/newsfirstlive-kannada/media/post_attachments/wp-content/uploads/2025/06/RUHANI-SHETTY.jpg)
ನಾ ನಿನ್ನ ಬಿಡಲಾರೆ ಧಾರಾವಾಹಿ ಟಾಪ್​ ಸ್ಥಾನದಲ್ಲಿದೆ. ವೀಕ್ಷಕರ ಫೇವರಿಟ್ ಲಿಸ್ಟ್​ನಲ್ಲಿ ಸ್ಥಾನ ಪಡೆದುಕೊಂಡಿದೆ​. ಪುಟಾಣಿ ಪ್ರತಿಭೆ ಬಾಲನಟಿ ಮಹಿತಾಳ ಅದ್ಭುತ ಅಭಿನಯ, ವಿಲನ್​ ಕಾಟ, ತಾಯಿ ಸೆಂಟಿಮೆಂಟ್​, ನಾಯಕ-ನಾಯಕಿಯ ಕೋಳಿ ಜಗಳ. ಜೊತೆಗೆ ಹಾರರ್​ ಕಮ್​ ಥ್ರಿಲ್ಲಿಂಗ್​ ಸಂಚಿಕೆಗಳು ಎಲ್ಲಾ ವಯಸ್ಕರಿಗೂ ಇಷ್ಟವಾಗುತ್ತೆ. ಹೀಗಾಗಿ ಈ ಸ್ಟೋರಿಗೆ ವಿಶೇಷವಾದ ಅಭಿಮಾನಿಗಳಿದ್ದಾರೆ.
/newsfirstlive-kannada/media/post_attachments/wp-content/uploads/2025/06/RUHANI-SHETTY1.jpg)
ಪಕ್ಕಾ ವಿಲನ್ ರೋಲ್‌ನಲ್ಲಿ ನಟಿ ರುಹಾನಿ ಶೆಟ್ಟಿ ಮಿಂಚುತ್ತಿದ್ದಾರೆ. ಖಳನಾಯಕಿ ಮಾಯಾ ಪಾತ್ರಕ್ಕೆ ಜೀವ ತುಂಬಿರೋ ರುಹಾನಿಗೆ ವೀಕ್ಷಕರು ಹಿಡಿ ಶಾಪ ಹಾಕುತ್ತಾ ಇರುತ್ತಾರೆ. ಆದ್ರೆ ರಿಯಲ್​ ಲೈಫ್​ನಲ್ಲಿ ಮಾಯಾ ಪಾತ್ರಕ್ಕೆ ತದ್ವಿರುದ್ಧ. ಆ್ಯಕ್ಷನ್​ ಅಂದ್ರೇ ಮಾಯಾಳನ್ನ ಆಹ್ವಾನಿಸಿಕೊಳ್ಳುವ ನಟಿ ಕಟ್​ ಅಂದ್ರೇ ಸಾಕು ಮಹಿತಾ, ದುರ್ಗಾ ಜೊತೆ ಚಿಲ್​ ಮಾಡುತ್ತಾ ಇರುತ್ತಾರೆ. ಫನ್ನಿ ವಿಡಿಯೋಗಳ ಮೂಲಕ ಇವರ ಬಾಂಡಿಂಗ್​ನ ನೋಡಬಹುದು. ಡ್ಯಾನ್ಸ್​ ಹಾಗೂ ಸುಗಮ ಸಂಗೀತವನ್ನು ಕಲಿತಿರೋ ರುಹಾನಿ ಸಖತ್​ ಆಗಿ ಹಾಡ್ತಾರೆ.
/newsfirstlive-kannada/media/post_attachments/wp-content/uploads/2025/06/RUHANI-SHETTY2.jpg)
ಎರಡು ಕನಸು ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರುಹಾನಿ ಶೆಟ್ಟಿ ಅವರು ಮೂಲತಃ ಕೂರ್ಗ್ ಬೆಡಗಿ. ತುಳು ಸಿನಿರಂಗದಲ್ಲಿ ಫೇಮಸ್ ಕೂಡ ಆಗಿದ್ದು, ಹಲವು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲೂ ಹಲವು ಸಿನಿಮಾದಲ್ಲಿ ಬಹಳ ಬೋಲ್ಡ್ ಹಾಗೂ ಗ್ಲಾಮರಸ್ ಪಾತ್ರಗಳನ್ನ ಮಾಡಿದ್ದಾರೆ. ಕಾಸ್ಟ್ಯೂಮ್​ ಡಿಸೈನ್​ ಜ್ಯೂವಲರಿ ಸೇರಿದಂತೆ ಹಲವು ಬಿಸಿನೆಸ್​ಗಳನ್ನ ತೊಡಗಿಸಿಕೊಂಡಿದ್ದಾರೆ ನಟಿ.
/newsfirstlive-kannada/media/post_attachments/wp-content/uploads/2025/06/RUHANI-SHETTY3.jpg)
ಪಾತ್ರಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳೋ ನಟಿ ರುಹಾನಿ ಶೆಟ್ಟಿ ಅವರ ಸ್ಟೈಲಿಷ್ ಲುಕ್‌ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅವರ ಆ್ಯಕ್ಟಿಂಗ್​ ಕರಿಯರ್​ಗೋಸ್ಕರ ಹೆಸರು ಬದಲಾಯಿಸಿಕೊಂಡಿದ್ರು ನಟಿ. ಶಿಲ್ಪಾ ಶೆಟ್ಟಿ ಈಗ ರುಹಾನಿ ಶೆಟ್ಟಿ ಆಗಿ ಬದಲಾಗಿದ್ದಾರೆ. ಹೌದು, ನಟನೆ ಆರಂಭಿಸಿದಾಗ ರುಹಾನಿ ಶೆಟ್ಟಿ ಅವರು ಗುರುತಿಸಿಕೊಂಡಿದ್ದು ಶಿಲ್ಪಾ ಶೆಟ್ಟಿ ಹೆಸರಿನಲ್ಲಿ. ಆದರೆ ಈಗಾಗಲೇ ಬಾಲಿವುಡ್​ ಬೆಡಗಿ ತುಳುನಾಡ ಸುಂದರಿ ಶಿಲ್ಪಾ ಶೆಟ್ಟಿ ಜನಪ್ರಿಯತೆ ಎಷ್ಟಿದೆ ಅಂತ ಬಿಡಿಸಿ ಹೇಳ್ಬೇಕಿಲ್ಲ. ಹೀಗಾಗಿ ವೀಕ್ಷಕರಿಗೆ ಕನ್ಫೂಷನ್​ ಬೇಡ. ತಮ್ಮ ಕೇರಿಯರಿಗ್​ ಇದು ಎಫೆಕ್ಟ್​ ಆಗುತ್ತೆ ಅನ್ನೋ ಕಾರಣಕ್ಕೆ ಹೆಸರು ಚೇಂಜ್​ ಮಾಡ್ಕೊಂಡ್ರು ನಟಿ. ಮೊನ್ನೆಯಷ್ಟೇ ನಟಿ ರುಹಾನಿ ಶೆಟ್ಟಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರು. ಹೀಗಾಗಿ ಅಭಿಮಾನಿಗಳು ನಟಿ ರುಹಾನಿ ಶೆಟ್ಟಿ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿ ನಟಿಗೆ ವಿಶ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us