ನನ್ನ ಕೋಪಕ್ಕೆ ಬಲಿ ಆಗ್ಬೇಡಿ.. ಕಲಾವಿದರ ಸಂಘದಲ್ಲಿ ದೈವ ನಾಗದರ್ಶನದ ಪ್ರಶ್ನೆ; ಅಸಲಿಗೆ ಆಗಿದ್ದೇನು?

author-image
Gopal Kulkarni
Updated On
ಕಲಾವಿದರ ಮೇಲೆ ನಾಗದೈವ ಕೆಂಡ.. ಸ್ಯಾಂಡಲ್‌ವುಡ್‌ನಲ್ಲಿ ಆಗಿರೋ ದೊಡ್ಡ ತಪ್ಪೇನು? ಪೂಜೆಯಲ್ಲಿ ಆಗಿದ್ದೇನು?
Advertisment
  • ನಾಗದೇವರ ಬಗ್ಗೆ ಸವಿಸ್ತಾರವಾಗಿ ವಿವರ ನೀಡಿದ ವಾಸುದೇವಾಚಾರ್ಯ
  • ನಾಗದೇವರು ಅಂದರೆ ಕಲಿಯುಗದಲ್ಲಿ ಕಾಣುವ ಪ್ರತ್ಯಕ್ಷ ದೇವರು
  • ತಲೆ ತಲೆಮಾರುಗಳಿಂದ ನಾಗಾರಾಧನೆ ನಡೆದುಕೊಂಡು ಬಂದಿದೆ

ಬೆಂಗಳೂರು: ಇಂದು ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಪೂಜೆ, ಹೋಮ ಹವನಗಳು ನಡೆದಿವೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸಮಸ್ಯೆಗಳು ಬೆಂಬಿಡದೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಕಲಾವಿದರ ಸಂಘ ಹೋಮ ಹವನ ಮಾಡಿಸಿದೆ. ಇದೇ ವೇಳೆ ನಾಗದರ್ಶನವೂ ಕೂಡ ನಡೆದಿದೆ. ನಾಗದರ್ಶನದ ವೇಳೆ ಹಿರಿಯ ನಟ ದೊಡ್ಡಣ್ಣ ಹಾಗೂ ರಾಕ್​ಲೈನ್ ವೆಂಕಟೇಶ್ ನಾಗದರ್ಶಕ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಾಗದೇವರು ತಪ್ಪುಗಳ ಪಟ್ಟಿ ಕೊಟ್ಟಿದ್ದಾರೆ.

publive-image
ನಿಮ್ಮಲ್ಲಿ ಒಗ್ಗಟ್ಟು ಇದೆಯಾ..? ಇಷ್ಟು ಮಾಡಿದ್ರೂ ಎಲ್ಲರೂ ಒಟ್ಟಾಗಿ ಸೇರಿಲ್ಲ. ನನ್ನನ್ನು ಭಯಪಟ್ಟು ಪೂಜಿಸಬೇಡಿ ಪ್ರೀತಿಯಿಂದ ಗೆಲ್ಲಿ, ಈ ಜಾಗದ ಪಾವಿತ್ರ್ಯ ಹಾಳು ಮಾಡಬೇಡಿ ಎಂದು ಹೇಳಿದೆ. ಈ ಸ್ಥಳದಲ್ಲಿ ಧರ್ಮದ ಕಾರ್ಯಗಳು ನಡೆಯುತ್ತಿದ್ದವು, ಇಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದೀರಿ, ಅದು ಸರಿಯಲ್ಲ, ಇದನ್ನೆಲ್ಲಾ ಸರಿಪಡಿಸಿಕೊಳ್ಳಿ, ದೊಡ್ಡ ಕೆಲಸಗಳು ಆಗಬೇಕು ಹಿಂದೆ ನಡೆದಿರುವಂತೆ ಎಲ್ಲಾ ಹಿರಿಯರು ಇಲ್ಲಿ ಸೇರುವಂತೆ ಆಗಬೇಕು, ಎಲ್ಲರೂ ಒಗ್ಗಟ್ಟಾಗಿ ನಿಲ್ಲಿ. ದಿನ ಇಲ್ಲಿ ದೀಪ ಬೆಳಗಿಸಿ, ಶತ್ರುನಾಶ, ಅಪಕೀರ್ತಿ ಎಲ್ಲವೂ ದೂರವಾಗುತ್ತೆ. ನನ್ನ ಕೋಪಕ್ಕೆ ಬಲಿಯಾಗಬೇಡಿ, ನಾನು ಹೇಳಿದಂತೆ ಮಾಡಿ ಇಲ್ಲವಾದರೆ ನನ್ನ ಕೋಪಕ್ಕೆ ಗುರಿ ಆಗ್ತೀರಾ ಎಂದು ಎಚ್ಚರಿಕೆ ನೀಡಿದೆ.

publive-image

ಇನ್ನೂ ಪೂಜೆಯಲ್ಲಿ ನಾಗದೇವರ ದರ್ಶನ ನೀಡಿದ ವಾಸುದೇವಾಚಾರ್ಯರು ಮಾಧ್ಯಮಗಳೊಂದಿಗೆ ಮಾತನಾಡಿ. ನಾಗದೇವರ ಪೂಜೆಯ ವಿಶೇಷತೆಯ ಬಗ್ಗೆ ಹೇಳಿದ್ದಾರೆ. ನಾಗ ಅಂತ ಹೇಳಿದ್ರೆ ಭೂಮಿಯೇ ನಾಗರ ಖಂಡ ಎಂದು ಹೇಳಲಾಗುತ್ತದೆ. ಕನ್ನಡದಲ್ಲಿ ಇದು ನನ್ನ ಜಾಗ ಅಂತ ತುಳುವಿನಲ್ಲಿ ನಾಗರಖಂಡ ಅಂತಾರೆ ನಾಗ ಪಾತಾಳದಲ್ಲಿದ್ದು, ಇಡೀ ನಮ್ಮ ಪರಿಸರವನ್ನ ಪ್ರಕೃತಿಯನ್ನು, ಸುತ್ತವರಿಸಿಕೊಂಡು, ಅವರ ಚೈತನ್ಯವನ್ನು ವಿಶೇಷವಾಗಿ ಇಟ್ಟುಕೊಂಡ ಕಾರಣ, ನಾಗದೇವರಿಗೆ ಇನ್ನಷ್ಟು ಮಹತ್ವ. ಉದಾಹರಣೆ ಒಂದು ಈಶ್ವರ ದೇವಸ್ಥಾನಕ್ಕೆ ಹೋಗಿ. ಅವರ ತಲೆ ಮೇಲೆ ಪ್ರಭಾವಳಿಗಳ ಚಿತ್ರಗಳಿರುತ್ತವೆ. ಈಶ್ವರನಲ್ಲಿ ನೋಡಿ ಜಡೆಯ ಮೇಲೆ ಸರ್ಪ ಇರುತ್ತೆ.

ಇದನ್ನೂ ಓದಿ:ದರ್ಶನ್‌ಗಾಗಿ ಹೋಮ.. ಕಲಾವಿದರ ಸಂಘದ ಪೂಜೆಯಲ್ಲಿ ಭಾಗಿಯಾದ ನಟ ಜಗ್ಗೇಶ್‌ ಬೇಸರ; ಏನಂದ್ರು?

ದೈವ ದೇವರುಗಳ ಮೈಮೇಲೆ ನೋಡಿ. ಎಲ್ಲ ನಾಗರ ಚಿತ್ರಗಳೇ ಇರುತ್ತವೆ. ನಾಗದೇವರನ್ನು ತುಳುವಿನಲ್ಲಿ ಇವತ್ತು ನಾವು ಸಲೀಸಾಗಿ ನಾಗದೇವರು ಅಂತ ಹೇಳ್ತೇವಿ, ತುಳುವಿನಲ್ಲಿ ನಾಗದೇವರನ್ನು ಹೆಡ್ಡತ್ತಿನಾರ ಅಂತ ಕರೆಯುತ್ತಾರೆ. ಅದರ್ಥ ಒಳ್ಳೆಯದು ಅಂತ ಹೇಳಿದ್ರು. ಪ್ರತಿಯೊಂದು ಮನೆತನದಲ್ಲೂ ಕೂಡ ಕರಾವಳಿ ತುಳುನಾಡಿನಲ್ಲಿ, ನಾಗದೇವರ ಕಲ್ಲನ್ನಿಟ್ಟು ಪೂಜೆ ಮಾಡುತ್ತಾರೆ. ಯಾಕೆ. ನಾವು ನಾಗರ ಭೂಮಿಯಲ್ಲಿದ್ದೇವೆ ಅದರ ವಾರಸದಾರರು ನಾಗದೇವರು. ಮುಂದೆ ನಮಗೆ ತೊಂದರೆ ಬರದೇ ಇರಲಿ ಅಂತ. ನಾಗರದ್ದು ತೊಂದರೆ ಕಂಡುಬರುವಂತದ್ದು. ಚರ್ಮವ್ಯಾಧಿ, ದೃಷ್ಟಿದೋಷ, ಸಂತಾನ ಸಮಸ್ಯೆ, ಮಾನಸಿಕ ಸಮಸ್ಯೆ, ಆರ್ಥಿಕ ಸಂಕಷ್ಟ, ವಿವಾಹ ಪ್ರತಿಬಂಧಕ ದೋಷ ಅನೇಕ ಆರೋಗ್ಯ ಸಮಸ್ಯೆಗಳು ನಾಗರಿಂದ ನಮಗೇನಾದರೂ ಅಪಚಾರವಾದ್ರೆ,ನಮಗೆ ತೊಂದರೆಗಳು ಕಂಡು ಬರುತ್ತವೆ.

ಇದನ್ನೂ ಓದಿ:ದರ್ಶನ್‌ಗಾಗಿ ಹೋಮ.. ಕಲಾವಿದರ ಸಂಘದ ಪೂಜೆಯಲ್ಲಿ ಭಾಗಿಯಾದ ನಟ ಜಗ್ಗೇಶ್‌ ಬೇಸರ; ಏನಂದ್ರು?

publive-image

ಇದನ್ನೂ ಓದಿ:ಪೂಜೆ, ಹೋಮ, ಹವನ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ; ನಟ ದೊಡ್ಡಣ್ಣ ವಿರುದ್ಧ ಕ್ರಮಕ್ಕೆ ಆಗ್ರಹ

ಹಾಗಾಗಿ, ಪ್ರತಿಯೊಂದು ಮನೆಯಲ್ಲೂ ಕೂಡ ನಾಗರಪಂಚಮಿಯಾಯ್ತು, ಯಾಕೆ ಎಲ್ಲ ಮನೆಯವರೂ ನಾಗ ದೇವರಿಗೆ ಹಾಲು ಹಾಕಿ ಬರಬೇಕು.ಮನುಷ್ಯ ಜ್ಞಾನವಂತ, ಬುದ್ಧಿವಂತ, ಪ್ರಜ್ಞಾವಂತ,ಎಲ್ಲರೂ ವಿದ್ಯಾವಂತರು.ಆದರೂ ಕೂಡ ನಾಗದೇವರ ಆರಾಧನೆ ಯಾಕೆ ಮಾಡುತ್ತಾರೆ. ಹೌದು, ಅವರಿಗೆ ಅವರ ಹಿರಿಯರು ಹೇಳಿರುತ್ತಾರೆ. ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ನಾಗ ದೇವರು. ಹೀಗಾಗಿ ನಾಗನಿಗೆ ಅಷ್ಟು ಪಾವಿತ್ರ್ಯತೆ ಇದೆ. ನಾಗನ ಚೈತನ್ಯ ಅಷ್ಟು ಉತ್ತಮ ರೀತಿಯಾಗಿದೆ. ಕಲಿಯುಗದಲ್ಲಿ ಕಣ್ಣಿಗೆ ಕಾಣುವ ಪ್ರತ್ಯಕ್ದ ದೆವರು ನಾಗದೇವರು. ಹೀಗಾಗಿ, ನಾಗದೇವರ ಆರಾಧನೆಗೆ ಮೊದಲಿನಿಂದಲೂ ಅಷ್ಟೊಂದು ಪ್ರಾಶಸ್ತ್ಯ ಕೊಟ್ಟಿದ್ದಾರ ಎಂದರು. ಇದು ಹಿಂದಿನಿಂದಲೂ ಕೂಡ ಸಾಮಾನ್ಯ, ತಲೆ ತಲೆಮಾರುಗಳಿಂದ ದೈವವನ್ನು ಆರಾಧನೆ ಮಾಡುತ್ತಾರೆ.

ಇದನ್ನೂ ಓದಿ:ನಾಗದೇವರ ದರ್ಶನ.. ನೋಡ ನೋಡ್ತಿದ್ದಂಗೆ ಹಿರಿಯ ನಟಿ ಮೈ ಮೇಲೆ ಬಂದ ದೇವರು; ಏನಿದರ ವಿಶೇಷ?

ಏನಾದರೂ ಸಂಶಯ ಇದ್ದರೆ ದೈವದ ದರ್ಶನ ಮಾಡಿಸಿ, ನಾನು ಇಂತಹ ವ್ಯವಹಾರವನ್ನು ಮಾಡಬಹುದೇ, ಇಂತಹ ವಿವಾಹ ಆಗಬಹುದೇ, ನಾನು ಇಂತಹ ಭೂಮಿಯನ್ನು ಖರೀದಿಸಬಹುದಾ ಎನ್ನುವಂತದ್ದು ದೈವ ದರ್ಶನದಲ್ಲಾಗಲಿ, ನಾಗದರ್ಶನದಲ್ಲಾಗಲಿ. ನಾಗನ ಕಲ್ಲು ಮಾತನಾಡುವುದಿಲ್ಲ, ನಾಗದರ್ಶನದಲ್ಲಿ ಮೂಲ ನಂಬಿಕೆಯೊಂದು, ಮೂಢ ನಂಬಿಕೆಯೊಂದು, ನಂಬಿಕೊಂಡು ಬಂದಂತಹದೊಂದು ನಮಗೆಲ್ಲಾ ಹಿರಿಯರು ನಂಬಿಕೊಂಡು ಬಂದಂತಹ ನಂಬಿಕೆ. ನಾಗದೇವರಿಗೆ ಆಶ್ಲೇಷಾ ಬಲಿಯನ್ನು ಮಾಡಿ, ನಾಗದರ್ಶನ ಮಾಡಿ ಪ್ರಸಾದ ತೆಗೆದುಕೊಳ್ಳುತ್ತೇವೆ ಅನ್ನೋ ಹರಕೆಯನ್ನು ಮಾಡಿದಾಗ ಹರಕೆ ತೀರಿಸಿ, ಪ್ರಸಾದ ಸ್ವೀಕರಿಸುವ ಆರಾಧನೆಯನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment