ಕುಂಭ ಮೇಳದಲ್ಲಿ ಇದ್ದಕ್ಕಿದ್ದಂತೆ ರೊಚ್ಚಿಗೆದ್ದ ನಾಗಸಾಧುಗಳು.. ಕೆಲವರ ಮೇಲೆ ದಾಳಿ.. ಆಗಿದ್ದೇನು..?

author-image
Bheemappa
Updated On
ಕುಂಭ ಮೇಳದಲ್ಲಿ ಇದ್ದಕ್ಕಿದ್ದಂತೆ ರೊಚ್ಚಿಗೆದ್ದ ನಾಗಸಾಧುಗಳು.. ಕೆಲವರ ಮೇಲೆ ದಾಳಿ.. ಆಗಿದ್ದೇನು..?
Advertisment
  • ಕುಂಭಮೇಳ ನಡೆಯುತ್ತಿರುವ ಕ್ಷೇತ್ರದಲ್ಲಿ ವಿರೋಧ ವ್ಯಕ್ತ
  • ಪೋಸ್ಟರ್​ಗಳನ್ನು ಹರಿದು ಹಾಕಿ, ನಾಗ ಸಾಧುಗಳು ಗರಂ
  • ವೇದಿಕೆ ಮೇಲಿನ ವಸ್ತುಗಳನ್ನ ನಾಶ ಮಾಡಿದ ಸಾಧುಗಳು

ಲಕ್ನೋ: ಕುಂಭಮೇಳ ಮೂಢನಂಬಿಕೆಯ ಜಾತ್ರೆ, ಅದೊಂದು ನೆಪ ಮಾತ್ರ ಎಂದು ಹೋರಾಟ ಮಾಡುತ್ತಿದ್ದ ಹೋರಾಟಗಾರರ ಮೇಲೆ ನಾಗ ಸಾಧುಗಳು ದಾಳಿ ಮಾಡಿ ಖಂಡಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನ ಕುಂಭ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಪ್ರಯಾಗರಾಜ್​ನ ಪ್ರದೇಶವೊಂದರಲ್ಲಿ ಕೆಲವು ಹೋರಾಟಗಾರರು ಪೋಸ್ಟರ್​ಗಳನ್ನು ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಿದ್ದರು. ಪೋಸ್ಟರ್​ಗಳ ಮೇಲೆ ಕುಂಭಮೇಳವು ಮೂಢನಂಬಿಕೆಯ ಜಾತ್ರೆ, ಇದು ಕೇವಲ ಜಾಗೃತಿಗೆ ಮಾತ್ರ ಮಾಡಲಾಗುತ್ತಿದೆ. ನಿಮಗೆ ಸ್ವಾತಂತ್ರ್ಯ ಬೇಕಾದರೆ, ಹೆಚ್ಚಿನ ಜ್ಞಾನ ಪಡೆಯಿರಿ ಎಂದು ಬರೆಯಲಾಗಿತ್ತು. ಅಲ್ಲದೇ ಮೈಕ್​ನಲ್ಲಿಯು ವಿರೋಧವಾಗಿ ಘೋಷಣೆ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಕೆಲ ನಾಗ ಸಾಧುಗಳು ಹೋರಾಟಗಾರರ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

publive-image

ಇದನ್ನೂ ಓದಿBBK11; ಬಿಗ್ ಸರ್ಪ್ರೈಸ್.. ಶಿಶಿರ್, ಗೋಲ್ಡ್ ಸುರೇಶ್, ಅನುಷಾ, ಹಂಸ, ಯಮುನಾ, ಮಾನಸ ರೀ ಎಂಟ್ರಿ

ಪ್ರತಿಭಟನೆಗಾರರ ಮೇಲೆ ದಾಳಿ ಮಾಡಿ ಅವರ ಕೈಯಲ್ಲಿದ್ದ, ಗೋಡೆಗೆ ಅಂಟಿಸಿದ್ದ ಪೋಸ್ಟರ್​ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮೈಕ್​ನಲ್ಲಿ ಕೂಡ ವಿರೋಧವಾಗಿ ಪ್ರಚಾರ ಮಾಡುತ್ತಿದ್ದನ್ನು ತಡೆದಿದ್ದಾರೆ. ವೇದಿಕೆಯನ್ನು ನಾಶಗೊಳಿಸಿ ಪ್ರತಿಭಟನಾಕಾರರ ವಿರುದ್ಧ ನಾಗಾ ಸಾಧುಗಳು ಸಿಟ್ಟಿಗೆದ್ದಿದ್ದಾರೆ.

ಇನ್ನು ಈ ಹೋರಾಟದ ಹಿಂದಿನ ಅಸಲಿ ಸತ್ಯ ಏನು ಎಂಬುದು ತಿಳಿಯಲು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ದೂರು ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ಮಹಾ ಕುಂಭಮೇಳದಲ್ಲಿ ಈ ರೀತಿ ಮಾಡಿರುವುದಕ್ಕೆ ಪ್ರತಿಭಟನೆಗಾರರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.


">January 16, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment