ಚಿಕ್ಕಮಗಳೂರು ಒಂಟಿ ಕಾಲು ಪತ್ತೆ ಕೇಸ್​ನ ರಹಸ್ಯ ಬಯಲು.. ಥ್ರಿಲ್ಲಿಂಗ್ ಕ್ರೈಂ ಇನ್ವೆಸ್ಟಿಗೇಷನ್ ಸ್ಟೋರಿ..

author-image
Ganesh
Updated On
ಚಿಕ್ಕಮಗಳೂರು ಒಂಟಿ ಕಾಲು ಪತ್ತೆ ಕೇಸ್​ನ ರಹಸ್ಯ ಬಯಲು.. ಥ್ರಿಲ್ಲಿಂಗ್ ಕ್ರೈಂ ಇನ್ವೆಸ್ಟಿಗೇಷನ್ ಸ್ಟೋರಿ..
Advertisment
  • ಮಿಸ್ಸಿಂಗ್ ಕಂಪ್ಲೆಂಟ್ ಅನುಮಾನ.. ಬಯಲಾಯ್ತು ಅಸಲಿ ಕಥೆ
  • ಕಡೂರು ಠಾಣೆಯಲ್ಲಿ ಜೂನ್ 2ರಂದು ಸುಬ್ರಮಣ್ಯ ನಾಪತ್ತೆ ಕೇಸ್
  • ಪತಿಯದ್ದೇ ಮೃತದೇಹ ಎಂದು ಕಂಡು ಹಿಡಿದಿದ್ದ ಪತ್ನಿ, ಆಮೇಲೆ ಏನಾಯ್ತು?

ಚಿಕ್ಕಮಗಳೂರನ್ನೇ ಬೆಚ್ಚಿ ಬೀಳಿಸಿದ್ದ ಒಂಟಿ ಕಾಲು ಪತ್ತೆ ಕೇಸ್​ನ ರಹಸ್ಯ ಕೊನೆಗೂ ಬಯಲಾಗಿದೆ. ಸಿನಿಮೀಯ ರೀತಿ ಪ್ರಕರಣ ಬೇಧಿಸಿರೋ ಪೊಲೀಸರು ಬಯಲು ಮಾಡಿದ್ದು ವ್ಯಾಮೋಹದ ಕಥೆಯನ್ನ.. ಅಕ್ರಮ ಸಂಬಂಧದ ಆಟಕ್ಕೆ ಬೆಂಕಿಯಲ್ಲಿ ಬೆಂದಿದ್ದು ಗಂಡ.. ಇದು ಮಲೆನಾಡಿನ ಥ್ರಿಲ್ಲಿಂಗ್ ಕ್ರೈಂ ಇನ್ವೆಸ್ಟಿಗೇಷನ್ ಸ್ಟೋರಿ.

ಜೂನ್ 2 ರಂದು ಕಡೂರಿನ ರೇಲ್ವೇ ಟ್ರ್ಯಾಕ್​​ನಲ್ಲಿ ಸುಟ್ಟ ಸ್ಥಿತಿಯ ಮನುಷ್ಯನ ಬಲಗಾಲು ಪತ್ತೆಯಾಗಿತ್ತು. ಈ ಪ್ರಕರಣವು ಇಡಿ ಚಿಕ್ಕಮಗಳೂರನ್ನ ಬೆಚ್ಚಿ ಬೀಳಿಸಿತ್ತು. ಇದೀಗ ಈ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ. ಬಲಗಾಲು ಸಿಕ್ಕಿದೆ.. ಮೃತದೇಹದ ಉಳಿದ ಭಾಗ ಎಲ್ಲಿ ಅಂತಾ ಹುಡುಕ್ತಿದ್ದ ಪೊಲೀಸರಿಗೆ ಕಂಸಸಾಗರ ಸಮೀಪ ನಿರ್ಜನ ಪ್ರದೇಶದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದ್ದ ಮೃತದೇಹ ಸಿಕ್ಕಿತ್ತು. ಈ ಪ್ರಕರಣದ​ ತನಿಖೆಗಿಳಿದ ಪೊಲೀಸರು 2 ಟೀಂ ಮಾಡ್ಕೊಂಡು ಅಖಾಡಕ್ಕೆ ಇಳಿದಿದ್ರು. ಆಗ ನೆನೆಪಾಗಿದ್ದೇ ಜೂನ್ 2ರ ಮಿಸ್ಸಿಂಗ್ ಕಂಪ್ಲೆಂಟ್.

ಇದನ್ನೂ ಓದಿ: ಕಾಲ್ತುಳಿತದಲ್ಲಿ RCB ಅಭಿಮಾನಿ ನಿಧನ.. ಮೊಮ್ಮಗನ ಅಗಲಿಕೆ ನೋವಿನಲ್ಲಿದ್ದ ಅಜ್ಜಿಯೂ ಕೊನೆಯುಸಿರು

publive-image

ಮಿಸ್ಸಿಂಗ್ ಟು ಮರ್ಡರ್

ಕಡೂರು ಪೊಲೀಸ್ ಠಾಣೆಯಲ್ಲೇ ಜೂನ್ 2ರಂದು ಸುಬ್ರಮಣ್ಯ ಅನ್ನೋರು ನಾಪತ್ತೆ ಆಗಿದ್ದಾರೆ ಅಂತಾ ಪ್ರಕರಣ ದಾಖಲಾಗಿತ್ತು. ಅದೇ ದಿನ ಮೃತದೇಹ ಸಿಕ್ಕಿದ್ರಿಂದ ಪೊಲೀಸರು ವೆರಿಫೀಕೇಷನ್​ಗೆ ಮುಂದಾಗಿದ್ರು. ದೂರು ನೀಡಿದ್ದ ಸುಬ್ರಮಣ್ಯ ಪತ್ನಿಗೆ ಮೃತದೇಹ ತೋರಿಸಿದ್ದಾರೆ. ಪೊಲೀಸರ ಅನುಮಾನ ಸತ್ಯವಾಗಿತ್ತು. ಇದು ನನ್ನ ಪತಿಯದ್ದೇ ಅಂತಾ ಪತ್ನಿ ಕಂಡು ಹಿಡಿದಿದ್ರು. ಮೃತಪಟ್ಟಿದ್ದು ಸುಬ್ರಮಣ್ಯ ಅನ್ನೋದು ಗೊತ್ತಾಯ್ತು, ಆದ್ರೆ ಕೊಲೆ ಮಾಡಿದ್ದು ಯಾರು ಅನ್ನೋದು ಗೊತ್ತಾಗಿರಲಿಲ್ಲ. ಆಗ ಸಿಕ್ಕಿದ್ದು 8 ತಿಂಗಳ ಹಿಂದಿನ ಸುಳಿವು, ಆ ಸುಳಿವು ಕೊಟ್ಟಿದ್ದು ಸುಬ್ರಮಣ್ಯ ಪತ್ನಿ. ಕೇಳಿ ಬಂದ ಹೆಸರು ಪ್ರದೀಪ್.. ಈತನೇ ಕಿಲ್ಲರ್.

ಇದನ್ನೂ ಓದಿ: ಹನಿಮೂನ್​​ಗೆ ಬಂದ ಜೋಡಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​.. ಭಾರೀ ಸಂಚಲನ ಸೃಷ್ಟಿಸಿದ್ದ ಕೇಸ್​ಗೆ ಪತ್ನಿಯೇ ವಿಲನ್..!

publive-image

ಕಿಲ್ಲರ್ ಪ್ರದೀಪನ ಅಕ್ರಮ ಸಂಬಂಧ!

ಪ್ರದೀಪ್.. ಈತ ಸುಬ್ರಮಣ್ಯ ಮನೆಯನ್ನ ಕಟ್ಟಿಕೊಡಲು ಕಾಂಟ್ರ್ಯಾಕ್ಟ್ ವಹಿಸಿಕೊಂಡಿದ್ದ. ಈ ಗ್ಯಾಪ್​ನಲ್ಲಿ ಸುಬ್ರಮಣ್ಯ ಪತ್ನಿಯೊಂದಿಗೆ ಪ್ರದೀಪ್ ಅಕ್ರಮ ಸಂಬಂಧ ಬೆಳೆಸಿದ್ದ. ಇದು ಸುಬ್ರಮಣ್ಯ ಗಮನಕ್ಕೆ ಬರ್ತಿದ್ದಂತೆ ಸುಮಾರು 8 ತಿಂಗಳ ಹಿಂದೆ ವಾರ್ನಿಂಗ್ ಕೊಟ್ಟಿದ್ರು. ಬಳಿಕ ಪ್ರದೀಪ್ ಅಕ್ರಮ ಸಂಬಂಧಕ್ಕೂ ಬ್ರೇಕ್ ಬಿದ್ದಿತ್ತು. ಅದೇ ದ್ವೇಷ ಇಟ್ಕೊಂಡಿದ್ದ ಪ್ರದೀಪ್ ಜೂನ್ 2 ರಂದು ಸುಬ್ರಮಣ್ಯರನ್ನ ಓಮಿನಿ ಕಾರಿನಲ್ಲಿ ಕರೆದೊಯ್ದು ಕೊಲೆ ಮಾಡಿ ನಂತರ ಮೃತದೇಹವನ್ನ ಸುಟ್ಟು ಹಾಕಿರೋದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಬಾ ನಲ್ಲ ಮಧುಚಂದ್ರಕೆ.. ಮೇಘಾಲಯ ಹನಿಮೂನ್ ಹ*ತ್ಯೆ ಕೇಸ್‌ನ ಇಂಚಿಂಚೂ ಮಾಹಿತಿ ಬಹಿರಂಗ

publive-image

ಬಾಡಿನೇ ಸುಟ್ಟು ಹಾಕಿದ್ದೀನಿ ನಾನು ಸಿಗಲ್ಲ ಅಂತಾ ಪ್ರದೀಪ್ ಆರಾಮಾಗಿದ್ದ. ಆದ್ರೆ ಯಾವುದೋ ಪ್ರಾಣಿ ಸುಟ್ಟು ಹೋಗಿದ್ದ ಕಾಲಿನ ಭಾಗವನ್ನ ರೇಲ್ವೇ ನಿಲ್ದಾಣದ ಬಳಿ ಎಳೆದು ತಂದಿಟ್ಟಿದೆ. ಅದೊಂದು ಕಾಲಿನಿಂದ ಇಡೀ ಕೊಲೆ ಕಹಾನಿ ರಿವೀಲ್ ಆಗಿದೆ. ಸದ್ಯ ಪೊಲೀಸರು ಪ್ರದೀಪ್​ನನ್ನ ಬಂಧಿಸಿದ್ದಾರೆ. ಈತನ ಕೃತ್ಯಕ್ಕೆ ಸಹಕಾರ ನೀಡಿದ್ದ ಸಿದ್ದೇಶ್, ವಿಶ್ವಾಸ್ ಕೈಗೂ ಕೋಳ ಬಿದ್ದಿದೆ.
ಒಟ್ನಲ್ಲಿ ಚಿಕ್ಕಮಗಳೂರಿನ ಬೆಚ್ಚಿಬೀಳಿಸಿದ್ದ ಒಂಟಿಕಾಲಿನ ಮಿಸ್ಟ್ರಿ ಬಯಲು ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದೇಹಕ್ಕೆ ಬೆಂಕಿ ಇಟ್ಟು ಬಚಾವಾಗಬಹುದು ಅನ್ಕೊಂಡಿದ್ದವರ ಬದುಕು ಕಂಬಿ ಹಿಂದೆ ಕಳೆಯುವಂತಾಗಿದೆ. ಈ ಮೂಲಕ ಮಲೆನಾಡಿನ ಥ್ರಿಲ್ಲಿಂಗ್ ಕ್ರೈಂ ಇನ್ವಿಸ್ಟಿಗೇಷನ್ ಸ್ಟೋರಿ ಅಂತ್ಯಕಂಡಿದೆ.

ವಿಶೇಷ ವರದಿ: ಮಹಾರುದ್ರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment