2 ಸಿಟಿಯ ಬೀದಿ, ಬೀದಿಯಲ್ಲೂ ರಾರಾಜಿಸಿದ ‘Sorry Bubu’ ಪೋಸ್ಟರ್.. ಏನಿದರ ಅರ್ಥ? ಕಾರಣವೇನು?

author-image
Gopal Kulkarni
Updated On
2 ಸಿಟಿಯ ಬೀದಿ, ಬೀದಿಯಲ್ಲೂ ರಾರಾಜಿಸಿದ ‘Sorry Bubu’ ಪೋಸ್ಟರ್.. ಏನಿದರ ಅರ್ಥ? ಕಾರಣವೇನು?
Advertisment
  • ನೋಯ್ಡಾದಿಂದ ಮೀರತ್​ವರೆಗೂ ರಾರಾಜಿಸಿದ ಒಂದು ಪೋಸ್ಟರ್​
  • ಯಾರು, ಯಾರಿಗೆ ಬರೆದಿದ್ದು ಎಂಬುದೇ ಗೊತ್ತಿಲ್ಲ, ಜನರಲ್ಲಿ ಆಶ್ಚರ್ಯ
  • ಮೆಟ್ರೋ ನಿಲ್ದಾಣ ಬಳಿಯೇ ಸುಮಾರು 30 ರಿಂದ 40 ಪೋಸ್ಟರ್​ಗಳು

ನೋಯ್ಡಾ ಮತ್ತು ಮೀರತ್​ ನಡುವೆ ಒಂದು ವಿಚಿತ್ರ ಘಟನೆ ನಡೆದಿದೆ. ಎರಡು ನಗರಗಳ ಜನರು ಇಂತಹದೊಂದು ವೈಚಿತ್ರ್ಯವನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. Sorry Bubu ಎಂದು ಬರೆದ ಒಂದು ವಿಚಿತ್ರ ಪೋಸ್ಟರ್ ಈ ಎರಡು ನಗರದ ಬೀದಿ ಬೀದಿಗಳಲ್ಲಿ ಕಂಡುಬರುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಈ ಪೋಸ್ಟರ್​ಗಳು ರಾರಾಜಿಸುತ್ತಿವೆ. ಈ ಒಂದು ಪೋಸ್ಟ್ ನೋಡಿದವರು ಯಾರು ಯಾರಿಗೆ ಸಾರಿ ಕೇಳುತ್ತಿದ್ದಾರೆ ಮತ್ತು ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ಒಂದು ವೇಳೆ Babu ಎಂಬ ಶಬ್ದ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿ Bubu ಎಂದಾಗಿದೆಯಾ ಎನ್ನುವ ಅನುಮಾನಗಳು ಕಾಡುತ್ತಿವೆ. ಅದು ಮಾತ್ರವಲ್ಲ ಈ ಪೋಸ್ಟ್ ಅಂಟಿಸಿದ್ದು ಯಾರು ಎಂಬುದು ಇನ್ನೂ ಕೂಡ ನಿಗೂಢವಾಗಿಯೇ ಉಳಿದಿದೆ.

ನೋಯ್ಡಾದ ಬೊಟಾನಿಕ್ ಗಾರ್ಡನ್ ಮೆಟ್ರೋ ನಿಲ್ದಾಣದ ಬಳಿಯೆ ಸುಮಾರು 30 ರಿಂದ 40ರಷ್ಟು ಪೋಸ್ಟರ್​ಗಳು ಕಾಣಿಸಿಕೊಂಡಿವೆ. ಸದ್ಯ ಈ ಪೋಸ್ಟರ್​​ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಕೂಡ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು ಯಾರೋ ಚೇಷ್ಟೆ ಮಾಡಲು ಈ ಕೆಲಸವನ್ನು ಮಾಡಿರಬಹುದು ಎಂದು ಅನುಮಾನಿಸಿದ್ದು, ತನಿಖೆಯನ್ನು ಜಾರಿಯಲ್ಲಿಟ್ಟಿದ್ದಾರೆ.

ಇದನ್ನೂ ಓದಿ:ಭಾರತದ ಈ ಒಂದು ರಾಜ್ಯದಲ್ಲಿ ನಿಮಗೆ ಶ್ವಾನ ಮತ್ತು ಹಾವುಗಳು ಕಾಣುವುದೇ ಇಲ್ಲ? ಯಾವುದು? ಕಾರಣವೇನು?

ಇನ್ನೂ ಒಂದು ಆಶ್ಚರ್ಯವೆಂದರೆ Sorry Bubu ಎಂಬ ಶಬ್ದ ಬಿಟ್ಟರೆ ಆ ಪೋಸ್ಟರ್​ನಲ್ಲಿ ಎರಡು ಕಾರ್ಟೂನ್​ಗಳಿವೆ ಅಷ್ಟೇ. ಅದು ಬಿಟ್ಟರೆ ಬೇರೆ ಏನು ಇಲ್ಲ. ಹೀಗಾಗಿ ಇದು ಏನು, ನಿಜಕ್ಕೂ ಸ್ಪೆಲ್ಲಿಂಗ್​ ಮಿಸ್ಟೇಕ್ ಆಗಿದೆಯಾ ಎಂಬುದು ಕೂಡ ಇನ್ನೂ ಗೊಂದಲದಲ್ಲಿದೆ. ಇವೆಲ್ಲವೂ ಕೂಡ ಪೊಲೀಸರ ತನಿಖೆಗೆ ಅಡ್ಡಿಯಾಗಿ ನಿಂತಿವೆ.


">January 29, 2025

ಇದೇ ರೀತಿಯ ಪೋಸ್ಟರ್​ಗಳು ಮೀರತ್​ನ ಗಂಗಾ ನಗರದಲ್ಲಿಯೂ ಕೂಡ ಕಾಣಿಸಿಕೊಂಡಿವೆ. ಯುವತಿಯೊಬ್ಬಳು ಹಲವು ಕಡೆ ಅಂಟಿಸಿದ ಈ ಫೋಟೋಗಳ ವಿಡಿಯೋ ತೆಗೆದುಕೊಂಡಿದ್ದಾಳೆ. ನಂತರ ಅದನ್ನು ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾಳೆ. ಇನ್ನು ಪೊಲೀಸರು ಈಗಾಗಲೇ ಹೇಳಿದಂತೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ನಗರದ ಹಲವು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಪೊಲೀಸರು ಈ ಪೋಸ್ಟರ್ ಅಂಟಿಸಿದ ಪ್ರಕರಣದಲ್ಲಿ ಒಬ್ಬನನ್ನು ಗುರುತಿಸಿದ್ದಾರಂತೆ. ಅದು ಯಾರು ಎಂಬುದು ಇನ್ನೂ ಕೂಡ ಸ್ಪಷ್ಟವಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment