Advertisment

ನಾಗಮಂಗಲ ಕೇಸ್​; ನಮ್ಮವ್ರು ತಪ್ಪು ಮಾಡಿಲ್ಲ ಎಂದು ಹೈಡ್ರಾಮಾ ಮಾಡಿದ ಕುಟುಂಬಸ್ಥರಿಗೆ ಇನ್​​ಸ್ಪೆಕ್ಟರ್​ ಪಾಠ

author-image
Ganesh
Updated On
ನಾಗಮಂಗಲ ಕೇಸ್​; ನಮ್ಮವ್ರು ತಪ್ಪು ಮಾಡಿಲ್ಲ ಎಂದು ಹೈಡ್ರಾಮಾ ಮಾಡಿದ ಕುಟುಂಬಸ್ಥರಿಗೆ ಇನ್​​ಸ್ಪೆಕ್ಟರ್​ ಪಾಠ
Advertisment
  • ನಾಗಮಂಗಲ ಪ್ರಕರಣದಲ್ಲಿ 46 ಮಂದಿ ಪೊಲೀಸ್ ವಶಕ್ಕೆ
  • ‘ನಮ್ಮವರು ತಪ್ಪು ಮಾಡಿಲ್ಲ, ಬೇಕಂತಲೇ ಬಂಧಿಸಲಾಗಿದೆ’
  • ಪ್ರಕರಣದ ಬಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದೇನು?

ಮಂಡ್ಯ: ನಾಗಮಂಗಲ ಗಣೇಶ ಮೆರವಣಿಗೆಯಲ್ಲಿ ನಡೆದ ಅಹಿತಕರ ಘಟನೆ ಸಂಬಂಧ ಒಟ್ಟು 46 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧನ ಖಂಡಿಸಿ ನಾಗಮಂಗಲ ಟೌನ್ ಠಾಣೆ ಮುಂದೆ ಕುಟುಂಬಸ್ಥರ ಜಮಾವಣೆ ಮಾಡಿ ಹೈಡ್ರಾಮಾ ಸೃಷ್ಟಿಸಿದ್ದಾರೆ.

Advertisment

ನಮ್ಮವರು ತಪ್ಪು ಮಾಡಿಲ್ಲ, ಬೇಕಂತಲೇ ಬಂಧಿಸಲಾಗಿದೆ, ಅವರನ್ನು ಬಿಟ್ಟುಬಿಡಿ ಅಂತ ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಮಹಿಳೆಯರಿಗೆ ಕಾನೂನಿನ ಪಾಠ ಮಾಡಿದ ಇನ್ಸ್​ಪೆಕ್ಟರ್ ನಿರಂಜನ್ ವಿಚಾರಣೆಗೆ ಕರೆತಂದಿದ್ದು ತಪ್ಪು ಮಾಡಿಲ್ಲದವರನ್ನು ಬಿಟ್ಟುಕಳುಹಿಸುತ್ತೇವೆ ಅಂತ ಕ್ಲಾಸ್ ತೆಗೆದುಕೊಂಡು ಎಲ್ಲರನ್ನು ಮನೆಗೆ ಕಳುಹಿಸಿದ್ದಾರೆ.

ನಾಗಮಂಗಲ ಗಲಭೆ ಸಂಬಂಧ ಪ್ರತಿಕ್ರಿಯಿಸಿರೋ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಎಡಿಜಿಪಿಗೆ ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದ್ದೇನೆ, ಘಟನೆ ಬಗ್ಗೆ ಸಿಎಂ, ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ ಅಂತ ಹೇಳಿದ್ದಾರೆ. ನಾನು ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತೇನೆ, ರಾಜಕೀಯ ಮಾಡುವವರಿಗೆ ದೇವರು ಒಳ್ಳೇದು ಮಾಡಲ್ಲ, ಕುಮಾರಸ್ವಾಮಿ ಇದ್ದಾಗ, ಏನೇನು ಆಗಿದೆ ಅಂತ ಗೊತ್ತಿದೆ ಅಂತ ಹೆಚ್​ಡಿಕೆ ವಿರುದ್ಧ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment