬಂದಿ ಸ್ಫೋಟಗೊಂಡ ವಸ್ತುವಿನ ಸ್ಯಾಂಪಲ್ ಕಲೆಕ್ಟ್ ಮಾಡುತ್ತಿದ್ದಾರಂತೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಯಾವುದೇ ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ. ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಕೂಡ ಆಗಿಲ್ಲ ಅಂತಾ ಮಾಹಿತಿ ನೀಡಿದ್ದಾರೆ. ಆದರೆ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಆಗಿದ್ದಾದರೂ ಏನು ಎಂಬ ಪ್ರಶ್ನೆ ಎದುರಾಗಿದೆ. ಯಾರಾದರೂ ಸ್ಫೋಟಕ ವಸ್ತು ತಂದು ಬ್ಲಾಸ್ಟ್ ಮಾಡಿದ್ರಾ ಅನ್ನೊ ಆಯಾಮದಲ್ಲಿ ಪೊಲೀಸರ ತನಿಖೆ ಆರಂಭಿಸಿದ್ದಾರೆ. ಡಸ್ಟ್ ಬಿನ್​ನಲ್ಲಿ ಇಟ್ಟಿದ್ದ ವಸ್ತುವಿನಿಂದ ಸ್ಫೋಟ ಸಂಭವಿಸಿದೆ ಅಂತಾ ನ್ಯೂಸ್ ಫಸ್ಟ್​ಗೆ ಪೊಲೀಸ್ ಉನ್ನತ ಮೂಲಗಳ ಮಾಹಿತಿ ಬಂದಿದೆ. ಹ್ಯಾಂಡ್ ವಾಶ್ ಪಕ್ಕದಲ್ಲಿದ್ದ ಡಸ್ಟ್ ಬಿನ್​ನಲ್ಲಿ ಸ್ಫೋಟಕ ವಸ್ತುವನ್ನು ಇಡಲಾಗಿತ್ತಂತೆ. ಗಾಯಾಳುಗಳು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂತೆ. ಊಟಕ್ಕೆ ಅಂತ ರಾಮೇಶ್ವರಂ ಕೆಫೆಗೆ ಬಂದಿದ್ದರು. ಊಟ ಮುಗಿಸಿ ಹ್ಯಾಂಡ್ ವಾಶ್ ಮಾಡಲೇಂದು ಹೋಗಿದ್ದಾಗ ನಿಗೂಢ ವಸ್ತು ಏಕಾಏಕಿ ಸ್ಫೋಟಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಸದ ಬುಟ್ಟಿಯಲ್ಲಿದ್ದ ನಿಗೂಢ ವಸ್ತು ಸ್ಫೋಟ.. ರಾಮೇಶ್ವರಂ ಕೆಫೆಯಲ್ಲಿ ತಪ್ಪಿದೆ ದೊಡ್ಡ ಅನಾಹುತ

https://newsfirstlive.com/wp-content/uploads/2024/03/Rameshwaram-Cafe.jpg

Load More