newsfirstkannada.com

Mysugar: 40 ಕೋಟಿ ರೂಪಾಯಿ ವಿದ್ಯುತ್​ ಬಿಲ್​ ಬಾಕಿ.. ಮತ್ತೆ ಕದ ತೆರೆಯಲು ಸರ್ಕಾರಕ್ಕೆ ಮನವಿ

Share :

Published June 29, 2023 at 8:26am

  ಒಂದಲ್ಲಾ, ಎರಡಲ್ಲಾ ಬರೋಬ್ಬರಿ 40 ಕೋಟಿ ವಿದ್ಯುತ್​ ಬಿಲ್​ ಬಾಕಿ

  ರಾಜ್ಯದ ಏಕೈಕ ಸರ್ಕಾರಿ ಶುಗರ್ ಫ್ಯಾಕ್ಟರಿ ಪ್ರಾರಂಭಕ್ಕೆ ಮನವಿ

  ಇಂಧನ ಸಚಿವರಿಗೆ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಪತ್ರ

ಮಂಡ್ಯ:  ಮೈಶುಗರ್ ಕಾರ್ಖಾನೆ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 40 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ.

ಅಂದಹಾಗೆಯೇ, ಮೈಶುಗರ್​ ಕಾರ್ಖಾನೆ ರಾಜ್ಯದ ಏಕೈಕ ಸರ್ಕಾರಿ ಶುಗರ್ ಫ್ಯಾಕ್ಟರಿ ಆಗಿದ್ದು, ಆಡಳಿತ ಮಂಡಳಿ 2000 ಇಸವಿಯಿಂದಲು ಕರೆಂಟ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿತ್ತು. ಇದೀಗ ಕಾರ್ಖಾನೆ ಆರಂಭಕ್ಕೆ ವಿದ್ಯುತ್ ಸರಬರಾಜು ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಬಾಕಿ ಉಳಿಸಿಕೊಂಡಿರುವ ವಿದ್ಯುತ್​ ಬಿಲ್​ ಮೊತ್ತ ಬಯಲಾಗಿದೆ.

40 ಕೋಟಿ ರೂಪಾಯಿ ವಿದ್ಯುತ್​ ಬಿಲ್

ಮೈಶುಗರ್​ ಕಾರ್ಖಾನೆ ರೋಗಗ್ರಸ್ಥ ಕಾರ್ಖಾನೆ ಎಂದೆ ಬಿಂಬಿಸಿಕೊಂಡಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಈ ಕಾರ್ಖಾನೆ ಆರಂಭಕ್ಕೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಟನ್ ಕಬ್ಬನ್ನು ನುರಿಯುವ ಗುರಿಯನ್ನು ಈ ಕಾರ್ಖಾನೆ ಹೊಂದಿದೆ. ಆದರೆ ಇದರ ನಡುವೆ ಬಾಕಿ ಉಳಿಸಿಕೊಂಡಿರುವ 40 ಕೋಟಿ ರೂಪಾಯಿ ವಿದ್ಯುತ್​ ಬಿಲ್​ ಮೊತ್ತ ಬೆಳಕಿಗೆ ಬಂದಿದೆ.

ಇಂಧನ ಸಚಿವರಿಗೆ ಪತ್ರ

ಮೈಶುಗರ್​ ಕಾರ್ಖಾನೆ  ಮತ್ತೆ ಆರಂಭ ಮಾಡಬೇಕಾದರೆ ವಿದ್ಯುತ್ ಸರಬರಾಜು ಅವಶ್ಯಕವಾಗಿದೆ. ಹೀಗಾಗಿ ಎಂಎಲ್​ಸಿ ಗೂಳಿಗೌಡ ವಿದ್ಯುತ್ ಪೂರೈಕೆ ಮಾಡುವಂತೆ ಇಂಧನ ಸಚಿವರಿಗೆ ಪತ್ರ ಬರೆದಿದ್ದಾರೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ. ಮನವಿ ಪತ್ರದಲ್ಲಿ ಈ ವರ್ಷ ರೈತರ ಕಬ್ಬು ಅರೆಯಲು ರೈತರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ವಿದ್ಯುತ್ ಸರಬರಾಜಿಗಾಗಿ ಪತ್ರ

ಮೈಶುಗರ್ ಹಲವು ವರ್ಷದಿಂದ ನಷ್ಟಕ್ಕೆ ಸಿಲುಕಿ 40.86 ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದೆ. ಪ್ರಸಕ್ತ ಹಂಗಾಮಿನಲ್ಲಿ ಕಬ್ಬನ್ನು ನುರಿಯಲು ಅವಶ್ಯವಿರುವ ವಿದ್ಯುತ್ ಸರಬರಾಜು ಮಾಡಿ. ಹಂತ ಹಂತವಾಗಿ ಬಾಕಿ ಮೊತ್ತ ಪಾವತಿಸಲಾಗುತ್ತೆ ಎಂದು ಚೆಸ್ಕಾಂ ನಿರ್ದೇಶಕರಿಗೆ ವಿದ್ಯುತ್ ಪೂರೈಸಲು ಆದೇಶಿಸುವಂತೆ ಮನವಿ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mysugar: 40 ಕೋಟಿ ರೂಪಾಯಿ ವಿದ್ಯುತ್​ ಬಿಲ್​ ಬಾಕಿ.. ಮತ್ತೆ ಕದ ತೆರೆಯಲು ಸರ್ಕಾರಕ್ಕೆ ಮನವಿ

https://newsfirstlive.com/wp-content/uploads/2023/06/K-J-george.jpg

Load More