/newsfirstlive-kannada/media/post_attachments/wp-content/uploads/2025/02/SAMANTHA_NAG.jpg)
ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಹಾಗೂ ನಟಿ ಸಮಂತಾ ನಡುವೆ ಡಿವೋರ್ಸ್ ಆಗಿ ಇಬ್ಬರು ಬೇರೆ ಬೇರೆ ಆಗಿರೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆ ಮೇಲೆ ನಾಗ ಚೈತನ್ಯ, ಶೋಭಿತಾ ಧೂಳಿಪಾಲರನ್ನು ವಿವಾಹವಾಗಿದ್ದಾರೆ. ಅತ್ತ ಬಾಲಿವುಡ್ಗೆ ಜಂಪ್ ಆಗಿರುವ ಸಮಂತಾ, ಸಿಟಾಡೆಲ್, ಹನಿ ಬನ್ನಿ ವೆಬ್ ಸೀರಿಸ್ ನಿರ್ದೇಶಕ ರಾಜ್ ನಿಡಿಮೋರು ಜೊತೆ ಡೇಟಿಂಗ್ನಲ್ಲಿದ್ದಾರೆ ಎನ್ನಲಾಗಿದೆ. ಇದು ಈಗಿರುವಾಗಲೇ ನಾಗ ಚೈತನ್ಯ ಅವರು ಇದೇ ಮೊದಲ ಬಾರಿಗೆ ಸಮಂತಾ ಕುರಿತು ಮಾತಾಡಿದ್ದಾರೆ.
ತೆರೆಗೆ ಅಪ್ಪಳಿಸಿರುವ ತಂಡೆಲ್ ಸಿನಿಮಾದ ಬ್ಯುಸಿಯಲ್ಲಿರುವ ನಾಗ ಚೈತನ್ಯ ಅವರು ಸಂದರ್ಶನ ಒಂದರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸಮಂತಾ ಹೆಸರನ್ನು ಎಲ್ಲಿಯೂ ಉಚ್ಛರಿಸದ ನಟ, ನನ್ನ ಜೀವನದಲ್ಲಿ ಏನಾಗಿದೆ. ಅದು ಬೇರೆಯವರ ಜೀವನದಲ್ಲೂ ನಡೆದಿದೆ. ಕೇವಲ ನನಗೊಬ್ಬನಿಗೆ ನಡೆದಿಲ್ಲ. ಆದರೂ ಯಾಕೆ ಕ್ರಿಮಿನಲ್ ರೀತಿ ನೋಡುತ್ತಿದ್ದಾರೆ. ಸಂಬಂಧ ಕಡಿದುಕೊಳ್ಳಬೇಕು ಎಂದರೆ ಸಾವಿರ ಟೈಮ್ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.
ಒಡೆದು ಹೋದ ಕುಟುಂಬದಿಂದ ನಾನು ಬಂದಿದ್ದರಿಂದ ಆ ನೋವು ಏನು ಎಂಬುದು ಗೊತ್ತು. ಅವರು (ಸಮಂತಾ) ಒಂದು ದಾರಿಯಲ್ಲಿ ಸಾಗುತ್ತಿದ್ದಾರೆ. ನಾನು ಒಂದು ಹಾದಿಯಲ್ಲಿ ಹೋಗುತ್ತಿದ್ದೇನೆ. ಇಬ್ಬರು ಬೇರೆಯಾದ ಮೇಲೆ ನಮ್ಮದೇ ಜೀವನವನ್ನು ಸಾಗಿಸುತ್ತಿದ್ದೇವೆ. ಆದರೆ ನಮ್ಮಿಬ್ಬರ ನಡುವೆ ನಡೆದಿದ್ದು ಹೆಡ್ಲೈನ್ ತರ ಆಗಿ, ಅದು ಒಂದು ಟಾಪಿಕ್ ತರ ಆಗಿ, ಗಾಸಿಪ್ ತರ ಆಗಿ, ಈಗ ಅದು ಮನರಂಜನೆ ರೀತಿ ಆಗೋಗಿದೆ. ಇದರ ಬಗ್ಗೆ ಆಲೋಚನೆ ಮಾಡಿ, ಡಿವೋರ್ಸ್ ಬಗ್ಗೆ ಮಾತಾಡಿದರೆ ಅದು ದೊಡ್ಡ ಸುದ್ದಿಯಾಗುತ್ತಿದೆ. ಅದಕ್ಕೆ ಫುಲ್ಸ್ಟಾಪ್ ಅನ್ನೋದು ಇಲ್ವಾ ಎಂದು ಜನರನ್ನ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಮಹತ್ವದ ಟೂರ್ನಿಗೂ ಮುನ್ನಾ ರೋಹಿತ್ಗೆ ಎರಡೇ 2 ಚಾನ್ಸ್.. ಸಂಕಷ್ಟದಲ್ಲಿ ಕ್ಯಾಪ್ಟನ್?
ಪರ್ಸನಲ್ ವಿಚಾರದಿಂದ ಇಬ್ಬರು ಬೇರೆ ಬೇರೆ ಆಗಿ ಹೊರಗಡೆ ಬಂದಿದ್ದೇವೆ. ಬೇರೆ ಬೇರೆ ಜೀವನ ಮಾಡುತ್ತಿದ್ದು ಸಂತೋಷವಾಗಿದ್ದೇವೆ. ಮತ್ತೆ ಶೋಭಿತಾ ಧೂಳಿಪಾಲ ಲವ್ನಲ್ಲಿ ಬಿದ್ದು ಮದುವೆ ಆಗಿದ್ದೇನೆ. ಆದರೆ ಅವರನ್ನು ಕೆಟ್ಟದಾಗಿ ಟ್ರೀಟ್ ಮಾಡುತ್ತಿದ್ದಾರೆ. ನಮ್ಮಿಬ್ಬರಿಗೂ ಸೋಶಿಯಲ್ ಮೀಡಿಯಾ ಇನ್ಸ್ಟಾದಲ್ಲಿ ಕ್ಯಾಸ್ಯುವಲ್ ಆಗಿ ಮೀಟ್ ಆದ ಮೇಲೆ ಫ್ರೆಂಡ್ಶಿಪ್ ಸ್ಟಾರ್ಟ್ ಆಗಿತ್ತು. ಅಲ್ಲಿಂದ ಇಬ್ಬರದ್ದು ಸಂಬಂಧ ಬೆಳೆಯುತ್ತಾ ಹೋಯಿತು ಎಂದರು.
ಆದರೆ ಇದಕ್ಕಿಂತ ಮೊದಲು ಶೋಭಿತಾ, ನನಗೆ ಇಬ್ಬರಿಗೂ ಯಾವುದೇ ಸಂಬಂಧ ಇಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಮಾತನಾಡುವಾಗ ತುಂಬಾ ನೋವಾಗುತ್ತದೆ. ಆ ತರ ಮಾತನಾಡುವುದು ಒಳ್ಳೆಯದಲ್ಲ. ಆದರೆ ಶೋಭಿತಾಗೆ ಥ್ಯಾಂಕ್ಸ್ ಹೇಳಬೇಕು. ಏಕೆಂದರೆ ಅವರು ನನ್ನನ್ನು ಎಷ್ಟೋ ಅರ್ಥ ಮಾಡಿಕೊಂಡು, ಮೆಚ್ಯುರಿಟಿಯಾಗಿ ಎಲ್ಲವನ್ನು ನಿಭಾಯಿಸುತ್ತಿದ್ದಾರೆ. ಶೋಭಿತಾನೇ ನನಗೆ ನಿಜವಾದ ಹೀರೋ ಎಂದು ನಾಗ ಚೈತನ್ಯ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ