/newsfirstlive-kannada/media/post_attachments/wp-content/uploads/2025/02/DVG-microfinance-3.jpg)
ದಾವಣಗೆರೆ: ಮೈಕ್ರೋ ಫೈನಾನ್ಸ್​ ಸಂಸ್ಥೆಗಳ ಕಿರುಕುಳ ತಪ್ಪಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ಜಾರಿಗೆ ತಂದಿದೆ. ಆದರೆ, ಅದರ ಪರಿಣಾಮ ಮೈಕ್ರೋ ಫೈನಾನ್ಸ್​​ಗೆ ತಟ್ಟಿದಂತೆ ಕಾಣ್ತಿಲ್ಲ. ಯಾಕೆಂದರೆ ದಾವಣಗೆರೆಯಲ್ಲಿ ಸಾಲ ವಸೂಲಿ ಟಾರ್ಚರ್​​ಗೆ ನಾಲ್ಕು ಕುಟುಂಬ ಊರು ಬಿಟ್ಟಿದೆ.
ಇದನ್ನೂ ಓದಿ: Microfinance: ಕೊನೆಗೂ ಬಂತು ಹೊಸ ಕಾನೂನು.. ಸರ್ಕಾರಕ್ಕೆ ರಾಜ್ಯಪಾಲರು ಕೊಟ್ಟ 6 ಸಲಹೆಗಳು ಏನೇನು?
/newsfirstlive-kannada/media/post_attachments/wp-content/uploads/2025/02/DVG-microfinance-2.jpg)
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಶಿವಗಂಗಾಳ ಗ್ರಾಮದಲ್ಲಿರುವ ನಾಲ್ಕು ಕುಟುಂಬ ಮನೆಗೆ ಬೀಗ ಹಾಕಿ ಊರು ಬಿಟ್ಟಿದೆ. ನಾಲ್ಕು ಕುಟುಂಬ ವಿವಿಧ 5 ಫೈನಾನ್ಸ್​ಗಳಲ್ಲಿ ಸುಮಾರು ಸಾಲ ಮಾಡಿದ್ದವು. ಕಳೆದ 5 ತಿಂಗಳಿಂದ ಸಾಲಗಾರರ ಕಾಟ ಹೆಚ್ಚಾಗಿದೆಯಂತೆ.
ಇದನ್ನೂ ಓದಿ: BREAKING: ಕೊನೆಗೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಅನುಮೋದನೆ
/newsfirstlive-kannada/media/post_attachments/wp-content/uploads/2025/02/DVG-microfinance-1.jpg)
ಇದ್ರಿಂದ ಬೇಸತ್ತ ಇಡೀ ಕುಟುಂಬ ಊರು ತೊರೆದಿದೆ. ಗ್ರಾಮಕ್ಕೆ ಭೇಟಿ ನೀಡಿರುವ ರೈತ ಸಂಘ, ಫೈನಾನ್ಸ್ ಸಂಸ್ಥೆಯ ವಿರುದ್ಧ ಆಕ್ರೋಶ ಹೊರ ಹಾಕಿದೆ. ಬೀಗ ಹಾಕಿದ ಮನೆಗಳ ಮುಂದೆ ನಿಂತು, ಫೈನಾನ್ಸ್ ಸಂಸ್ಥೆ ಮತ್ತು ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದೆ. ಕೂಡಲೇ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಅಂತಾ ಆಗ್ರಹಿಸಿದೆ.
ಇದನ್ನೂ ಓದಿ: ಕಲ್ಲಿದ್ದಲು ಗಣಿ ಇಲಾಖೆಯಲ್ಲಿ 1,765 ಅಪ್ರೆಂಟೀಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us