/newsfirstlive-kannada/media/post_attachments/wp-content/uploads/2025/05/mysore-palace.jpg)
ಮೈಸೂರು: ನಿನ್ನೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಮೈಸೂರಿನ ಪ್ರವಾಸಿ ತಾಣಗಳನ್ನ ಉಡೀಸ್ ಮಾಡುವುದಾಗಿ ಇ- ಮೇಲ್ ಬಂದಿದೆ. ಪಹಲ್ಗಾಮ್ ಭಯೋತ್ಪಾದಕರ ದಾಳಿ ನಂತರ, ದೇಶದ ಪ್ರವಾಸಿ ತಾಣಗಳಲ್ಲಿ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಅಂತೆಯೇ, ಮೈಸೂರು ಪ್ರವಾಸಿ ಸ್ಥಳಗಳಿಗೂ ಗುಪ್ತಚರ ಇಲಾಖೆ ಮೊದಲೇ ಭದ್ರತೆ ಬಗ್ಗೆ ಸೂಚನೆ ನೀಡಿತ್ತು. ಆದರೆ, ಪೊಲೀಸ್ ಆಯುಕ್ತರ ಕಚೇರಿಗೆ ಮೇಲ್ ಬಂದಿರೋದು ಮತ್ತಷ್ಟು ಆತಂಕಕ್ಕೆ ತಳ್ಳಿದೆ.
ಇದನ್ನೂ ಓದಿ: ಪಾಕ್ನ ಬಣ್ಣ ಬಯಲು ಮಾಡಿದ NIA.. ಪಹಲ್ಗಾಮ್ ದಾಳಿ ತನಿಖೆಗೆ ಹೊಸ ತಿರುವು..!
ಇದರಿಂದ ಎಚ್ಚೆತ್ತ ಪೊಲೀಸರು, ಮೈಸೂರಿಗೆ ಬಂದು ಹೋಗುವ ಪ್ರವಾಸಿಗರ ಮೇಲೆ ಎಚ್ಚರಿಕೆಯ ಕಣ್ಣಿಟ್ಟಿದ್ದಾರೆ. ಹೀಗಾಗಿ ಹೋಟೆಲ್, ಕೊಠಡಿಗಳಲ್ಲಿ ರೂಮ್ ಬಾಡಿಗೆ ಪಡೆಯುವವರ ಮೇಲೆ ನಿಗಾ ಇಟ್ಟಿದ್ದಾರೆ. ಅಲ್ಲದೇ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಸಂತ ಫಿಲೋಮಿನಾ ಚರ್ಚ್, ಬೃಂದಾವನಕ್ಕೆ ಭದ್ರತೆ ಕಲ್ಪಿಸಲಾಗಿದ್ದು, ಶ್ವಾನದಳ, ಬಾಂಬ್ ಪತ್ತೆ ದಳದಿಂದ ನಿರಂತರ ತಪಾಸಣೆ ನಡೆಸಲಾಗ್ತಿದೆ.
ಇನ್ನು, ಬಾಡಿಗೆ ಮನೆ ಪಡೆಯುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಯಾವುದೇ ವ್ಯಕ್ತಿ ಮೇಲೆ ಅನುಮಾನ ಕಂಡುಬಂದರೆ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಿದ್ದಾರೆ. ಇ-ಮೇಲ್ ಬೆದರಿಕೆ ಕರೆ ಬೆನ್ನಲ್ಲೆ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಮೈಸೂರಿನ ರಿಂಗ್ ರಸ್ತೆಗಳಲ್ಲಿ ನಾಕಾ ಬಂದಿ ಹಾಕಲಾಗಿದೆ. ಪೊಲೀಸರು ಅನುಮಾನಾಸ್ಪದ ವ್ಯಕ್ತಿ ಹಾಗೂ ವಸ್ತುಗಳ, ಆಧಾರ್ ಕಾರ್ಡ್ಗಳ ತೀವ್ರ ತಪಾಸಣೆ ನಡೆಸ್ತಿದ್ದಾರೆ. ಮೈಸೂರಿನ ರಸ್ತೆಗಳಲ್ಲಿ ಕಮಿಷನರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಂಚರಿಸಿ ಸಾರ್ವಜನಿಕರಿಗೆ ನಿಮ್ಮ ಜೊತೆ ನಾವಿದ್ದೀವಿ ಎಂದು ಅಭಯ ನೀಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ