ತನ್ನ ಒಡವೆ ಮಾರಿ KRS ಡ್ಯಾಂ ನಿರ್ಮಿಸಿದ ತಾಯಿ.. ಇಂದು ರಾಜ್ಯದ ಜನರ ದಾಹ ತೀರಿಸುತ್ತಿರೋದು ಆಕೆ ಮಾಡಿದ ತ್ಯಾಗದಿಂದ!

author-image
AS Harshith
Updated On
ತನ್ನ ಒಡವೆ ಮಾರಿ KRS ಡ್ಯಾಂ ನಿರ್ಮಿಸಿದ ತಾಯಿ.. ಇಂದು ರಾಜ್ಯದ ಜನರ ದಾಹ ತೀರಿಸುತ್ತಿರೋದು ಆಕೆ ಮಾಡಿದ ತ್ಯಾಗದಿಂದ!
Advertisment
  • 12ನೇ ವಯಸ್ಸಿನಲ್ಲಿ ಮದುವೆ, 26ನೇ ವಯಸ್ಸಿನಲ್ಲಿರುವಾಗ ಗಂಡನ ಸಾವು
  • 1911ರಲ್ಲಿ ಪ್ರಾರಂಭ 1931ರಲ್ಲಿ ಪೂರ್ಣ.. 20 ವರ್ಷದಲ್ಲಿ KRS ಡ್ಯಾಂ ನಿರ್ಮಾಣ
  • ಗಂಡನ ಸಾವಿನ ಬಳಿಕ ರಾಜ್ಯ ಆಳ್ವಿಕೆ.. ಶಿಕ್ಷಣ, ನೀರಾವರಿ, ಜಲವಿದ್ಯುತ್​ಗೆ ಒತ್ತು

ತಾಯಿಗೆ ಮಕ್ಕಳೆಂದರೆ ಪ್ರೀತಿ. ತನ್ನ ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ತನಗೆ ಹೊಟ್ಟೆಗೆ ಕಮ್ಮಿಯಾದರೂ ಪರವಾಗಿಲ್ಲ ಮಕ್ಕಳಿಗಾಗಿ ಆಹಾರವನ್ನು ತೆಗೆದಿಟ್ಟುಕೊಳ್ಳುವ ಮಹಾ ತ್ಯಾಗಿ ತಾಯಿ. ಅಂದಹಾಗೆಯೇ ತಾಯಿಯೊಬ್ಬಳು ತನ್ನ ಜೀವಿತಾವಧಿಯಲ್ಲಿ ಒಡವೆಯನ್ನೇ ಮಾರಿ ರಾಜ್ಯದ ಉದ್ಧಾರ ಮಾಡಿದ ಕತೆ ಗೊತ್ತಾ?. ಇಂದು ಕೃಷಿಯನ್ನೇ ನಂಬಿ ಬದುಕುತ್ತಿರೋ ಅನೇಕ ರೈತರು, ನೀರನ್ನು ಅವಂಲಬಿಸುತ್ತಿರುವ ಜೀವ ಸಂಕುಲಗಳು ರಾಜ್ಯದಲ್ಲಿದ್ದರೆ ಅದಕ್ಕೆ ಈ ತಾಯಿಯೇ ಕಾರಣ. ಈಕೆ ನೀಡಿದ ಕೊಡುಗೆಯೇ ಮಂಡ್ಯ ಶ್ರೀರಂಗ ಪಟ್ಟಣದಲ್ಲಿರುವ ಕೃಷ್ಣ ರಾಜ ಸಾಗರ ಅಣೆಕಟ್ಟು.

20 ವರ್ಷಗಳ ನಿರ್ಮಾಣದ ಇತಿಹಾಸ

ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಅಂದು ಕೃಷ್ಣರಾಜ ಸಾಗರ ಅಣೆಕಟ್ಟೆ ಕಟ್ಟಲು ತನ್ನ ಒಡವೆಗಳನ್ನು ಮಾರಿದ್ದರು. ಅದರ ಧ್ಯೋತಕವೇ ಈ ಕೆಆರ್​​ಎಸ್ ಡ್ಯಾಂ. ಇದರ ನಿರ್ಮಾಣವನ್ನು 1911ರಲ್ಲಿ ಪ್ರಾರಂಭಿಸಲಾಯಿತು. ಆದರೆ 1931ರಲ್ಲಿ ಡ್ಯಾಂ ನಿರ್ಮಾಣ ಪೂರ್ಣವಾಯಿತು. ಸುಮಾರು 20 ವರ್ಷಗಳು ಕೆಆರ್​ಎಸ್​​ ಡ್ಯಾಂ ನಿರ್ಮಿಸಲು ಸಮಯ ಬೇಕಾಯ್ತು.

[caption id="attachment_76837" align="alignnone" width="800"]ಚಾಮರಾಜೇಂದ್ರ x ಮತ್ತು ಕೆಂಪನಂಜಮ್ಮಣ್ಣಿ ​​ ಚಾಮರಾಜೇಂದ್ರ x ಮತ್ತು ಕೆಂಪನಂಜಮ್ಮಣ್ಣಿ ​​[/caption]

ಇದನ್ನೂ ಓದಿ: 24 ಗಂಟೆಯಲ್ಲಿ ಮತ್ತೆ 7 ಜನ ಸಾವು.. ಮಹಾರಾಷ್ಟ್ರಕ್ಕೆ ಮಳೆ ಕಂಟಕ.. ಏನೆಲ್ಲ ಅನಾಹುತ ಆಗ್ತಿದೆ..

12ನೇ ವಯಸ್ಸಿನಲ್ಲಿ ಕೆಂಪನಂಜಮ್ಮಣ್ಣಿ  ಮದುವೆ

ಕೆಂಪನಂಜಮ್ಮಣ್ಣಿ.  ಕಳೆಲೆಯ ಮದ್ದೂರು ಶಾಖೆಯ ರಾಜಮನೆತನಕ್ಕೆ ಸೇರಿದವರು. ಇವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್​​ನಲ್ಲೂ ಶಿಕ್ಷಣ ಪಡೆದಿದ್ದರು. 12ನೇ ವಯಸ್ಸಿನಲ್ಲಿರುವಾಗ 1878ರಲ್ಲಿ 15 ವರ್ಷ ವಯಸ್ಸಿನ ಚಾಮರಾಜೇಂದ್ರ ಒಡೆಯರ್-10 ಅವರನ್ನು ವಿವಾಹವಾಗುತ್ತಾರೆ.

26ನೇ ವರ್ಷಕ್ಕೆ ಪತಿ ನಿಧನ

26ನೇ ವಯಸ್ಸಿಗೆ ಮಹಾರಾಣಿ ಕೆಂಪನಂಜಮ್ಮಣ್ಣಿ ​​ಅವರ ಪತಿ 31 ವರ್ಷದ ಚಾಮರಾಜೇಂದ್ರ ಅಕಾಲಿಕ ಮರಣ ಹೊಂದುತ್ತಾರೆ. ಬಳಿಕ ತನ್ನ ಪೀಠ ಅಲಂಕರಿಸಿದ ಅವರು ರಾಜ್ಯದ ಉದ್ಧಾರದತ್ತ ಗಮನಹರಿಸಿದರು.

[caption id="attachment_76856" align="alignnone" width="800"]ಪುತ್ರರಾದ ಮಹಾರಾಜ ಕೃಷ್ಣರಾಜ ಒಡೆಯರ್ (ಎಡ), ಯುವರಾಜ ನರಸಿಂಹರಾಜ ಮತ್ತು ಮೊಮ್ಮಗ ಜಯಚಾಮರಾಜೇಂದ್ರ ಜೊತೆ ಮಹಾರಾಣಿ ಕೆಂಪನಂಜಮ್ಮಣ್ಣಿ ಪುತ್ರರಾದ ಮಹಾರಾಜ ಕೃಷ್ಣರಾಜ ಒಡೆಯರ್ (ಎಡ), ಯುವರಾಜ ನರಸಿಂಹರಾಜ ಮತ್ತು ಮೊಮ್ಮಗ ಜಯಚಾಮರಾಜೇಂದ್ರ ಜೊತೆ ಮಹಾರಾಣಿ ಕೆಂಪನಂಜಮ್ಮಣ್ಣಿ[/caption]

ಬರಗಾಲವನ್ನೇ ತಡೆದರು

ಗಂಡನ ಸಾವಿನ ಬಳಿಕ ರಾಜ್ಯದ ಉದ್ಧಾರದತ್ತ ಗಮನ ಹರಿಸಿದ ಕೆಂಪನಂಜಮ್ಮಣ್ಣಿ ಆರೋಗ್ಯ, ನೀರು, ವಿದ್ಯುತ್​ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಲವರಾರು ಸಮಸ್ಯೆಗಳನ್ನು ಬಗೆಹರಿಸಲು ಮುಂದಾದರು. ಅಂದು ಎದುರಾದ ಬರಗಾಲವನ್ನು ಗಮನಹರಿಸಿ ಅಣೆಕಟ್ಟು ನಿರ್ಮಾಣವನ್ನು ಪ್ರಾರಂಭಿಸಿದರು. ಮಾತ್ರವಲ್ಲದೇ ಜಲವಿದ್ಯುತ್​​ ಯೋಜನೆ ಸ್ಥಾಪಿಸಿದರು.

[caption id="attachment_76840" align="alignnone" width="800"]KRS ಡ್ಯಾಂ ಕೃಷ್ಣರಾಜ ಸಾಗರ ಅಣಿಕಟ್ಟು[/caption]

ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾದ ಮೋದಿ.. ಮಹತ್ವದ ಚರ್ಚೆ; HDD ಕೊಟ್ಟ ಗಿಫ್ಟ್‌ಗೆ ಪ್ರಧಾನಿ ಸಂತಸ; ಏನದು?

ಚಾಮರಾಜೇಂದ್ರ ಒಡೆಯರ್​ ಸಾಯುವ ಮೊದಲು 13 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಾರೆ. ಆದರೆ 1894ರಲ್ಲಿ ಕೋಲ್ಕತ್ತಾ ಪ್ರವಾಸದ ಬಳಿಕ ಡಿಫ್ತೀರಿಯಾ ಸೋಂಕಿನಿಂದ (ಮೂಗು ಮತ್ತು ಗಂಟಲಿನಲ್ಲಿ ಬರುವ ಗಂಭೀರವಾದ ಬ್ಯಾಕ್ಟೀರಿಯಾದ ಸೋಂಕು) ಸಾವನ್ನಪ್ಪುತ್ತಾರೆ. ಪತಿಯ ಜೊತೆಗಿದ್ದಾಗ ಅವರ ಆಳ್ವಿಕೆಯನ್ನು ಮಹಾರಾಣಿ ಗಮನಿಸಿಕೊಂಡಿದ್ದರು. ಹೀಗಾಗಿ ಗಂಡನ ಸಾವಿನ ಬಳಿಕ ರಾಜ್ಯದ ಉದ್ಧಾರವನ್ನು ಕೆಂಪನಂಜಮ್ಮಣ್ಣಿ ಮಾಡುತ್ತಾ ಬಂದರು.

[caption id="attachment_76841" align="alignnone" width="800"]ಕೆಆರ್​​ಎಸ್​ ಡ್ಯಾಂ ನಿರ್ಮಾಣದ ಹಂತ ಕೆಆರ್​​ಎಸ್​ ಡ್ಯಾಂ ನಿರ್ಮಾಣದ ಹಂತ[/caption]

ಇದನ್ನೂ ಓದಿ: ಆರೋಗ್ಯದಲ್ಲಿ ಚೇತರಿಕೆ; ಮದುವೆ ಆಗದವರಿಗೆ ಸಿಹಿ ಸುದ್ದಿ; ಈ ರಾಶಿಯವರಿಗೆ ದೋಷ; ಇಲ್ಲಿದೆ ಭವಿಷ್ಯ

1898ರಲ್ಲಿ ಕೆಂಪನಂಜಮ್ಮಣ್ಣಿ ಆಳ್ವಿಕೆ ಸಮಯದಲ್ಲಿ ಶೇಷಾದ್ರಿ ಅಯ್ಯರ್​​ ಅವರೊಂದಿಗೆ ನೀರಾವರಿ ಯೋಜನೆ ಬಗ್ಗೆ ಗಮನಹರಿಸಿ, ಅದನ್ನು ಪ್ರಾರಂಭಿಸಿದರು. ಚಿತ್ರದುರ್ಗದಲ್ಲಿ 120 ವರ್ಷ ಹಳೆಯದಾದ ಮಾರಿಕಣಿವೆ ಯೋಜನೆಯಡಿ ನಿರ್ಮಿಸಲಾದ ವಾಣಿವಿಲಾಸ ಸಾಗರ ಕೆಂಪನಂಜಮ್ಮಣ್ಣಿ ರಾಜ್ಯಕ್ಕೆ ನೀಡಿದ ಕೊಡುಗೆ. 25 ಸಾವಿರ ಎಕ್ರೆ ಭೂಮಿಗೆ ನೀರಾವರಿ ಸೌಲಭ್ಯವನ್ನು ಇದು ಒದಗಿಸುತ್ತಿತ್ತು. ಆದರಿಂದು ಅಲ್ಲಿ ಮರಳು ಗಣಿಗಾರಿಕೆ, ಪರಿಸರ ಹಾನಿ ಮಾಡುತ್ತಿದ್ದಾರೆ.

[caption id="attachment_76842" align="alignnone" width="800"]ಕೆಆರ್​​ಎಸ್​ ಡ್ಯಾಂ ನಿರ್ಮಾಣದ ಹಂತ KRS ಡ್ಯಾಂ ನಿರ್ಮಾಣದ ಹಂತ[/caption]

ಒಡವೇಯನ್ನೇ ಮಾರಿದ ಮಹಾತ್ಯಾಗಿ

ಶಿವನ ಸಮುದ್ರ ಜಲವಿದ್ಯುತ್​ ಯೋಜನೆ ಇವರು ನೀಡಿದ ಕೊಡುಗೆ. ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಜೀವನದಿಯಾದ ಕಾವೇರಿಗೆ ಅಡ್ಡಲಾಗಿ ಅಣಿಕಟ್ಟು ನಿರ್ಮಿಸಲು ಇವರು ತನ್ನ ಆಭರಣಗಳನ್ನೇ ಮಾರಿದರು. ಇಂದು ಇದೇ ನೀರು ರಾಜ್ಯದ ಜನರ ದಾಹ ತೀರಿಸುತ್ತಿದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಡುಗೆ

ಇಷ್ಟು ಮಾತ್ರವಲ್ಲ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಹಲವಾರು ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ರಾಜ್ಯದಲ್ಲಿ ಸುಮಾರು 12,000 ಹುಡುಗಿಯರಿಗೆ 235 ಶಾಲೆಗಳಲ್ಲಿ ಅಧ್ಯಯನ ನಡೆಸಲು ಸಹಾಯ ಮಾಡಿದರು. ಇಂಡಿಯನ್​​ ಇನ್ಸ್ಟಿಟ್ಯೂಟ್ ಆಫ್​ ಸೈನ್ಸ್​ ​​ ಸ್ಥಾಪಿಸಲು 372 ಎಕ್ರೆ ಭೂಮಿಯನ್ನು ಕೊಟ್ಟರು.

[caption id="attachment_76844" align="alignnone" width="800"]publive-image ಕೆಆರ್​​ಎಸ್​ ಡ್ಯಾಂ ನಿರ್ಮಾಣದ ಹಂತ[/caption]

32ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು

ಕೆಂಪನಂಜಮ್ಮಣ್ಣಿ 1902 ಆಗಸ್ಟ್​ 8 ರಂದು ಆಡಳಿತ ಕೊನೆಗೊಳಿಸಿದರು. ಬಳಿಕ 18 ವರ್ಷ ವಯಸ್ಸಿನ ಮಹಾರಾಜ ಕೃಷ್ಣರಾಜರು ಅಧಿಕಾರ ವಹಿಸಿಕೊಂಡರು. 32 ವರ್ಷ ವಯಸ್ಸಿನಲ್ಲಿ ಅಂದರೆ 1934 ಜುಲೈ 7ರಂದು ಕೆಂಪನಂಜಮ್ಮಣ್ಣಿ ಕೊನೆಯುಸಿರೆಳೆದರು.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ದರ್ಶನ್​ ಪತ್ನಿ.. ಗಂಡನಿಗಾಗಿ ನವ ಚಂಡಿಕಾಯಾಗ!

ಕೆಂಪನಂಜಮ್ಮಣ್ಣಿ ಕರ್ನಾಟಕಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ವಾಣಿ ವಿಲಾಸ ವೃತ್ತ, ವಾಣಿ ವಿಲಾಸ ಅಣೆಕಟ್ಟು, ವಾಣಿ ವಿಲಾಸ ರಸ್ತೆ, ವಾಣಿ ವಿಲಾಸ ಆಸ್ಪತ್ರೆ, ವಾಣಿ ವಿಲಾಸ ಸೇತುವೆಯನ್ನು ಈಗಲೂ ಕಾಣಬಹುದಾಗಿದೆ.

ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment