/newsfirstlive-kannada/media/post_attachments/wp-content/uploads/2024/10/NABARD_JOB.jpg)
ನಬಾರ್ಡ್ (ಎನ್ಎಬಿಎಆರ್ಡಿ) ಬ್ಯಾಂಕ್ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಬೇರೆ ಬೇರೆ ರಾಜ್ಯಗಳಲ್ಲಿನ ನಬಾರ್ಡ್ನ ಸಹ ಕಚೇರಿಯಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ತುಂಬಲು ಅರ್ಜಿಗಳನ್ನು ಆಹ್ವಾನ ಮಾಡಿದೆ. ಆಸಕ್ತಿ ಹೊಂದಿರುವ, ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಇದು ಸರ್ಕಾರಿ ಸಂಸ್ಥೆಯಾಗಿದ್ದರಿಂದ ಉತ್ತಮಮಟ್ಟದ ಸ್ಯಾಲರಿ ಒಳಗೊಂಡಿರುತ್ತದೆ.
ಇದನ್ನೂ ಓದಿ: SSLC, ITI ಅಭ್ಯರ್ಥಿಗಳಿಗೆ 3 ಸಾವಿರಕ್ಕೂ ಅಧಿಕ ಜಾಬ್ಗಳು.. ಪರೀಕ್ಷೆ ಇಲ್ಲ, ಮೆರಿಟ್ನಲ್ಲಿ ಆಯ್ಕೆ ಮಾತ್ರ!
ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲೆಂಪ್ಮೆಂಟ್ (ಎನ್ಎಬಿಎಆರ್ಡಿ) ನಲ್ಲಿ ಗ್ರೂಪ್ ಸಿ ವಿಭಾಗದ ಕಚೇರಿ ಅಟೆಂಡೆಂಟ್‌ಗಳ ಪೋಸ್ಟ್‌ಗಳು ಖಾಲಿ ಇವೆ. ದೇಶದ್ಯಾಂತ ಇರುವ ಸಹ ಸಂಸ್ಥೆಗಳಲ್ಲಿ ಈ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತದೆ. ಕರ್ನಾಟಕದಲ್ಲೂ ಇದರ ಸಂಸ್ಥೆ ಇದ್ದು ಒಟ್ಟು 8 ಪೋಸ್ಟ್ಗಳಿವೆ. ಕನ್ನಡಿಗರು ಈ ಹುದ್ದೆಗೆ ಪ್ರಯತ್ನ ಮಾಡಬಹುದು. ಇನ್ನು ಈ ಉದ್ಯೋಗದ ಇತರೆ ಮಾಹಿತಿ ಮುಂದೆ ನೀಡಲಾಗಿದೆ.
ಪೋಸ್ಟ್ ಹೆಸರು;
- ಕಚೇರಿ ಅಟೆಂಡೆಂಟ್ ಉದ್ಯೋಗ
- ಒಟ್ಟು ಖಾಲಿ ಹುದ್ದೆಗಳು; 108
- ಕರ್ನಾಟಕದ ಹುದ್ದೆಗಳು; 08
ಮಾಸಿಕ ಸ್ಯಾಲರಿ- 35,000
ಇದನ್ನೂ ಓದಿ:ಹೈಕೋರ್ಟ್ನಲ್ಲಿ ಭಾರೀ ಹುದ್ದೆಗಳ ನೇಮಕಾತಿ.. 100 ಅಲ್ಲ, 200 ಅಲ್ಲ 3 ಸಾವಿರಕ್ಕೂ ಹೆಚ್ಚು ಉದ್ಯೋಗಗಳು
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?
- ಪ್ರಿಲಿಮ್ಸ್ ಎಕ್ಸಾಮ್
- ಮುಖ್ಯ ಪರೀಕ್ಷೆ
- ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (ಎಲ್ಪಿಟಿ)
ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ, ವಿಶೇಷ ಚೇತನರು= 50 ರೂಪಾಯಿ
ಉಳಿದ ಎಲ್ಲ ಕೆಟಗರಿಗಳಿಗೆ= 500 ರೂಪಾಯಿ
ಶೈಕ್ಷಣಿಕ ಅರ್ಹತೆ
10ನೇ ತರಗತಿ ಪೂರ್ಣಗೊಳಿಸಿರಬೇಕು
ಉನ್ನತ ವ್ಯಾಸಂಗ ಗಣನೆಗೆ ತೆಗೆದುಕೊಳ್ಳಲ್ಲ
ವಯೋಮಿತಿ
18 ರಿಂದ 30 ವರ್ಷಗಳು (2/10/1994 ರಿಂದ 01/10/2006 ಇದರ ಒಳಗೆ ಜನಿಸಿರಬೇಕು)
ವಯೋಮಿತಿ ಸಡಿಲಿಕೆ
ಎಸ್ಸಿ, ಎಸ್ಟಿ- 5 ವರ್ಷಗಳು
ಒಬಿಸಿ ಅಭ್ಯರ್ಥಿಗಳು- 3 ವರ್ಷ
ವಿಧವೆ ಮಹಿಳೆಯರಿಗೆ- 10 ವರ್ಷ
ಮುಖ್ಯವಾದ ದಿನಾಂಕಗಳು
- ಆನ್ಲೈನ್ ಅಪ್ಲೇ ಮಾಡಲು ಆರಂಭದ ದಿನಾಂಕ- ಅಕ್ಟೋಬರ್ 02, 2024
- ಆನ್ಲೈನ್ ಅಪ್ಲೇ ಮಾಡಲು ಕೊನೆ ದಿನಾಂಕ- ಅಕ್ಟೋಬರ್ 21
- ನಬಾರ್ಡ್ ನಡೆಸುವ ಪರೀಕ್ಷೆಯ ದಿನಾಂಕ- ನವೆಂಬರ್ 21
ಅತಿ ಮುಖ್ಯವಾದ ಲಿಂಕ್- https://static-cdn.publive.online/newsfirstlive-kannada/media/pdf_files/auth/writereaddata/CareerNotices0210241136Advertisement - Group C -2024.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ