/newsfirstlive-kannada/media/post_attachments/wp-content/uploads/2025/01/Mahakumbh-Nagasaadu.jpg)
ಮಹಾಕುಂಭಮೇಳದ ಭವಿಷ್ಯವಾಣಿಗೆ ಪ್ರಯಾಗವೇ ಬೆಚ್ಚಿಬಿದ್ದಿದೆ. ಗ್ರಹಕೂಟಗಳ ಗ್ರಹಚಾರ ಗೊತ್ತಿರೋ ಸಾಧುಗಳೇ ಶಾಕ್ ಆಗಿದ್ದಾರೆ. ಆಧ್ಯಾತ್ಮದ ರಾಜಧಾನಿಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಓರ್ವ ಅಘೋರಿ ಸಾಧು ಮಾತಿಗೆ ತ್ರಿವೇಣಿ ಸಂಗಮ ಶೇಕ್ ಆಗಿದೆ. ಸಾಧು ಸಂತರಿಗೆ ಶಾಹಿ ಸ್ನಾನ ಮಾಡಿಸೋ ಮಾ ಗಂಗೆ ಅಳುತ್ತಾಳಾ? ಚಿತಾಗಾರಕ್ಕೆ ಬಿಡುವೇ ಇರೋದಿಲ್ಲವೇ? ಆಕಾಶವೇ ಕಪ್ಪಾಗಲಿದೆಯೇ? 95 ವರ್ಷ ವಯಸ್ಸಿನ ಆಘೋರಿ ಬಾಬಾಗೆ ಕಾಗೆ ಕೊಟ್ಟ ಸುಳಿವೇನು? ಅಷ್ಟಕ್ಕೂ ಇದೇನಿದು ಅಘೋರ ವಾಣಿ ಅಂತೀರಾ?
ಸಾಕ್ಷಾತ್ ಆಂಜನೇಯ ಕೂಡ ಈ ಸಿದ್ಧಾಶ್ರಮದಲ್ಲಿದ್ದಾರೆಯೇ?
ಹಿಮಾಲಯದ ತುತ್ತತುದಿಯಲ್ಲಿ.. ಸಾಕ್ಷಾತ್ ಶಿವನ ಕೈಲಾಸವಿದೆ ಎಂದು ನಂಬಲಾಗುವ ಕೈಲಾಸ ಪರ್ವತದಲ್ಲಿ ಸಿದ್ಧಾಶ್ರಮ ಅನ್ನೋ ತಾಣವಿದೆ. ಈ ರಹಸ್ಯಮಯ ತಾಣದಲ್ಲೇ ನಾಗಾ ಸಾಧುಗಳು ಜೀವಿಸುತ್ತಾರೆ. ಈ ಸಿದ್ಧಾಶ್ರಮ ಅನ್ನೋ ನಿಗೂಢ ತಾಣದಲ್ಲಿ ಯುಗ ಯುಗಳಿಂದಲೂ ಬದುಕಿರೋ ಚಿರಂಜೀವಿಗಳೂ ಇದ್ದಾರೆ ಎಂಬುದು ಪುರಾಣಗಳ ನಂಬಿಕೆ ಆಗಿದೆ. ಇಲ್ಲೇ ರಾಮ ಭಂಟ ಹನುಮ, ಅಶ್ವತ್ಥಾಮನೂ ಜೀವಿಸುತ್ತಿದ್ದಾರೆ ಎನ್ನಲಾಗುತ್ತದೆ.. ಇಂಥಾ ಅತ್ಯಂತ ರಹಸ್ಯಮಯ ತಾಣದಿಂದ ಪ್ರತೀ ಕುಂಭಮೇಳಕ್ಕೆ ಓರ್ವ ಅಘೋರಿ ನಾಗಾ ಸಾಧು ಬರ್ತಾರೆ.. ಆ ನಾಗಾ ಸಾಧು ಪ್ರತೀ ಕುಂಭದಲ್ಲೂ ಒಂದು ಭವಿಷ್ಯ ಹೇಳುತ್ತಾರೆ. ಅದು ಸನಾತನ ಮಾನವ ಧರ್ಮಕ್ಕೆ ನಿಜವಾದ ಕಾರಣಿಕ ಎಂದೇ ನಂಬಲಾಗುತ್ತದೆ. ಇದೇ ಶುಕ್ರವಾರ ಮಹಾಕುಂಭಮೇಳಕ್ಕೆ 95 ವರ್ಷ ವಯಸ್ಸಿನ ಅಘೋರಿ ನಾಗಾ ಸಾಧು ಬಂದಿಳಿದಿದ್ರು ಎನ್ನಲಾಗುತ್ತಿದೆ.. ಇದೇ ಬಾಬಾರ ಭವಿಷ್ಯವಾಣಿಯ ಬೆನ್ನತ್ತಿ ನಿಮ್ಮ ನ್ಯೂಸ್ ಫಸ್ಟ್ ಅಚ್ಚರಿಯ ಸಂಗತಿಗಳನ್ನು ಹೊತ್ತು ತಂದಿದೆ.
ಮಹಾಕುಂಭಮೇಳದಲ್ಲಿ ಈ ಓರ್ವ ಅಘೋರಿ ಸಾಧು ಅಚ್ಚರಿ ಮೂಡಿಸುತ್ತಿದ್ದಾರೆ. ಮಿಂಚು ಹರಿಯುವ ಘಳಿಗೆಯಲ್ಲಿ ಕಾಣಿಸಿಕೊಳ್ಳುವ ಈ ಅಘೋರಿ ಸಾಧು ಬೆಚ್ಚಿಬೀಳಿಸುವ ಭವಿಷ್ಯವಾಣಿ ನುಡಿದಿದ್ದಾರೆ. ಇದೀಗ ಆಧ್ಯಾತ್ಮದ ರಾಜಧಾನಿ ದೇವ ಪ್ರಯಾಗದಲ್ಲಿ ಇದೇ ವಿಚಾರ ಚರ್ಚೆ ಆಗುತ್ತಿದೆ. ಮಾ ಗಂಗೆಯ ಬಗ್ಗೆ ಬೆಚ್ಚಿಬೀಳಿಸೋ ಭವಿಷ್ಯವಾಣಿ ನುಡಿದಿದ್ದಾರೆ. ಇದೇ ಭವಿಷ್ಯ ಇದೀಗ 13 ಅಖಾಡಗಳನ್ನೂ ಚಿಂತೆಗೀಡುಮಾಡಿವೆ. ಅಷ್ಟಕ್ಕೂ ಏನದು ಅಘೋರ ವಾಣಿ ಅಂತೀರಾ?
ಅತ್ಯಂತ ರಹಸ್ಯಮಯ ಹಾಗೂ ಚಿರಂಜೀವಿಗಳು, ದೀರ್ಘಾಯುಷಿಗಳು ಜೀವಿಸುತ್ತಿರೋ ತಾಣವೆಂದೇ ಹೇಳಲಾಗುವ ಹಿಮಾಲಯದ ಸಿದ್ಧಾಶ್ರಮದಿಂದ ಬಂದ ಓರ್ವ ಅಘೋರಿ ನಾಗಾ ಸಾಧು ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ:ತ್ರೀವಣಿ ಸಂಗಮದಲ್ಲಿ ಸ್ನಾನ ಮಾಡಿದ ಬಳಿ ಈ ಕಾರ್ಯಗಳನ್ನು ಮಾಡಿ; ಅಮೃತ ಸ್ನಾನದ ಲಾಭಗಳನ್ನು ಪಡೆಯಿರಿ
ಅಘೋರಿ ಬಾಬಾ ಭಸ್ಮಧಾರಣೆ ಮಾಡಿಕೊಂಡು ಕೂತಿರುತ್ತಾರೆ. ಅವರ ಮುಖವೂ ಸರಿಯಾಗಿ ಕಾಣುತ್ತಿಲ್ಲ. ಆದರೇ, ಚಿತಾಭಸ್ಮದಂತೆಯೇ ಕಾಣುತ್ತಿರೋ ಓರ್ವ ಮನುಷ್ಯ ರೂಪ ಎದ್ದು ಕಾಣುತ್ತದೆ.. ಇದೇ 14 ಸೆಕೆಂಡ್ಗಳ ವಿಡಿಯೋದಲ್ಲಿರೋದು ಕಾಲಪುರುಷ ಅಘೋರಿ ನಾಗಾ ಸಾಧು. ಕಳೆದ 84 ವರ್ಷಗಳಲ್ಲಿ ಈ ಅಘೋರಿ ನಾಗಾ ಸಾಧು ಭರ್ತಿ 7 ಕುಂಭಮೇಳಗಳನ್ನು ನೋಡಿದ್ದಾರೆ. ಪ್ರತೀ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ.. ಅಂಥಾ 7 ಕುಂಭಮೇಳಗಳಲ್ಲಿ ಭಾಗವಹಿಸಿ ಶಾಹಿ ಸ್ನಾನ ಮಾಡಿದ್ದಾರೆ.. ಪ್ರತೀ ಕುಂಭಮೇಳಕ್ಕೆ ತಪ್ಪದೇ ಬರೋ ಇದೇ ಅಘೋರಿ ನಾಗಾ ಸಾಧು ಮಹಾಕುಂಭಮೇಳದಲ್ಲೂ ಕಾಣಿಸಿಕೊಂಡಿದ್ರು. ಇದೇ ವೇಳೆಯೇ ಬೆಚ್ಚಿಬೀಳಿಸೋ ಭವಿಷ್ಯವಾಣಿ ನುಡಿದಿದ್ದಾರೆ.
ಇದನ್ನೂ ಓದಿ:ಮಹಾಕುಂಭಮೇಳದಲ್ಲಿ 93 ವರ್ಷದ ದಾಖಲೆಯನ್ನು ಮುರಿದ ಲಾರೆನ್ ಪಾವೆಲ್ ಅವರ ಫ್ಲೈಟ್; ಹೇಗೆ ಗೊತ್ತಾ?
ಕಾಲಪುರುಷ ಅಘೋರಿ ನಾಗಾ ಸಾಧು ತ್ರಿವೇಣಿ ಸಂಗಮದ ತಟದಲ್ಲಿ ನಿಂತು ಇಂಥದ್ದೊಂದು ಭವಿಷ್ಯವಾಣಿ ನುಡಿದಿದ್ದಾರೆ. ಮುಂದಿನ ಕುಂಭಮೇಳದ ಹೊತ್ತಿಗೆ ಹೆಣಗಳ ರಾಶಿಯೇ ಬೀಳಿದೆಯಂತೆ.. ಚಿತಾಗಾರಕ್ಕೆ ಬಿಡುವೇ ಇರೋದಿಲ್ಲವಂತೆ.. ಸೇವಿಸೋ ಶುದ್ಧಗಾಳಿ ವಿಷವಾಗಲಿದೆಯಂತೆ. ಇನ್ನು, ಬೆಳ್ಳನೆಯ ಆಗಸ ಅಕ್ಷರಶಃ ಕಪ್ಪಾಗಲಿದೆಯಂತೆ. ಶತಶತಮಾನಗಳಿಂದಲೂ ಶಾಹಿ ಸ್ನಾನ ಮಾಡುಸುತ್ತಿರೋ, ಸಕಲ ಪಾಪ ತೊಳೆಯುತ್ತಿರೋ ಮಾ ಗಂಗೆ ಅಕ್ಷರಶಃ ಅಳಲಿದ್ದಾಳಂತೆ. ಹಾಗಾಗಿಯೇ ಎಚ್ಚರ ಎಚ್ಚರ ಎಚ್ಚರ ಅನ್ನೋ ಮೂಲಕ ಬಹುದೊಡ್ಡ ವಾರ್ನಿಂಗ್ ಒಂದನ್ನು ಕಾಲಪುರುಷ ಅಘೋರಿ ಬಾಬಾ ನೀಡಿದ್ದಾರೆ. ಈ ಅಘೋರಿ ನಾಗಾ ಸಾಧು ಇಂಥದ್ದೊಂದು ಭವಿಷ್ಯವಾಣಿ ನೀಡೋದಕ್ಕೂ ನಿಸರ್ಗವೇ ನೀಡಿದ ಒಂದು ಸುಳಿವು ಕಾರಣ ಎಂದೇ ಹೇಳಲಾಗುತ್ತಿದೆ.
ಕುಂಭಮೇಳದ ಕಾಗೆಗಳು ನೀಡಿದ್ವಾ ಕಟು ಭವಿಷ್ಯದ ಸುಳಿವು?
ಕಾಗೆ ಅತ್ಯಂತ ಜಾಗೃತ ಜೀವಿ. ವಿಕೋಪ, ಗಂಡಾಂತರಗಳನ್ನು ಗ್ರಹಿಸೋ ಶಕ್ತಿ ಇದಕ್ಕೆ ಇರುತ್ತದೆ. ಅಘೋರಿ ನಾಗಾ ಸಾಧುಗಳ ಪ್ರಕೃತಿ ಅಣುರೇಣುವಿನೊಂದಿಗೆ ಮಾತಾಡಬಲ್ಲರು. ಅವುಗಳ ಮರ್ಮರವನ್ನು ಅರಿಯಬಲ್ಲರು. ಹಾಗೆಯೇ ಕಾಲಪುರುಷ ಅಘೋರಿ ನಾಗಾ ಸಾಧು ಶಾಹಿ ಸ್ನಾನಕ್ಕೆ ಹೊರಟ ಘಳಿಗೆಯೇ ಕಾಗೆಗಳ ಸದ್ದು ಕಿವಿಗೆ ಬಿದ್ದಿದೆ. ಮಹಾಕುಂಭಮೇಳದಲ್ಲಿ ಈ ಹಿಂದೆ ಎಂದಿಗೂ ಅಂಥಾ ಧಾಟಿಯ ಮಾತು ಕೇಳಿರಲಿಲ್ಲ ಅನ್ನೋದನ್ನ ಕಾಲಪುರುಷ ಬಾಬಾ ಹೇಳಿಕೊಂಡಿದ್ದಾರೆ. ಪ್ರತೀ ಕುಂಭದ ಶಾಹಿ ಸ್ನಾನಕ್ಕೂ ಮಹಾಕುಂಭಮೇಳದ ಶಾಹಿ ಸ್ನಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದೇ ಹೇಳುತ್ತಿದ್ದಾರೆ.. ಸ್ಮಶಾನಘಾಟ್ನಲ್ಲಿ ಕುಳಿತಿದ್ದ ಕಾಗೆಗಳ ಮರ್ಮರವೇ ಬಹುದೊಡ್ಡ ಗಂಡಾಂತರ ಎದುರಾಗಲಿದೆ ಅನ್ನೋ ಭವಿಷ್ಯವಾಣಿಯ ಸುಳಿವು ನೀಡಿದೆ ಎನ್ನಲಾಗುತ್ತಿದೆ..
ದೇವ ಪ್ರಯಾಗದ ಸ್ಮಶಾನ ಘಾಟ್ನಲ್ಲಿನ ಕಾಗೆಗಳ ಮರ್ಮರ ಕಾಲಪುರುಷ ಅಘೋರಿ ಕಿವಿಗೆ ಬಿದ್ದಿದ್ದು ಹೀಗೆ ಎನ್ನಲಾಗುತ್ತಿದೆ.. ಅಂತ್ಯವಿಲ್ಲದ ಮಾರಣಹೋಮ ನಡೆಯಲಿದೆ. ಭೂಮಿ ತನ್ನ ಶ್ವಾಸವನ್ನೇ ಬದಲಿಸೋ ದಿನ ಬರುತ್ತದೆ ಅನ್ನೋ ಇದೇ ಸುಳಿವನ್ನು ಆಧರಿಸಿಯೇ ನಾಗಾ ಸಾಧು ಈ ಭವಿಷ್ಯವಾಣಿ ನುಡಿದಿದ್ದಾರೆ ಎನ್ನಲಾಗುತ್ತಿದೆ. ಕಾಲಪುರುಷ ಅಘೋರಿ ನಾಗಾ ಸಾಧು ಕೇವಲ ಒಂದೇ ಒಂದು ಸಾಲಿನ ಭವಿಷ್ಯವಾಣಿ ಹೇಳಿಲ್ಲ. ಬದಲಿಗೆ ಬಹುದೊಡ್ಡ ಬದಲಾವಣೆ ಎಷ್ಟು ದಿನಗಳಲ್ಲಿ ಆಗಲಿದೆ ಅನ್ನೋ ಖಚಿತ ಕಾರ್ಣಿಕವನ್ನೇ ಹೇಳಿದ್ದಾರೆ.
ಕಾಲಪುರುಷ ಅಘೋರಿ ನಾಗಾ ಸಾಧು ಕೇವಲ ಒಂದು ಸಾಲಿನ ಭವಿಷ್ಯವಾಣಿ ಹೇಳಿಲ್ಲ. ಬದಲಿಗೆ ಬೆಚ್ಚಿಬೀಳಿಸೋ ಬದಲಾವಣೆಗಳ ಪಟ್ಟಿಯನ್ನೇ ನೀಡಿದ್ದಾರೆ. ಸಾಕ್ಷಾತ್ ಕಾಲಪುರುಷ ಅಘೋರಿ ಬಾಬಾ ಹೇಳೋ ಪ್ರಕಾರ ಮುಂದಿನ ಕುಂಭಮೇಳದ ಹೊತ್ತಿಗೆ ದೇವ ಪ್ರಯಾಗದ ಚಿತ್ರಣವೇ ಬದಲಾಗಲಿದೆ. ಅಷ್ಟೇ ಅಲ್ಲ, ಮಾ ಗಂಗೆ ಕೂಡ ತನ್ನ ದಿಕ್ಕು ದೆಸೆಗಳನ್ನೇ ಬದಲಿಸಿಕೊಳ್ಳಲಿದ್ದಾರೆ. ಬಹುದೊಡ್ಡ ಆಶ್ಚರ್ಯ ಎದುರಾಗಲಿದೆ. ಇದುವರೆಗೂ ಸಾಮಾನ್ಯರ ಕಣ್ಣಿಗೆ ಕಾಣದೇ ಇದ್ದ ಸರಸ್ವತಿ ನದಿ ಉಕ್ಕಿ ಹರಿಯಲಿದೆ ಅನ್ನೋ ಕಾರ್ಣಿಕ ನುಡಿದಿದ್ದಾರೆ.
ಕಾಲಪುರುಷ ಅಘೋರಿ ನಾಗಾ ಸಾಧು ಮಹಾಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡಿಕೊಂಡ ಮೇಲೆ ಅಲ್ಲಿ ನೆರೆದಿದ್ದ ಸಾಧು ಸಂತರನ್ನು ಬೆಚ್ಚಿಬೀಳಿಸಿದ್ದಾರೆ. ನೀರಿನ ಬಹುದೊಡ್ಡ ಅಭಾವ ಎದುರಾಗೋ ಸುಳಿವನ್ನೂ ನೀಡಿದ್ದಾರೆ.. ಮಾ ಗಂಗೆ ತನ್ನ ದಿಕ್ಕು ಬದಲಿಸೋ ಸಾಧ್ಯತೆ ಇದೆ ಎಂದಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಸುಪ್ತ ನದಿ ಅನಿಸಿಕೊಂಡಿರೋ ಸರಸ್ವತಿ ಸಾಮಾನ್ಯರ ಕಣ್ಣಿಗೂ ಕಾಣಲಿದ್ದಾಳೆ ಅನ್ನೋದು ಕಾಲಪುರುಷ ಅಘೋರಿ ನಾಗಾ ಸಾಧು ಭವಿಷ್ಯವಾಣಿಯ ಬಲು ರೋಚಕ ಸಂಗತಿ.
ಕಾಲಪುರುಷ ಅಘೋರಿ ನಾಗಾ ಸಾಧು ಭವಿಷ್ಯವಾಣಿ ಇದುವರೆಗೂ ಸುಳ್ಳೇ ಆಗಿಲ್ಲ.
ಪ್ರತೀ 12 ವರ್ಷಕ್ಕೊಮ್ಮೆ ಬರುವ ನಾಗಾ ಸಾಧು ಕಾರ್ಣಿಕ ಹೇಳ್ತಾನೇ ಇರ್ತಾರೆ.. 25 ವರ್ಷಗಳ ಹಿಂದೆಯೇ ಪ್ರಯಾಗವನ್ನು ಓರ್ವ ಸಾಧು ಆಳುತ್ತಾನೆ ಅನ್ನೋ ಮೂಲಕ ಅಚ್ಚರಿ ಮೂಡಿಸಿದ್ರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧು ಸಂತರು ಚುನಾಯಿತ ಪ್ರತಿನಿಧಿಗಳಾಗಿ ಆಳ್ವಿಕೆ ಸಾಧ್ಯವೇ ಅನ್ನೋ ಪ್ರಶ್ನೆ ಮೂಡಿತ್ತು. ಆದರೇ, ಇವತ್ತಿಗೂ ಸಹ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿರೋದು ನಾಥ ಪರಂಪರೆಯ ಸ್ವಾಮೀಜಿ ಯೋಗಿ ಆದಿತ್ಯನಾಥ್. ಕಾಲಪುರುಷ ಅಘೋರಿ ನಾಗಾ ಸಾಧು ಭವಿಷ್ಯವನ್ನು ಖುದ್ದು ಯೋಗಿ ಆದಿತ್ಯನಾಥ್ ಕೂಡ ಚಾಚೂ ತಪ್ಪದೇ ನಂಬುತ್ತಾರೆ. ಆಧ್ಯಾತ್ಮದ ರಾಜಧಾನಿ ಅನಿಸಿಕೊಂಡಿರೋ ಮಹಾಕುಂಭಮೇಳದಲ್ಲಿನ 13 ಅಖಾಡಗಳಲ್ಲಿ ಸಾಧು ಸಂತರು, ಮಹಾಂತರು, ಮಹಾಮಂಡಳೇಶ್ವರರು ಬಹುದೊಡ್ಡ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ:ಬಾಹ್ಯಾಕಾಶದಲ್ಲೂ ಮಹಾಕುಂಭ ಹೀಗೆಯೇ ಕಾಣುತ್ತದೆ.. ಅದ್ಭುತ ಫೋಟೋ ಹಂಚಿಕೊಂಡ ISRO
ಖುದ್ದು ಕಾಲಪುರುಷ ಅಘೋರಿ ನಾಗಾ ಸಾಧು ಭವಿಷ್ಯವಾಣಿ ಎಚ್ಚರಿಕೆಯ ಕರೆಗಂಟೆ ಅಂತಲೇ ಹೇಳಲಾಗುತ್ತಿದೆ. ತೀರಾ ಕಾಕತಾಳೀಯ ಸಂಗತಿ ಏನಂದ್ರೆ ಇತ್ತೀಚೆಗೆ ಕಲ್ಕಿ ಅನ್ನೋ ಸಿನಿಮಾ ಬಂದಿದೆ. ಇದೇ ಸಿನಿಮಾದಲ್ಲೇ ಕಾಶಿಯನ್ನು ಅತ್ಯಂತ ಬರಡು ಭೂಮಿಯನ್ನಾಗಿ ತೋರಿಸಲಾಗಿದೆ. ಒಂದೇ ಒಂದು ಹನಿ ನೀರಿಗಾಗಿ ಅಕ್ಷರಶಃ ಯುದ್ಧ ಆಗುವಂಥಾ ಸನ್ನಿವೇಶವನ್ನು ಕಲ್ಕಿ 2898 ಎಡಿ ಸಿನಿಮಾದಲ್ಲಿ ತೋರಿಸಲಾಗಿದೆ.. ಭೂಮಿ ಮೇಲಿನ ಮೊದಲ ನಗರ.. ಪ್ರಪಂಚದ ಕೊನೆಯ ನಗರ ಅದುವೇ ಕಾಶಿ ಅನ್ನೋದನ್ನೂ ಸಿನಿಮಾದಲ್ಲಿ ನೋಡಬಹುದು. ಸದ್ಯ, ಕಾಲಪುರುಷ ಅಘೋರಿ ನಾಗಾ ಸಾಧು ಕೂಡ ಇಂಥದ್ದೇ ಕಠೋರ ಭವಿಷ್ಯ ನುಡಿದಿದ್ದಾರೆ. ಇದೆಲ್ಲದರ ಮಧ್ಯೆಯೇ ಬೆಚ್ಚಿಬೀಳಿಸೋದು ಮಾ ಗಂಗೆ ಅಳುತ್ತಾಳೆ ಅನ್ನೋ ಭವಿಷ್ಯವಾಣಿಯ ಸಾಲು. ನಿಜಕ್ಕೂ ಈ ಕಾರ್ಣಿಕದ ಅರ್ಥವೇ ಬೇರೆಯದ್ದೇ ರೀತಿಯಲ್ಲಿದೆ. ನಾವು ನೋಡ್ತಿರೋ ಪ್ರಯಾಗ್ ರಾಜ್ ಚಿತ್ರಣ ಬದಲಾಗಲಿದೆ. ಮಾ ಗಂಗೆಯಷ್ಟೇ ಅಲ್ಲ. ಜೀವನದಿ ಕಾವೇರಿಯ ಚಿತ್ರಣವೂ ಬದಲಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ