/newsfirstlive-kannada/media/post_attachments/wp-content/uploads/2024/06/ashwathama.jpg)
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆನೆ ಅರ್ಜುನ ಸಾವಿನ ಆಘಾತದ ಬೆನ್ನಲ್ಲೇ ಮತ್ತೊಂದು ಆನೆ ಅಶ್ವತ್ಥಾಮ ಕೂಡ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 38 ವರ್ಷದ ಅಶ್ವತ್ಥಾಮ ಆನೆಯು ಮೈಸೂರಿನಲ್ಲಿ ಸೋಲಾರ್ ಬೇಲಿಯ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದೆ.
ಇದನ್ನೂ ಓದಿ: ‘ದರ್ಶನ್ಗೆ ಯಾವುದೇ ತೊಂದರೆ ಆಗಲ್ಲ, ಯಾಕೆಂದರೆ..’ ಪ್ರಕರಣದ ಬಗ್ಗೆ ವಕೀಲರು ಹೇಳಿದ್ದೇನು?
ಜಿಲ್ಲೆಯ ಹುಣಸೂರು- ಪಿರಿಯಾಪಟ್ಟಣ ತಾಲ್ಲೂಕಿನ ಗಡಿ ಭಾಗದ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಆನೆಯು ಆಹಾರ ಅರಸಿ ಕಾಡಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಸೋಲಾರ್ ಬೇಲಿ ಮೇಲೆ ವಿದ್ಯುತ್ ತಂತಿ ಬಿದ್ದಿದ್ದರಿಂದ ಅಶ್ವತ್ಥಾಮ ಆನೆ ಮೃತಪಟ್ಟಿದೆ ಎಂದು ಹೇಳಲಾಗಿದೆ. ಕಾಡಾನೆ ದಾಳಿ ತಡೆಯಲು ಆನೆ ಶಿಬಿರದ ಸುತ್ತ ಸೋಲಾರ್ ಬೇಲಿ ಹಾಕಿಸಿರುವ ಅರಣ್ಯ ಇಲಾಖೆ.
ಸೋಲಾರ್ ತಂತಿ ತಗುಲಿದರೂ ಆನೆ ಸಾಯಲ್ಲ. ಆದರೆ ವಿದ್ಯುತ್ ಸ್ಪರ್ಶದಿಂದ ಅಶ್ವತ್ಥಾಮ ಮೃತಪಟ್ಟಿರುವ ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಶ್ವತ್ಥಾಮ ಆನೆ 2017ರಲ್ಲಿ ಸಕಲೇಶಪುರ ಬಳಿ ಸೆರೆ ಹಿಡಿಯಲಾಗಿತ್ತು. ಅಶ್ವತ್ಥಾಮ ಆನೆ 2021ರಲ್ಲಿ ದಸರಾಕ್ಕೆ ಬಂದಿದ್ದ. ಭವಿಷ್ಯದಲ್ಲಿ ದಸರಾದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುವ ಭರವಸೆ ಮೂಡಿಸಿತ್ತು. ಹುಲಿ, ಆನೆ, ಚಿರತೆ ಸೆರೆ ಕಾರ್ಯಾಚರಣೆಗಳಲ್ಲೂ ಭಾಗಿಯಾಗಿತ್ತು. ಇತ್ತೀಚೆಗೆ ಅಶ್ವತ್ಥಾಮ ರಾಮನಗರ ಜಿಲ್ಲೆಯ ಆನೆ ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ