ಸಮಂತಾರ ಮಾಜಿ ಪತಿ ನಾಗ ಚೈತನ್ಯಗೆ ಎಂಗೇಜ್ಮೆಂಟ್​? ಆ ಹೀರೋಯಿನ್ ಯಾರು..?

author-image
Bheemappa
Updated On
ಸಮಂತಾರ ಮಾಜಿ ಪತಿ ನಾಗ ಚೈತನ್ಯಗೆ ಎಂಗೇಜ್ಮೆಂಟ್​? ಆ ಹೀರೋಯಿನ್ ಯಾರು..?
Advertisment
  • ಟಾಲಿವುಡ್​ನ ಕ್ಯೂಟ್ ಕಪಲ್ ಅಂತ ಖ್ಯಾತಿ ಪಡೆದಿದ್ದ ನಾಗ್-ಸ್ಯಾಮ್
  • ನಾಗ ಚೈತನ್ಯ ಈಗ ಇಷ್ಟ ಪಟ್ಟಿರೋ ಆ ಬ್ಯೂಟಿ ಯಾರು ಗೊತ್ತಾ?
  • ಬಾಲಿವುಡ್​, ಟಾಲಿವುಡ್​ ಅಂತ ಫುಲ್ ಬ್ಯುಸಿಯಾಗಿರುವ ಸಮಂತಾ

ಟಾಲಿವುಡ್​ನ ಮೋಸ್ಟ್​ ಕ್ಯೂಟ್ ಕಪಲ್​ ಎಂದೇ ಖ್ಯಾತಿ ಪಡೆದಿದ್ದ ಅಕ್ಕಿನೆನಿ ನಾಗ ಚೈತನ್ಯ ಹಾಗೂ ಸಮಂತಾ ಕೆಲವು ಕಾರಣಗಳಿಂದ ಡಿವೋರ್ಸ್ ಪಡೆದು ಬೇರೆ ಬೇರೆಯಾಗಿದ್ದರು. ಬೆನ್ನಲ್ಲೇ ನಾಗ ಚೈತನ್ಯ ಕುರಿತು ಸಾಕಷ್ಟು ರೂಮರ್ಸ್ ಕ್ರಿಯೇಟ್ ಆಗಿದ್ದವು. ಇದೀಗ ಸೂಪರ್ ಸ್ಟಾರ್ ಅಕ್ಕಿನೆನಿ ನಾಗರ್ಜುನ್ ಫ್ಯಾಮಿಲಿ ಮೊತ್ತೊಂದು ಟ್ವಿಸ್ಟ್ ಕೊಡುತ್ತಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಭಾರತದ ಗಡಿಗೆ ನುಗ್ಗಲು ಮುಂದಾದ ಸಾವಿರಾರು ಬಾಂಗ್ಲಾ ಜನ; ಗಡಿಯಲ್ಲಿ BSF ಪಡೆಗೆ ಬಿಗ್ ಚಾಲೆಂಜ್..!

publive-image

ನಾಗ ಚೈತನ್ಯ ಹಾಗೂ ಹಿಂದಿ ಸಿನಿಮಾ ನಟಿ ಸೋಭಿತಾ ಧೂಳಿಪಾಲ ಇಂದು ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಮಂತಾ- ನಾಗ ಚೈತನ್ಯ ಮಧ್ಯೆ ಡಿವೋರ್ಸ್ ಆದ ಮೇಲೆ ನಾಗ ಚೈತನ್ಯ ಅವರು ಸೋಭಿತಾ ಧೂಳಿಪಾಲ ಜೊತೆ ಸುತ್ತಾಡುತ್ತಿದ್ದಾರೆ. ಅವರ ಜೊತೆ ವೆಕೇಶನ್​ಗೂ ಹೋಗಿದ್ದಾರೆ. ಇನ್ನೇನು ಮದುವೆ ಆಗ್ತಾರೆ ಎನ್ನಲಾಗ್ತಿತ್ತು. ಈ ಇಬ್ಬರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ರೂಮರ್ಸ್ ಕ್ರಿಯೇಟ್ ಮಾಡಲಾಗಿತ್ತು. ಈ ರೂಮರ್ಸ್ ಸತ್ಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಮುಖಕ್ಕೆ ಆಕ್ಸಿಜನ್.. ನಿಧಿಗಾಗಿ 40 ಮೀಟರ್ ಆಳದ ಗುಹೆ ಇಳಿದ ಕಿಡಿಗೇಡಿಗಳು.. ಮುಂದೇನಾಯ್ತು..?


">August 7, 2024

ನಾಗ ಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಎಂಗೇಜ್​​ಮೆಂಟ್ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಇಲ್ಲ. ಎರಡು ಕುಟುಂಬಗಳು ಕೂಡ ಎಂಗೇಜ್​​ಮೆಂಟ್ ಮಾತುಗಳನ್ನ ಆಡಿಲ್ಲ. ಆದರೆ ಇಂದು ಎಂಗೇಜ್​ಮೆಂಟ್​ ನಡೆಯಲಿದೆ ಎನ್ನಲಾಗುತ್ತಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಸುದ್ದಿ ಹರಿದಾಡುತ್ತಿರುವುದರಿಂದ ನಾಗ ಚೈತನ್ಯ-ಸೋಭಿತಾಗೆ ಅಭಿಮಾನಿಗಳು ಕಂಗ್ರಾಟ್ಸ್ ಹೇಳುತ್ತಿದ್ದಾರೆ. ಅಲ್ಲದೇ ಸಂದರ್ಶನವೊಂದರಲ್ಲಿ ಸೋಭಿತಾ ನಾನು ಯಾರ ಜೊತೆಯೂ ಡೇಟಿಂಗ್ ಮಾಡಿಲ್ಲ, ಎಲ್ಲಿಯೂ ಹೋಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment