/newsfirstlive-kannada/media/post_attachments/wp-content/uploads/2025/06/rishika.jpg)
ನಾ ನಿನ್ನ ಬಿಡಲಾರೆ ಕಥೆ ದೈವಿಕ ಭಾವದ ಜೊತೆಗೆ ದುಷ್ಟಶಕ್ತಿಗಳ ಅಟ್ಟಹಾಸವನ್ನ ರೋಮಾಂಚನಕಾರಿ ದೃಶ್ಯಗಳ ಮೂಲಕ ಕಟ್ಟಿಕೊಡ್ತಿದೆ.
ಸದ್ಯ ನಾ ನಿನ್ನ ಬಿಡಲಾರೆ ಯಶಸ್ವಿ ನೂರು ಸಂಚಿಕೆಗಳನ್ನ ಪೂರೈಸಿರೋ ಧಾರಾವಾಹಿ ಕೇಕ್ ಕಟ್ ಮಾಡೋದರ ಮೂಲಕ ಮತ್ತಷ್ಟು ಮನರಂಜನೆಯನ್ನ ನೀಡೋ ಪಣ ತೊಟ್ಟಿದೆ. ಪುಣ್ಯವತಿ ಖ್ಯಾತಿಯ ನಿರ್ದೇಶಕ ಜಿ ಕೆ ಸತೀಶ್ ಕೃಷ್ಣನ್ ಅವರು ನಾ ನಿನ್ನ ಬಿಡಲಾರೆ ನಿರ್ದೇಶನ ಮಾಡ್ತಿದ್ದಾರೆ.
ಇನ್ನೂ, ಕಳೆದ ವಾರ ದುರ್ಗಾ ಪಾತ್ರಧಾರಿ ರಿಷಿಕಾ ಅವರ ಬರ್ತ್ ಡೇ ಇತ್ತು. ಜನ್ಮದಿನದ ಪ್ರಯುಕ್ತ ಮಂತ್ರಾಲಯಕ್ಕೆ ತೆರಳಿದ್ದ ನಟಿ ಮತ್ತೆ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ರಿಷಿಕಾಗೆ ಬರ್ತ್ ಡೇ ಸರ್ಪ್ರೈಸ್ ನೀಡಿದೆ ತಂಡ.
View this post on Instagram
ಮತ್ತೊಂದು ವಿಶೇಷ ಏನೆಂದರೆ ಈ ವಾರ ಟಿಆರ್ಪಿನಲ್ಲಿ ನಂಬರ್ ಒನ್ ಧಾರಾವಾಹಿಯಾಗಿ ರಾರಾಜಿಸ್ತಿರೋದು ಖುಷಿ ವಿಚಾರ. ಮತ್ತಷ್ಟು ರೋಚಕ ಸಂಚಿಕೆಗಳ ಜೊತೆಗೆ ಯಶಸ್ವಿ ಜರ್ನಿ ಮುಂದುವರೆಯಲಿ ಅನ್ನೋದು ವೀಕ್ಷಕರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ