newsfirstkannada.com

ಕಳೆದು ಹೋಗಿದ್ದ ವಾಯುಪಡೆಯ ವಿಮಾನದ ರಹಸ್ಯ ಅಂತ್ಯ; 8 ವರ್ಷಗಳ ಬಳಿಕ ಅವಶೇಷಗಳು ಪತ್ತೆ..!

Share :

Published January 13, 2024 at 9:09am

    2016 ಜುಲೈ 22 ರಂದು AN-32 ವಿಮಾನ ನಾಪತ್ತೆ

    ಟೇಕ್ ಆಫ್ ಆಗಿ 16 ನಿಮಿಷಕ್ಕೆ ಕಾಣೆಯಾಗಿತ್ತು

    8 ನಾಗರಿಕರು ಸೇರಿ 29 ಮಂದಿ ವಿಮಾನದಲ್ಲಿದ್ದರು

8 ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ಏರ್​ಫೋರ್ಸ್​ ವಿಮಾನದ ಅವಶೇಷಗಳು ಈಗ ಪತ್ತೆಯಾಗಿದೆ. 2016ರ ಜುಲೈ 22ರ ಬೆಳಗ್ಗೆ AN-32 ವಿಮಾನ (Air Force’s An-32) 29 ಸಿಬ್ಬಂದಿಯನ್ನ ಹೊತ್ತು ಚೆನ್ನೈನಿಂದ ಪೋರ್ಟ್ ಬ್ಲೇರ್​ಗೆ ಹೊರಟಿತ್ತು.

ಬೆಂಗಾಳಕೊಲ್ಲಿಯಲ್ಲಿ ಹಾರಾಟ ಆರಂಭವಾದ ಕೆಲವೇ ಹೊತ್ತಿನಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಶೋಧ ಕಾರ್ಯ ನಡೆಸಿದ್ರೂ, ಈ ವಿಮಾನದ ಸಣ್ಣ ಮಾಹಿತಿ ಕೂಡ ಲಭ್ಯವಾಗಿರಲಿಲ್ಲ. ವಿಮಾನದಲ್ಲಿದ್ದ 29 ಮಂದಿ ಸಾವನ್ನಪ್ಪಿದ್ದಾರೆ ಎಂದು ದೃಢ ಪಡಿಸಲಾಗಿತ್ತು. 8 ವರ್ಷಗಳ ಬಳಿಕ ವಿಮಾನದ ಅವಶೇಷಗಳು ಚೆನ್ನೈನ ಕರಾವಳಿ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಇಂಡಿಯನ್​ ಏರ್​ಫೋರ್ಸ್​ ಮಾಹಿತಿ ನೀಡಿದೆ.

ಅಟೊನೊಮಸ್ ಯುಟಿಲಿಟಿ ವೆಹಿಕಲ್ (AUV) ನಾಪತ್ತೆಯಾಗಿದ್ದ ವಿಮಾನಕ್ಕಾಗಿ ಆಳ ಸಮುದ್ರದಲ್ಲಿ ಭಾರೀ ಹುಡುಕಾಟ ನಡೆಸಿತ್ತು. ಆದರೆ ಎಲ್ಲಿಯೂ ಕೂಡ ಪತ್ತೆಯಾಗಿರಲಿಲ್ಲ. ಇದೀಗ ಚೆನ್ನೈ ಕರಾವಳಿ ಪ್ರದೇಶದಿಂದ 310 ಕಿಲೋ ಮೀಟರ್ ದೂರದಲ್ಲಿ ಅದರ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಿದೆ.

ಜುಲೈ 22, 2016ರಲ್ಲಿ ಏನಾಗಿತ್ತು..?

An-32 ಟ್ರಾನ್ಸ್​ಪೋರ್ಟ್ ವಿಮಾನವು ತಂಬರನ್ ಏರ್​​ಬೇಸ್​ನಿಂದ ಬೆಳಗ್ಗೆ 8.30ಕ್ಕೆ ಹೊರಟಿತ್ತು. ಅದರು ಅಂಡಮನ್ ಅಂಡ್ ನಿಕೊಬಾರ್​​ ಪೋರ್ಟ್​ ಬ್ಲೈರ್ ನಿಲ್ದಾಣದಲ್ಲಿ ಬೆಳಗ್ಗೆ 11.45ಕ್ಕೆ ಲ್ಯಾಂಡ್ ಆಗಬೇಕಿತ್ತು. ವಿಮಾನದಲ್ಲಿ 8 ನಾಗರಿಕರು ಸೇರಿ ಒಟ್ಟು 29 ಮಂದಿ ಇದ್ದರು.

ಟೇಕ್ ಆಫ್ ಆದ 16 ನಿಮಿಷಗಳ ವರೆಗೆ ರಡಾರ್ ಸಂಪರ್ಕದಲ್ಲಿತ್ತು. ಈ ಸಮಯದಲ್ಲಿ ಪ್ರಯಾಣಿಕರ ಜರ್ನಿ ನಾರ್ಮಲ್ ಆಗಿಯೇ ಇತ್ತು. ಚೆನ್ನೈ ಕರಾವಳಿಯಿಂದ 280 ಕಿಲೋ ಮೀಟರ್ ದೂರ ಹೋಗ್ತಿದ್ದಂತೆ 23000 ಫೀಟ್​ ಎತ್ತರದಲ್ಲಿದ್ದ ವಿಮಾನವು ಬೆಳಗ್ಗೆ 9.12ಕ್ಕೆ ಸಂಪರ್ಕವನ್ನು ಕಳೆದುಕೊಂಡಿತ್ತು. 8 ವರ್ಷಗಳ ಬಳಿಕ ನಾಪತ್ತೆಯಾಗಿದ್ದ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಇಂಡಿಯನ್ ಏರ್​ಫೋರ್ಸ್​ ಹಾಗೂ ನೌಕಾಸೇನೆ ಮತ್ತು ಮೀನುಗಾರರಿಂದ ಜಂಟಿಯಾಗಿ ಶೋಧಕಾರ್ಯ ನಡೆದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳೆದು ಹೋಗಿದ್ದ ವಾಯುಪಡೆಯ ವಿಮಾನದ ರಹಸ್ಯ ಅಂತ್ಯ; 8 ವರ್ಷಗಳ ಬಳಿಕ ಅವಶೇಷಗಳು ಪತ್ತೆ..!

https://newsfirstlive.com/wp-content/uploads/2024/01/Air-Force-Plane.jpg

Load More