ಅಕ್ಕಿನೇನಿ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ; ಕಿರಿಮಗನ ಕೈ ಹಿಡಿದ ಈ ಚೆಲುವೆ ಯಾರು?

author-image
Veena Gangani
Updated On
ಅಕ್ಕಿನೇನಿ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ; ಕಿರಿಮಗನ ಕೈ ಹಿಡಿದ ಈ ಚೆಲುವೆ ಯಾರು?
Advertisment
  • ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಜೋರು
  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ​ ಅಕ್ಕಿನೇನಿ ನಾಗಾರ್ಜುನ ಕಿರಿ ಮಗ
  • ನಾಗಾರ್ಜುನ ಎರಡನೇ ಪುತ್ರ ಅಖಿಲ್ ಅಕ್ಕಿನೇನಿಗೆ ಕೂಡಿ ಬಂತು ಕಂಕಣ ಭಾಗ್ಯ

ತೆಲುಗು ಸೂಪರ್​​ ಸ್ಟಾರ್​ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಮತ್ತೊಂದು ಸಂಭ್ರಮ ಮನೆ ಮಾಡಿದೆ. ಅಕ್ಕಿನೇನಿ ನಾಗಾರ್ಜುನ ಅವರ ಎರಡನೇ ಪುತ್ರ ಅಖಿಲ್ ಅಕ್ಕಿನೇನಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಇದನ್ನೂ ಓದಿ:ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್.. ಸಮಂತಾ ವಿಡಿಯೋ ಭಾರೀ ವೈರಲ್; ಶೋಭಿತಾಗೆ ಹಿಡಿಶಾಪ!

publive-image

ಹೌದು, ಅಖಿಲ್ ಅಕ್ಕಿನೇನಿ ಮದುವೆ ಆಗುತ್ತಿರೋ ಹುಡುಗಿ ಹೆಸರು ಝೈನಾಬ್ ರಾವಡ್ಜಿ. ಈಗಾಗಲೇ ಅಖಿಲ್ ಅಕ್ಕಿನೇನಿ ಅವರು ಝೈನಾಬ್ ರಾವಡ್ಜಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ನಾಗಾರ್ಜುನ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ನೂತನ ಜೋಡಿಗೆ ಶುಭ ಹಾರೈಸುವಂತೆ ಕೇಳಿದ್ದಾರೆ. ಇನ್ನೂ, ಸ್ಟಾರ್ ನಟಿ ಶೋಭಿತಾ ಧೂಲಿಪಾಲ್ ಜೊತೆಗೆ ನಟ ನಾಗಚೈತನ್ಯ ಮದುವೆಗೆ ಸಕಲ ಸಿದ್ಧತೆಗಳ ಮಾಡಿಕೊಳ್ಳುವ ಮಧ್ಯೆ ಎರಡನೇ ಮಗನ ಮದುವೆ ತಯಾರಿಯಲ್ಲಿ ಅಕ್ಕಿನೇನಿ ನಾಗಾರ್ಜುನ ಸಖತ್ ಬ್ಯುಸಿಯಾಗಿದ್ದಾರೆ.

publive-image

ಅಖಿಲ್ ಅಕ್ಕಿನೇನಿ ಕೈ ಹಿಡಿದ ಚಲುವೆ ಯಾರು?

ತೆಲುಗು ನಟ ಅಖಿಲ್ ಅಕ್ಕಿನೇನಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಹೆಸರು ಝೈನಾಬ್ ರಾವಡ್ಜಿ. ಇವರಿಗೆ ಪೇಂಟಿಂಗ್​ನಲ್ಲಿ ಒಲವು ಜಾಸ್ತಿ ಇದೆ. ಪೇಂಟಿಂಗ್​ ಕ್ಷೇತ್ರದಲ್ಲಿಯೇ ಹೆಸರುವಾಸಿಯಾದ ಪ್ರತಿಭಾವಂತ ಕಲಾವಿದೆಯಾಗಿದ್ದಾರೆ. 27ನೇ ವರ್ಷದ ಝೈನಾಬ್ ರಾವಡ್ಜಿ ಅವರು ಹೈದರಾಬಾದ್‌ನಲ್ಲಿ "ರಿಫ್ಲೆಕ್ಷನ್ಸ್" ನಂತಹ ಪ್ರದರ್ಶನಗಳೊಂದಿಗೆ ಕಲಾ ಜಗತ್ತಿನಲ್ಲಿ ಛಾಪು ಮೂಡಿಸಿದ್ದಾರೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಜೈನಾಬ್ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಇನ್ನೂ ಝೈನಾಬ್ ರಾವಡ್ಜಿ ಅವರ ನಿವ್ವಳ ಮೌಲ್ಯ ಮತ್ತು ಶಿಕ್ಷಣದ ವಿವರಗಳು ಖಾಸಗಿಯಾಗಿಯೇ ಉಳಿದಿವೆ. ಇದೀಗ ಅಕ್ಕಿನೇನಿ ಕುಟುಂಬದೊಂದಿಗೆ ಸಂಬಂಧ ಬೆಳೆಸಿದ್ದಾರೆ.

publive-image

ತೆಲುಗು ಚಿತ್ರರಂಗದ ಸ್ಟಾರ್ ನಟ ಹಾಗೂ ಬಿಗ್​ಬಾಸ್ ತೆಲುಗು ನಿರೂಪಕ ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ 2ನೇ ಮಗ ಅಖಿಲ್‌ಗೂ ಗುಟ್ಟಾಗಿಯೇ ನಿಶ್ಚಿತಾರ್ಥ ನೆರವೇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದು, ಅಖಿಲ್‌ ಜೊತೆಗೆ ಝೈನಾಬ್ ರಾವಡ್ಜಿ ಅವರ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಸದ್ಯ ಇಬ್ಬರು ಮಕ್ಕಳ ಮದುವೆಯನ್ನು ಒಂದೇ ದಿನ ಮಾಡಿ ಎಲ್ಲರಿಗೂ ಸರ್ಪ್ರೈಸ್ ನೀಡುತ್ತಾರಾ ಅಂತ ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment