ಕೊಂದು ಸುಟ್ರೂ ಸುಡದ ಸರ್ಪ.. ಗಂಡು ಹಾವು ಸಾಯಿಸಿದ್ದಕ್ಕೆ ಹೆಣ್ಣು ಹಾವಿನಿಂದ ಸೇಡು; ಏನಿದು ದೈವ ಪವಾಡ?

author-image
admin
Updated On
ಕೊಂದು ಸುಟ್ರೂ ಸುಡದ ಸರ್ಪ.. ಗಂಡು ಹಾವು ಸಾಯಿಸಿದ್ದಕ್ಕೆ ಹೆಣ್ಣು ಹಾವಿನಿಂದ ಸೇಡು; ಏನಿದು ದೈವ ಪವಾಡ?
Advertisment
  • ಜೋಡಿ ನಾಗರಹಾವಿನ ದ್ವೇಷದ ರೋಚಕ ರಿಯಲ್ ಸ್ಟೋರಿ ಇದು!
  • ನಾಗರಹಾವನ್ನ ಕೊಂದ ಕಾರಣಕ್ಕೆ ಇನ್ನೊಂದು ಬೆಂಬಿಡದೇ ಕಾಡ್ತಿದೆ
  • ಕೊಂದಿರೋ ನಾಗರ ಹಾವಿನ ಹೆಂಡತಿ ಕಂಡು ಬೆಚ್ಚಿ ಬಿದ್ದ ಜನರು

ಹಾವಿನ ದ್ವೇಷ ಹನ್ನೆರಡು ವರ್ಷ ಅಂತ ಹಿರಿಯ ನಟ ಡಾ.ವಿಷ್ಣುವರ್ಧನ್ ನಟಿಸಿದ ನಾಗರಹಾವು ಸಿನಿಮಾದಲ್ಲಿ ಕೇಳಿದ್ವಿ. ಹಾವಿಗೂ ದ್ವೇಷ ಇರುತ್ತಾ.. ಅವುಗಳ ಮೇಲೆ ನಂಬಿಕೆ ಇಲ್ಲ ಅಂತಾರೆ. ಕೆಲವರು ನಂಬುತ್ತಾರೆ. ಅದ್ರಲ್ಲೂ ಜೋಡಿ ನಾಗರಹಾವು ದ್ವೇಷದ ಬಗ್ಗೆ ನೀವ್ ಕೇಳಿದಿರಾ. ನಮ್ಮ ರಾಜ್ಯದಲ್ಲೇ ಆಗಿರೋ ಈ ಒಂದು ಘಟನೆ ಅಚ್ಚರಿಗೆ ಕಾರಣವಾಗಿದೆ.

ಜೋಡಿ ನಾಗರಹಾವು ಅಂತಂದ್ರೆ ಹೆಣ್ಣು ಹಾಗೂ ಗಂಡು ನಾಗರಹಾವುಗಳು. ಆ ಜೋಡಿ ಹಾವುಗಳಲ್ಲಿ ಒಂದನ್ನ ಬಲಿ ಕೊಟ್ರೆ ಅಥವಾ ಸಾಯಿಸಿಬಿಟ್ರೆ ಇನ್ನೊಂದು ಹಾವು ಸೇಡು ತೀರಿಸಿಕೊಳ್ಳುತ್ತೆ ಅಂತ ಹೇಳ್ತಾರೆ. ಈ ಮಾತು ಸತ್ಯ ಅನ್ನೋ ರೀತಿಯ ಘಟನೆ ಒಂದು ನಡೆದಿದೆ. ಒಂದು ನಾಗರಹಾವನ್ನ ಕೊಂದ ಕಾರಣಕ್ಕೆ ಇನ್ನೊಂದು ನಾಗರ ಹಾವು ಬೆಂಬಿಡದೇ ಕಾಡ್ತಾ ಇತ್ತಂತೆ. ಹೀಗಾಗಿ ಒಂದೇ ರಾತ್ರಿಯಲ್ಲಿ ನಾಗ ದೇವನ ದೇವಸ್ಥಾನವನ್ನ ಊರಿನವರೆಲ್ಲಾ ಸೇರಿ ಕಟ್ಟಿದ್ದಾರೆ. ಯಾವ ಜೋಡಿ ನಾಗರಹಾವು. ಯಾರಿಗೆ ಕಾಡ್ತಿತ್ತು. ಅದಕ್ಕೆ ಊರಿನವ್ರೆಲ್ಲಾ ಸೇರಿ ಏನ್ ಮಾಡಿದ್ರು ಅಂತ ಕೇಳಿದ್ರೇ ನಿಜಕ್ಕೂ ಶಾಕ್ ಆಗ್ತೀರಾ.

ಇದನ್ನೂ ಓದಿ: VIDEO: ಜೋಗಿ ಅಮ್ಮನನ್ನೂ ಮೀರಿಸುವ ಹಾರ್ಟ್​​ ಟಚ್ಚಿಂಗ್ ಸ್ಟೋರಿ ಇದು; ಕರುಳು ಚುರ್ ಅನ್ನುತ್ತೆ! 

ಈ ಘಟನೆ ನಡೆದಿರೋದು ಧಾರವಾಡ ಜಿಲ್ಲೆಯ ಗಳಗಿ ಹುಲಕೊಪ್ಪ ಗ್ರಾಮದಲ್ಲಿ. ಗ್ರಾಮದಲ್ಲಿರೋ ಹನುಮಂತ ಜಾಧವ ಅನ್ನೋರ ಮನೆ ಹಿತ್ತಲಿನಲ್ಲಿ ದೊಡ್ಡ ನಾಗರಹಾವೊಂದು ನಾಗರ ಪಂಚಮಿ ಹಿಂದಿನ ದಿನ ಕಾಣಿಸಿತ್ತು. ಅದರ ಹಿಂದಿನ ತುಂಬಾ ದಿನಗಳಿಂದ ನಾಗರಹಾವು ಓಡಾಡಿಕೊಂಡಿತ್ತು. ಆದ್ರೆ ಕಣ್ಣಿಗೆ ಕಾಣಿಸಿರಲಿಲ್ಲ. ಅದ್ಯವಾಗ ಕಣ್ಣಿಗೆ ಕಾಣಿ​ಸಿತೋ ನೋಡಿ ಆ ನಾಗರಹಾವನ್ನ ಕೋಲಿನಲ್ಲಿ ಹೊಡೆದು ಕೊಂದಿದ್ದಾರೆ.

ಅದಾದ ಒಂದು ವಾರದಲ್ಲೇ ಹನುಮಂತ ಜಾಧವ್ ಅವರ 11 ವರ್ಷದ ಪೂಜಾ ಅನ್ನೋ ಹುಡುಗಿಗೆ ಇದೇ ಹಿತ್ತಲಿನಲ್ಲಿ ನಾಗರಹಾವು ಕಾಣ್ಸೋಕೆ ಶುರುವಾಗಿದೆ. ಆ ಹುಡುಗಿಗೆ ಮಾತ್ರ ಅಲ್ಲ. ಅಕ್ಕಪಕ್ಕದಲ್ಲಿರೋ ಮನೆಗಳ ಚಿಕ್ಕ ಚಿಕ್ಕ ಮಕ್ಕಳಿಗೆ ಆ ಹಾವು ಕಾಣಿಸಿತ್ತು ಅಂತ ಹೇಳ್ತಾರೆ. ಊರಿನವ್ರಿಗೆ ಕೇಳಿದಾಗ, ಆಗ ಕೊಂದಿರೋ ನಾಗರ ಹಾವಿನ ಹೆಂಡ್ತಿ ಅದು. ಗಂಡನನ್ನು ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಬಂದಿದೆ. ಇದ್ರಿಂದ ದೂರ ಆಗಬೇಕು ಅಂದ್ರೆ ನೀವು ದೇವಸ್ಥಾನ ಕಟ್ಟಿ ಅಂತ ಹುಡುಗಿ ಪೂಜಾ ಬಾಯಲ್ಲಿ ಹೇಳಿದ್ದಾಳೆ.

ಇದ್ರ ಜೊತೆಗೆ, ಹಾವನ್ನ ಕೊಂದ ಪಾರ್ಥಿವ ಶರೀರವನ್ನ ದಹನ ಮಾಡೋಕೆ ಹೋದ್ರೆ ಪೂರ್ತಿ ಸುಟ್ಟೆ ಇರಲಿಲ್ವಂತೆ. ಆಗಲೇ ಊರಿನವ್ರಿಗೆ ಇಲ್ಲಿ ಏನಾಗುತ್ತೋ ಅನ್ನೋ ಭಯ, ಹೆದರಿಕೆ ಶುರುವಾಗಿ ಬಿಟ್ತು. ಇದರ ಮದ್ಯದಲ್ಲಿ ಊರಿನ ಮಕ್ಕಳಿಗೆ ಮತ್ತೊಂದು ಹಾವು ಕಾಣ್ಸೋಕೆ ಶುರುವಾಯ್ತು. ಇದು ನಾಗದೇವತೆ ಅಂತಾನೇ ನಂಬಿದ್ದಾರೆ.

ಅಷ್ಟೂ ಮಾತ್ರ ಅಲ್ಲ. ಹಾವು ನೋಡಿದ ಬಾಲಕಿ ಸೇರಿ ಊರಿನ ಕೆಲ ಜನರು, ಮಂಗಳೂರಿನಲ್ಲಿರೋ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ, ದೋಷ ಪರಿಹಾರಕ್ಕೆ ದೇವಸ್ಥಾನ ಒಂದನ್ನ ಕಟ್ಟೋ ಸೂತ್ರವನ್ನೇ ಋತ್ವಿಜರು ಹೇಳಿದ್ದಾರೆ. ಚಿಕ್ಕದ್ರಲ್ಲೇ ಮುಗಿಸಿಕೊಳ್ಳೋಣ ಅನ್ಕೊಂಡು, ಊರಿಗೆ ವಾಪಸ್ ಬಂದ ದಿನದ ರಾತ್ರಿಯೇ ದೇವಸ್ಥಾನ ಕಟ್ಟಿದ್ದಾರೆ. ಭಕ್ತಿಯಿಂದ ಜೋಡಿ ನಾಗರ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಇದು ದೇವರ ಸ್ವರೂಪ ಅಂತಾ ತಿಳಿದುಕೊಂಡು, ಅಕ್ಕಪಕ್ಕದ ಊರಿನ ಜನರು ತಂಡೋಪ ತಂಡವಾಗಿ ಬರ್ತಿದ್ದಾರೆ.

ಇದನ್ನೂ ಓದಿ: ತಂದೆಗೆ ಪ್ಲಾಸ್ಮಾ ದಾನ ಮಾಡಿದ ಅಮೆರಿಕಾದ ಕೋಟ್ಯಾಧೀಶ; ಇದರಿಂದ ಆದ ಲಾಭ ಗೊತ್ತಾದ್ರೆ ಶಾಕ್ ಆಗ್ತೀರಾ! 

ಇದ್ರಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಅಂದ್ರೆ, ಆ ಹುಡುಗಿ ಪೂಜಾ ಹಾಗೂ ಅಕ್ಕಪಕ್ಕದ ಮಕ್ಕಳಿಗೆ ಬಿಟ್ರೆ, ಇದುವರೆಗೂ ಹಾವು ಕಾಣಿಸಿಕೊಂಡೇ ಇರಲಿಲ್ಲ ಅಂತ ಜನ ಹೇಳ್ತಾರೆ. ಹೀಗಾಗಿ ಇದು ನಾಗದೇವತೆಯ ಪವಾಡ. ಆ ಮನೆಯ ಬಾಲಕಿ ಮೂಲಕ ಹೇಳಿಸಿದ್ದಾಳೆ ಅಂತ ಅಂದುಕೊಂಡು ಒಂದೇ ರಾತ್ರಿಯಲ್ಲಿ ನಾಗ ದೇವಸ್ಥಾನ ಕಟ್ಟೆ ಬಿಟ್ಟಿದ್ದಾರೆ. ಈಗ ಕಟ್ಟಿರೋ ದೇವಸ್ಥಾನಕ್ಕೆ ಗೋಪುರ ಕಳಶಗಳನ್ನ ಇಟ್ಟು, ಅಭಿವೃದ್ಧಿ ಮಾಡೋಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ, ಊರಿನ ಗ್ರಾಮಸ್ಥನೊಬ್ಬನ ಮೈ ಮೇಲೆ ನಾಗರಹಾವು ಬಂದಿರೋ ದೃಶ್ಯ ನಮ್ಮ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನ ಕಂಡ ಜನ, ಇಲ್ಲಿ ಏನೋ ಸತ್ಯ ಇದೆ ಅಂತ ಭಾವಿಸಿಕೊಂಡು ಬರ್ತಿದ್ದಾರೆ.

ಹಾವು ತನ್ನ ಜೊತೆಗಿರೋ ಹಾವಿನ ಹತ್ಯೆಗೆ ಸೇಡು ತೀರಿಸಿಕೊಳ್ಳೋದಕ್ಕೆ ಬರ್ತಾ ಇದ್ಯೋ? ಅಥವಾ ಜೊತೆಗಿರೋ ಹಾವನ್ನು ಹುಡುಕಾಡ್ತಾ ಇದ್ಯೋ.. ಗೊತ್ತಿಲ್ಲ. ಆದಷ್ಟು ಬೇಗ ಪರಿಹಾರದ ಮಾರ್ಗ ಸಿಗಲಿ ಅಂತ ಭಾವಿಸೋಣ. ಹಾಗೇ ಹಾವು ಕಂಡಾಗ ಹತ್ಯೆ ಮಾಡ್ಬೇಡಿ. ದೇವರು ಅಂತಾ ನಿಮಗೆ ನಂಬಿಕೆ ಇಲ್ದೇ ಇದ್ರೂ, ಅದು ಒಂದು ಜೀವಿ ಅನ್ನೋ ಮಾನವೀಯತೆ ತೋರಿಸಿ ಅನ್ನೋದೇ ನಮ್ಮ ಕಳಕಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment