newsfirstkannada.com

×

ಕಲಾವಿದರ ಮೇಲೆ ನಾಗದೈವ ಕೆಂಡ.. ಸ್ಯಾಂಡಲ್‌ವುಡ್‌ನಲ್ಲಿ ಆಗಿರೋ ದೊಡ್ಡ ತಪ್ಪೇನು? ಪೂಜೆಯಲ್ಲಿ ಆಗಿದ್ದೇನು?

Share :

Published August 14, 2024 at 9:24pm

Update August 14, 2024 at 9:31pm

    ಕನ್ನಡ ಕಲಾವಿದರ ಸಂಘದಲ್ಲಿ ನಾಗದೈವ ನುಡಿದ ಮಾತುಗಳೇನು?

    ನಿಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಕಲಾವಿದರ ಮೇಲೆ ನಾಗದೈವ ಕೆಂಡ

    ದೊಡ್ಡಣ್ಣ, ಜಗ್ಗೇಶ್, ರಾಕ್‌ಲೈನ್ ವೆಂಕಟೇಶ್ ಮುಂದೆ ಏನಾಯ್ತು?

ಬೆಂಗಳೂರಿನ ಸಿನಿ ಕಲಾವಿದರ ಸಂಘದ ಕಟ್ಟಡದಲ್ಲಿ ನಡೆದ ನಾಗಾರಾಧನೆ ವೇಳೆ ಅಚ್ಚರಿ ಘಟನೆಯೊಂದು ನಡೆದು ಹೋಗಿದೆ. ಒಂದು ಕಡೆ ನಾಗದೈವ ಹಿರಿಯ ಕಲಾವಿದರಿಗೆ ಎಚ್ಚರಿಕೆ, ಸೂಚನೆಗಳನ್ನು ನೀಡಿದ್ರೆ ಅದೇ ವೇಳೆ ಹಿರಿಯ ನಟಿಯ ಮೇಲೆ ನಾಗದೈವದ ಆವಾಹನೆಯಾಗಿದೆ. ಹಾಗಾದ್ರೆ, ಕಲಾವಿದರ ಸಂಘ ಹೋಮ, ಹವನ, ಪೂಜೆ ಮಾಡಿಸಿದ್ಯಾಕೆ? ವಿಶೇಷ ಪೂಜೆ ಬಳಿಕ ಚಿತ್ರರಂಗಕ್ಕೆ ದೈವ ನೀಡಿದ ಸೂಚನೆಯೇನು ಎಂಬ ರೋಚಕ ಸ್ಟೋರಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಒಗ್ಗಟ್ಟಿನ ಬಗ್ಗೆ ನಾಗದೇವರ ಪ್ರಶ್ನೆ.. ಕಲಾವಿದರ ಸಂಘದ ಹೋಮಕ್ಕೆ ಗೈರು ಯಾಕೆ? ರಾಕ್​ಲೈನ್ ವೆಂಕಟೇಶ್‌ ಹೇಳಿದ್ದೇನು?

ಬೆಂಗಳೂರಿನ ಚಾಮರಾಜಪೇಟೆಯಲ್ಲಿರೋ ಕಲಾವಿದರ ಸಂಘದ ಕಟ್ಟಡದಲ್ಲಿ ಸರ್ಪಶಾಂತಿ ಮಾಡಲಾಯಿತು. ನಾಗದೇವರ ಆರಾಧನೆ ನಡೆಸಲಾಯಿತು. ಸಿನಿಮಾ ರಂಗಕ್ಕೆ, ಕಲಾವಿದರಿಗೆ ಎದುರಾಗಿರೋ ನಾಗದೋಷ ನಿವಾರಣೆಗೆ ನಾಗದರ್ಶನ ಕೇಳಲಾಯಿತು. ಇಂತಹ ವಿಶೇಷವಾದ ಸಂದರ್ಭದಲ್ಲಿ ಹಿರಿಯ ನಟಿ ಜ್ಯೋತಿ ಅವರ ಮೇಲೆ ನಾಗದೈವದ ಆವಾಹನೆಯಾಗಿದೆ.
ಕನ್ನಡ ಚಿತ್ರರಂಗ ಸದ್ಯ ಸಾಲು, ಸಾಲು ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಆ ಕಾರಣಕ್ಕಾಗಿಯೇ ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘ ಹೋಮ-ಹವನ ಮಾಡಿಸಿದೆ. ಸ್ಯಾಂಡಲ್‌ವುಡ್‌ನ ಅಭಿವೃದ್ಧಿ, ಶಾಂತಿ, ನೆಮ್ಮದಿಗಾಗಿ ಗಣ ಹೋಮ, ಆಶ್ಲೇಷಾ ಬಲಿ, ಮೃತ್ಯುಂಜಯ ಹೋಮ, ಸರ್ಪಶಾಂತಿ, ನಾಗದೇವರ ವಿಶೇಷ ಪೂಜೆಯನ್ನ ನೆರವೇರಿಸಲಾಗಿದೆ. ಈ ವೇಳೆ ನಾಗದೋಷ ನಿವಾರಣೆಗೆ ಪೂಜೆಯನ್ನೂ ಮಾಡಿಸಲಾಗಿದೆ.

ನಿಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಕಲಾವಿದರ ಮೇಲೆ ನಾಗದೈವ ಕೆಂಡ!
ಕನ್ನಡ ಚಿತ್ರರಂಗಕ್ಕೀಗ ಕಾರ್ಮೋಡ ಕವಿದಂತಾಗಿದೆ. ಪ್ರತಿಭಾವಂತ ನಟರ ಸಾಲು ಸಾಲು ಸಾವುಗಳು ಜೊತೆಗೆ ಮಾಡಿದ ಸಿನಿಮಾಗಳು ಓಡದೇ ಇರೋದು. ಖ್ಯಾತ ನಟ, ನಟಿಯರೆನಿಸಕೊಂಡವ್ರು ಒಂದಿಲ್ಲೊಂದು ಸಮಸ್ಯೆಗಳಲ್ಲಿ ಸಿಲುಕ್ತಿರೋದು ಇದೆಲ್ಲದರ ಜೊತೆಗೆ ಆಂತರಿಕ ಕಲಹಗಳೂ ಕೂಡ ಹೆಚ್ಚಾಗಿದೆ. ಇದೆಲ್ಲಾ ಸಮಸ್ಯೆಗಳನ್ನು ಪರಿಹರಿಸೋದಕ್ಕೆಂದೇ ಈ ಪೂಜೆ, ಹೋಮ ನಡೆಸಲಾಗಿದೆ. ಆದ್ರೆ ಕಲಾವಿದರ ಸಂಘದಲ್ಲಿ ನಡೆಿದ ವಿಶೇಷ ಪೂಜೆಯಲ್ಲಿ ಚಿತ್ರರಂಗದ ಎಲ್ಲಾ ಹಿರಿಯರೂ ಕೂಡ ಭಾಗಿ ಆಗಿರಲಿಲ್ಲ. ಇದೇ ಪ್ರಶ್ನೆಯನ್ನು ನಾಗದೈವ ಕೂಡ ಮುಂದಿಟ್ಟಿದೆ. ನಿಮ್ಮಲ್ಲಿ ಒಗ್ಗಟ್ಟೇ ಇಲ್ವಾ ಅಂತಾ ಪ್ರಶ್ನಿಸಿ ಕಲಾವಿದರು ಸ್ತಬ್ಧವಾಗಿ ನಿಲ್ಲುವಂತೆ ಮಾಡಿದೆ.

ಇದನ್ನೂ ಓದಿ:ನಾಗದರ್ಶನ.. ಕಲಾವಿದರ ಸಂಘದಲ್ಲಿ ಹಿರಿಯ ನಟಿ ಮೈ ಮೇಲೆ ಬಂದ ದೇವರು; ಯಾರು ಈ ಜ್ಯೋತಿ? ಹಿನ್ನೆಲೆ ಏನು?

ನಾಗದರ್ಶಕ : ಇಂದು ಐಕ್ಯಮತ ಉಂಟಾ…?
ಪುರೋಹಿತ : ದೇವರು ಹೇಳುವಂತದ್ದು.. ನಮ್ಮಲ್ಲಿ ಐಕ್ಯಮತದ ಕೊರತೆ ಉಂಟು.. ಐಕ್ಯಮತದ ಕೊರತೆ ಉಂಟಾ ಅಂತಾ ಕೇಳ್ತಾ ಇದ್ದಾರೆ. ಇದಕ್ಕೆ ಉತ್ತರ ಕೊಡಬೇಕು.
ನಾಗದರ್ಶಕ : ನನ್ನನ್ನು ಭಯಪಟ್ಟು ಆರಾಧನೆ ಮಾಡಿ ಅಂತಾ ಹೇಳಿಲ್ಲ. ಪ್ರೀತಿಯಿಂದ, ಭಕ್ತಿಯಿಂದ ಆರಾಧನೆ ಮಾಡಿ.

12 ವರ್ಷದಿಂದ ಈ ಉದ್ಯಮದಲ್ಲಿ ಅನೇಕಾನೇಕ ಮಾನಸಿಕ ಗೊಂದಲಗಳು, ಅಸ್ಪಷ್ಟ ತೀರ್ಮಾನಗಳು, ಇದು ದೇವಾಲಯ ಇದ್ದ ಹಾಗೆ… ನ್ಯಾಯಾಲಯ ಆಗಬಾರದು. ಚಿತ್ರೋದ್ಯಮದ ಎಲ್ಲರಿಗೂ ತಿಳಿಸಿದ್ದರೂ ಕೂಡ ಬಹುಸಂಖ್ಯೆ ಇಲ್ಲ ಅಲ್ಪಸಂಖ್ಯೆಯಿದೆ. ಇದು ನನಗೆ ಸ್ವಲ್ಪ ಅಸಮಾಧಾನ ಆಯ್ತು.

ಇದು ನಾಗದೈವ ನುಡಿದ ಮಾತು. ಪೂಜೆ ಬಳಿಕ ಹಿರಿಯ ನಟ ದೊಡ್ಡಣ್ಣ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಪ್ರಶ್ನೆ ಮಾಡಿದ್ದರು. ಈ ಸಮಸ್ಯೆಗಳು ಯಾಕಪ್ಪಾ ಅಂತ ಮನವಿಯಿಟ್ಟಿದ್ದಾರೆ. ಆಗ, ದೈವದ ಬಾಯಲ್ಲಿ ಹೊರಬಿದ್ದ ಮೊತ್ತ ಮೊದಲ ಮಾತು ಅಂದ್ರೆ ನಿಮ್ಮಲ್ಲಿ ಐಕ್ಯಮತ, ಅಂದ್ರೆ ಒಗ್ಗಟ್ಟೇ ಇಲ್ಲ ಅನ್ನೋದು. ಹೀಗೆ, ದೈವ ಕಲಾವಿದರ ಸಂಘದೊಳಗಿನ, ಚಿತ್ರರಂಗದೊಳಗಿನ ಸಮಸ್ಯೆಯನ್ನ ಒಂದೇ ಸಾಲಿನಲ್ಲಿ ತಿಳಿ ಹೇಳಿದೆ.

ಇದನ್ನೂ ಓದಿ: ನನ್ನ ಕೋಪಕ್ಕೆ ಬಲಿ ಆಗ್ಬೇಡಿ.. ಕಲಾವಿದರ ಸಂಘದಲ್ಲಿ ದೈವ ನಾಗದರ್ಶನದ ಪ್ರಶ್ನೆ; ಅಸಲಿಗೆ ಆಗಿದ್ದೇನು?

ಚಿತ್ರರಂಗದ ಒಗ್ಗಟ್ಟಿನ ಕೊರತೆಯ ಬಗ್ಗೆ ಪ್ರಶ್ನಿಸಿ ಕೆಂಡವಾದ ನಾಗದೈವದ ಎದುರು ಹಿರಿಯ ಕಲಾವಿದರು, ನಿರ್ಮಾಪಕರು ತಲೆಬಾಗಿ ನಿಂತು ಬಿಟ್ಟಿದ್ದಾರೆ. ಮಾತು ಹೊರಬರದೇ ದೈವ ಹೇಳೋದನ್ನ ಕೇಳಿದ್ದಾರೆ. ಅಲ್ಲದೆ, ನಾಗದರ್ಶಕ ಮತ್ತೊಂದು ಬೆಚ್ಚಿಬೀಳಿಸೋ ದೈವವಾಣಿ ನುಡಿದಿದೆ. ಈ ಜಾಗದಲ್ಲಿ ಯಾರು ತಲೆತಗ್ಗಿಸಿಕೊಂಡು ಬಂದಿದ್ದಾರೋ ಅವರಿಗೆಲ್ಲಾ ಒಳಿತಾಗಿದೆ ಅನ್ನೋ ಮೂಲಕ. ಯಾರು ಅಹಂಕಾರ ತೋರುತ್ತಾರೋ ಅವರೆಲ್ಲಾ ನೆಲಕಚ್ಚೋದು ನಿಶ್ಚಿತ ಎಂಬ ಸೂಚನೆ ನೀಡಿದೆ.

ಇಲ್ಲಿ ಮೂರು ತಲೆಮಾರಿನ ಹಿಂದೆ ತನ್ನದಾದಂತಹ ಸಾನಿಧ್ಯವಿತ್ತು. ಉತ್ತರ ಹಾಗು ದಕ್ಷಿಣ ಭಾಗದಲ್ಲಿ ಎರಡು ಜಲಪ್ರದೇಶ ಇತ್ತು. ನಾಗರಗಳು ಸಂಚರಿಸಿಕೊಂಡು ಬಂದ ಸ್ಥಳ. ದೇವಿಯ ಸಂಬಂಧವಾದಂತಹ ಜಾಗವಿದು. ಇಲ್ಲಿಗೆ ಬರುವಾಗ ತಲೆ ತಗ್ಗಿಸಿಕೊಂಡು ಯಾರು ಬಂದಿದ್ದಾರೆ ಅವರಿಗೆ ಒಳಿತಾಗಿದೆ.

ಇಲ್ಲೊಂದು ವಿಚಾರ ಗಮನಿಸಲೇಬೇಕು. ಯಾವಾಗ, ಕಲಾವಿದರ ಸಂಘದಿಂದ ವಿಶೇಷ ಸರ್ಪಶಾಂತಿ, ಮೃತ್ಯುಂಜಯ ಹೋಮ, ವಿಶೇಷ ಪೂಜೆ ಮಾಡಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿತ್ತೋ.. ಇದು ದರ್ಶನ್‌ ಬಿಡುಗಡೆಗಾಗಿಯೇ ನಡೆಸಲಾಗ್ತಿರೋ ಪೂಜೆಯಾ ಎಂಬ ಚರ್ಚೆ ಶುರುವಾಗಿತ್ತು. ಆದ್ರೆ, ಈ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿದ್ದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು. ಇದು ದರ್ಶನ್‌ಗಾಗಿ ನಡೆಸಲಾಗ್ತಿರೋ ಪೂಜೆಯಲ್ಲ.. ಚಿತ್ರರಂಗ, ಕಲಾವಿದರ ಒಳಿತಿತಾಗಿ ನಡೆಸ್ತಿರೋ ಪೂಜೆ ಎಂದಿದ್ರು.

ಈ ಪೂಜೆ, ಹೋಮಕ್ಕೆ ಎಲ್ಲಾ ಹಿರಿಯ ಕಲಾವಿದರೂ ಹಾಜರಾಗಿಲ್ಲ. ಇದು ಸಾಕಷ್ಟು ಅನುಮಾನ, ಪ್ರಶ್ನೆಗಳಿಗೆ ನಾಂದಿ ಹಾಡಿದೆ. ಇನ್ನು, ಕಲಾವಿದರ ನಡುವಿನ ಒಗ್ಗಟ್ಟಿನ ಕೊರತೆ ಬಗ್ಗೆ ನಾಗದೈವವೇ ಪ್ರಶ್ನೆ ಮಾಡಿರೋದು ಆ ಅನುಮಾನ ಹೆಚ್ಚಾಗುವಂತೆ ಮಾಡಿದೆ.ಅಷ್ಟೇ ಅಲ್ಲ.. ನಾಗದೈವ ಕಲಾವಿದರಿಗೆ ಮತ್ತೊಂದು ಪ್ರಶ್ನೆ ಹಾಕಿ ಕೋಪ ತೋರಿದೆ.

ಪ್ರತಿ ಮಾಸ ಈ ಸ್ಥಳದಲ್ಲಿ ಏನು ಮಾಡುತ್ತೀರಿ ಸದಸ್ಯರೆಲ್ಲಾ ಸೇರಿ ಕಲಾವಿದ ಸಂಘದಲ್ಲಿ ನೀವೆಲ್ಲಾ ಏನು ಮಾಡುತ್ತಿದ್ದೀರಿ? ಇದು ಶಾರದೆಯ ಸ್ಥಳ, ಆಡಂಬರ ನನಗೆ ಬೇಡ. ಈ ಹಿಂದೆ ಶಾರದಾ ಪೂಜೆ, ಗಣೇಶ ಚತುರ್ಥಿ, ಅನೇಕಾನೇಕ ಧರ್ಮಕಾರ್ಯಗಳು ಈ ಸ್ಥಳದಲ್ಲಿ ನಡೆಯುತ್ತಿದ್ದವು. ದೇವರ ಹುಟ್ಟಿದ ದಿನ ಬೇಡವಾ? ತಾವು ಹುಟ್ಟಿದ ದಿನ ಆಚರಣೆ ಮಾಡ್ತೀರಿ?

ಹಿಂದೆ ಪೂಜೆ, ಪುನಸ್ಕಾರ ನಡೀತಿದ್ವು. ಆದ್ರೀಗ ನಿಮ್ಮ ನಿಮ್ಮ ಹುಟ್ಟಿದ ಹಬ್ಬ ಆಚರಿಸಿಕೊಳ್ತಿದ್ದೀರಿ ಅಂತಾ ನಾಗದೈವ ಹೇಳಿದೆ. ನಿಮಗೆ ದೇವರ ಹುಟ್ಟಿದ ದಿನ, ದೈವಕಾರ್ಯ ಬೇಡವಾ ಅಂತಲೂ ಪ್ರಶ್ನೆ ಮಾಡಿದೆ.

ಕಲಾವಿದರ ಸಂಘ ನಾಗದೈವದ ಬಳಿಯಿಂದ ಸಂಕಷ್ಟ ನಿವಾರಣೆಗೆ ಸಲಹೆ ಕೇಳಿತ್ತು. ಯಾಕಾಗಿ ಈ ಸಂಕಷ್ಟ ಎಂಬ ಪ್ರಶ್ನೆಯನ್ನೂ ನಾಗದೈವದ ಮುಂದುವರೆಸಿತ್ತು. ಕಲಾವಿದರ ಪ್ರಶ್ನೆಗೆ ನಾಗದೈವ ಹೇಳಿರೋದೇನು ಗೊತ್ತಾ? ನಾಗದೋಷ, ದೇವಿ ದೋಷ ಇವೆಲ್ಲವುಗಳಿಂದಲೇ ಚಿತ್ರರಂಗದಲ್ಲಿ ವೈಷಮ್ಯ, ವೈಮನಸ್ಸು ಉಂಟಾಗಿದೆ ಅನ್ನೋದು.

ಇದನ್ನೂ ಓದಿ: ಬಿಗ್‌ಬಾಸ್‌ ಸೀಸನ್ 11 ಬಿಗ್ ಅಪ್ಡೇಟ್‌.. ಮುಕ್ತಾಯ ಹಂತದಲ್ಲಿವೆ ಈ 3 ಸೀರಿಯಲ್ಸ್; ಯಾವುದು? 

ಈ ಭೂಮಿಯ, ಈ ನೆಲದ ಪಾವಿತ್ರ್ಯತೆಯನ್ನು ಹಾಳು ಮಾಡುವುದಕ್ಕೆ ನಾನು ಬಿಡುವುದಿಲ್ಲ. ಇದು ನಾಗರ ಕಂದ. ಇದು ಯಾಕೆ ಆಯ್ತು? ನಾಗರದೋಷದಿಂದಾಗಿಯೂ ದೇವಿಯ ದೋಷದಿಂದಾಗಿಯೂ.. ಈ ಸ್ಥಳದಲ್ಲಿರೋ ದೋಷದಿಂದಾಗಿಯೂ ಇಂತಹ ವೈಷಮ್ಯ, ವೈಮನಸ್ಸಿಗೆ ಕಾರಣವಾಗಿದೆ.

ಈ ನೆಲದ ಪವಿತ್ರತೆಯನ್ನು ಹಾಳು ಮಾಡೋಕೆ ಬಿಡೋಲ್ಲ ಅನ್ನೋದು ನಾಗದೈವ ಕಲಾವಿದರ ಸಂಘದ ಹಿರಿಯರಿಗೆ ಕೊಟ್ಟಿರುವ ಎಚ್ಚರಿಕೆ. ಕೇವಲ ಎಚ್ಚರಿಕೆಯನ್ನಷ್ಟೇ ಅಲ್ಲ.. ನಾಗದೈವ ಸಮಸ್ಯೆಗೆ ಪರಿಹಾರವನ್ನೂ ಸೂಚಿಸಿದೆ.

ಹಿರಿಯ ನಟರಾದ ದೊಡ್ಡಣ್ಣ, ಜಗ್ಗೇಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮುಂದೆ ನಾಗದೇವರು ತಪ್ಪುಗಳ ಪಟ್ಟಿಕೊಟ್ಟಿದೆ. ದಿನ ಇಲ್ಲಿ ದೀಪ ಬೆಳಗಬೇಕು ಶತ್ರು ನಾಶ, ಅಪಕೀರ್ತಿ ಎಲ್ಲವೂ ದೂರಾಗುತ್ತೆ ಎಂದಿದೆ. ಅಲ್ಲದೆ, ನನ್ನ ಕೋಪಕ್ಕೆ ಬಲಿ ಆಗ್ಬೇಡಿ ನಾನು ಹೇಳಿದಂತೆ ಮಾಡಿ.. ಇಲ್ಲಾಂದ್ರೆ ನನ್ನ ಕೋಪಕ್ಕೆ ಗುರಿ ಆಗ್ತೀರಾ ಎಂದು ಎಚ್ಚರಿಸಿದೆ.

ಸ್ವಾಮಿಯ ಆರಾಧನೆಯನ್ನು ಮುಂಚೂಣಿಯಲ್ಲಿ ನಡೆಸಬೇಕು. ಭಗವತಿಯ ಆರಾಧನೆಯನ್ನು ಮುಂಚೂಣಿಯಲ್ಲಿ ನಡೆಸಬೇಕು. ಎಲ್ಲಾ ದೇವರನ್ನು ಪ್ರಾರ್ಥಿಸಿಕೊಂಡು ಬರಬೇಕು. ಉತ್ತಮ ಕೆಲಸಗಳು ಈ ಸ್ಥಳದಲ್ಲಿ ನಡೆಯಬೇಕು. ಈ ಹಿಂದೆ ಯಾರೆಲ್ಲಾ ಹಿರಿಯಲು ಸೇರುತ್ತಿದ್ದರೋ.. ಅವರನ್ನೆಲ್ಲಾ ಒಗ್ಗೂಡಿಸಬೇಕು ಎಂದು ನಾಗದರ್ಶನದಲ್ಲಿ ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲಾವಿದರ ಮೇಲೆ ನಾಗದೈವ ಕೆಂಡ.. ಸ್ಯಾಂಡಲ್‌ವುಡ್‌ನಲ್ಲಿ ಆಗಿರೋ ದೊಡ್ಡ ತಪ್ಪೇನು? ಪೂಜೆಯಲ್ಲಿ ಆಗಿದ್ದೇನು?

https://newsfirstlive.com/wp-content/uploads/2024/08/Kannada-Film-Industry-homa-1.jpg

Load More