ನಾಗಚೈತನ್ಯ ಮದುವೆ ಸಂಭ್ರಮ.. ಕೆಂಪು ಸೀರೆಯಲ್ಲಿ ಮಿಂಚಿದ ನಟಿ ಶೋಭಿತಾ; ಬ್ಯೂಟಿಫುಲ್ ಫೋಟೋ ಇಲ್ಲಿದೆ

author-image
Veena Gangani
Updated On
ನಾಗಚೈತನ್ಯ ಮದುವೆ ಸಂಭ್ರಮ.. ಕೆಂಪು ಸೀರೆಯಲ್ಲಿ ಮಿಂಚಿದ ನಟಿ ಶೋಭಿತಾ; ಬ್ಯೂಟಿಫುಲ್ ಫೋಟೋ ಇಲ್ಲಿದೆ
Advertisment
  • ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಾಗ ಚೈತನ್ಯ, ನಟಿ ಶೋಭಿತಾ
  • ಆಗಸ್ಟ್​ 8ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ನಾಗ ಚೈತನ್ಯ ಹಾಗೂ ಶೋಭಿತಾ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ ನಟಿಯ ಫೋಟೋಸ್

ಟಾಲಿವುಡ್ ಸ್ಟಾರ್​ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ದಿಲ್ಲದೇ ಗುರು ಹಿರಿಯರ ಸಮ್ಮುಖದಲ್ಲಿ ಕಳೆದ ಆಗಸ್ಟ್​ 8ರಂದು ನಟಿ ಶೋಭಿತಾ ಧೂಳಿಪಾಲ್ ಜೊತೆಗೆ ನಟ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

publive-image

ಇದೀಗ ನಾಗ ಚೈತನ್ಯ ಭಾವಿ ಪತ್ನಿ ಶೋಭಿತಾ ಧೂಳಿಪಾಲ್ ಮನೆಯಲ್ಲಿ ಮದುವೆ ಸಂಭ್ರಮ ಮೊಳಗಿದೆ. ನಟಿ ಶೋಭಿತಾ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನು, ಈ ಸ್ಟಾರ್​ ಜೋಡಿ ಮದುವೆ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ.

publive-image

ನಾಳೆ ಅಂದರೆ ಡಿಸೆಂಬರ್ 4ರಂದು ಹೈದ್ರಾಬಾದ್‌ನಲ್ಲಿ ನಾಗಚೈತನ್ಯ, ಶೋಭಿತಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಇದರ ಮಧ್ಯೆ ಅಕ್ಕಿನೇನಿ ಭಾವಿ ಸೊಸೆ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ.  ನಟಿ ಶೋಭಿತಾ ಕೆಂಪು ಬಣ್ಣದ​ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಜೊತೆಗೆ ಮೆಹಂದಿ ಶಾಸ್ತ್ರ ಕೂಡ ನಡೆದಿದೆ.

publive-image

ಇನ್ನು ಮದುವೆಗೆ ಎರಡು ಕಡೆಯ ಕುಟುಂಬಸ್ಥರು, ಕೆಲ ಗಣ್ಯರು, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅಕ್ಕಿನೇನಿ ಕುಟುಂಬವಂತೂ ಹಿರಿಯ ಮಗನಿಗೆ ಮದುವೆ ಹಿನ್ನೆಲೆಯಲ್ಲಿ ಸಂತಸದಲ್ಲಿ ಮುಳುಗಿದೆ.
ಸೋಭಿತಾ ಧೂಳಿಪಾಲ ಅವರು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಗೌರವಿಸುವ ನಿಜವಾದ ಚಿನ್ನದ ಝರಿಯೊಂದಿಗೆ ಕಾಂಜೀವರಂ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ:BBK11: ‘ಬಿಗ್​ಬಾಸ್​ ಮನೆಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ’.. ಕ್ಯಾಮೆರಾ ಮುಂದೆ ಚೈತ್ರಾ ಕುಂದಾಪುರ ಕಣ್ಣೀರು

publive-image

ಅವರು ಆಂಧ್ರಪ್ರದೇಶದ ಪೊಂಡೂರಿನಿಂದ ಕೈಯಿಂದ ನೇಯ್ದ ಬಿಳಿ ಖಾದಿ ಸೀರೆಯನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ನಾಗ ಚೈತನ್ಯಗೆ ಸಂಘಟಿತ ಉಡುಪಿನಿಂದ ಕೂಡಿದೆ. ಇನ್ನೂ, ಈ ಹಿಂದೆ ನಾಗಚೈತನ್ಯ ನಿಶ್ಚಿತಾರ್ಥ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದೇ ಫೋಟೋಸ್​ ನೋಡಿದ ಅಭಿಮಾನಿಗಳು ಅಕ್ಷರಶಃ ಶಾಕ್ ಆಗಿದ್ದರು.

publive-image

ಖುದ್ದು ಟ್ವೀಟ್ ಮೂಲಕ ಮಗನ ಎಂಗೇಜ್​ಮೆಂಟ್ ಬಗ್ಗೆ ಮಾಹಿತಿ ನೀಡಿರುವ ಅಕ್ಕಿನೇನಿ ನಾಗಾರ್ಜುನ್‌ ಅವರು, ಇಬ್ಬರಿಗೂ ಲೈಫ್ ಟೈಮ್ ಲವ್ ಹಾಗೂ ಸಂತೋಷವನ್ನು ಬಯಸುತ್ತೇನೆ ಅಂತ ಪೋಸ್ಟ್ ಮಾಡಿದ್ದರು. 2017ರಲ್ಲಿ‌ ನಟಿ ಸಮಂತಾ ಜೊತೆ ನಾಗಚೈತನ್ಯ ಅವರ ಮದುವೆ ಆಗಿತ್ತು.

publive-image

2021ರಲ್ಲಿ‌ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ವೈವಾಹಿಕ ಬದುಕು ಮುರಿದು ಬಿದ್ದಿತ್ತು. ಇದಾದ ಬಳಿಕ ಶೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಬಹಳ ಹಿಂದೆಯೇ ಕೇಳಿ ಬಂದಿತ್ತು.

publive-image

ಆದರೆ ಈ ಬಗ್ಗೆ ನಾಗಚೈತನ್ಯ ಹಾಗೂ ಶೋಭಿತಾ ಅವರು ಹೇಳಿಕೊಂಡಿರಲಿಲ್ಲ. ಸಮಂತಾ ಜೊತೆಗಿನ‌ ಡಿವೋರ್ಸ್ ನಂತರ ನಾಗಚೈತನ್ಯ ಅವರು ಎರಡನೇ ಮದುವೆಗೆ ಮುಂದಾಗಿದ್ದಾರೆ. ಅಧಿಕೃತವಾಗಿ ಎಂಗೇಜ್ ಆಗಿರುವ ಈ ಜೋಡಿ ನಾಳೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಿಸೆಂಬರ್ 4ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆ ನಡೆಯಲಿದೆ.

publive-image

ಇದು ನಾಗ ಚೈತನ್ಯ ಅವರ ಕುಟುಂಬದ ಇತಿಹಾಸದೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. 1976ರಲ್ಲಿ ಅವರ ಅಜ್ಜ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಸ್ಥಾಪಿಸಿದರು. ಬಂಜಾರ ಹಿಲ್ಸ್‌ನಲ್ಲಿರುವ ಈ 22 ಎಕರೆ ಆಸ್ತಿಯು ಚಿತ್ರರಂಗದ ಶ್ರೇಷ್ಠತೆ ಮತ್ತು ಕುಟುಂಬದ ಹೆಮ್ಮೆಯ ಮೂಲಾಧಾರವಾಗಿದೆ. ಅವರ 8-ಗಂಟೆ ಅವಧಿಯ ವಿವಾಹ ಸಮಾರಂಭವು ಹಳೆಯ ಸಂಪ್ರದಾಯಗಳಲ್ಲಿ ಬೇರೂರಿದೆ. ಭರ್ಜರಿ ವಿವಾಹದ ಬಳಿಕ ರಾಜಸ್ಥಾನ ಅಥವಾ ವಿದೇಶದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಲು ಪ್ಲಾನ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment