ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿರೋ ಆರೂಢ ಜ್ಯೋತಿಯ ಶಕ್ತಿ ಎಂಥದ್ದು? ರಹಸ್ಯ ಬಿಚ್ಚಿಟ್ಟ ನಾಗಾಸಾಧು!

author-image
admin
Updated On
ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿರೋ ಆರೂಢ ಜ್ಯೋತಿಯ ಶಕ್ತಿ ಎಂಥದ್ದು? ರಹಸ್ಯ ಬಿಚ್ಚಿಟ್ಟ ನಾಗಾಸಾಧು!
Advertisment
  • ಅಘೋರಿಗಳು, ನಾಗಾ ಸಾಧುಗಳು ಸಿದ್ಧಿಗಾಗಿ ತಪಸ್ಸು ಮಾಡುತ್ತಿರೋ ಕ್ಷೇತ್ರ
  • ಭೂ ಕೈಲಾಸ ಅಂತಾನೇ ಖ್ಯಾತಿ ಪಡ್ಕೊಂಡಿರೋ ಸಿದ್ಧಾರೂಢ ಮಠ
  • ಸಿದ್ಧಾರೂಢರಿಗೆ ಆರೂಢ ಜ್ಯೋತಿ ಸಿಕ್ಕಿದ್ದು ಎಲ್ಲಿ ಗೊತ್ತಾ? ರಹಸ್ಯ ಮಾಹಿತಿ!

ಇದು ನಮ್ಮದೇ ರಾಜ್ಯದ ಶಕ್ತಿಶಾಲಿ ಸ್ಥಳ. ಅಘೋರಿಗಳು, ನಾಗಾ ಸಾಧುಗಳು ಸಿದ್ಧಿಗಾಗಿ ತಪಸ್ಸು ಮಾಡುತ್ತಿರೋ ಕ್ಷೇತ್ರ. ಇಲ್ಲಿ ಸಿದ್ಧಾರೂಢ ಸ್ವಾಮೀಜಿ ಇಂದಿಗೂ ಇಲ್ಲಿ ಶಿವನನ್ನ ತೊಡೆ ಮೇಲೆ ಕೂರಿಸಿಕೊಂಡಿದ್ದು ಭಕ್ತರು ಪೂಜೆ ಮಾಡ್ತಿದ್ದಾರೆ. ಸಿದ್ಧಾರೂಢ ಮಠದಲ್ಲಿರೋ ಆರೂಢ ಜ್ಯೋತಿಯ ಶಕ್ತಿ ಸಿಕ್ಕಿದ್ದು ಇದೇ ಸ್ಥಳದಲ್ಲಿ. ಇಲ್ಲಿಯ ಗುಡ್ಡದ ಮೇಲೆ ಹಚ್ಚೋ ಜ್ಯೋತಿ ಒಂದೂವರೆ ಕಿಲೋ ಮೀಟರ್‌ ದೂರದಲ್ಲಿರೋ ಕಣವಿಸಿದ್ದೇಶ್ವರ, ದುರ್ಗಾಪರಮೇಶ್ವರ ಮೇಲೆ ಬೆಳಕು ಚೆಲ್ಲುತ್ತೆ. ಇದೆಲ್ಲವನ್ನು ಮಹಾಕುಂಭದಲ್ಲಿ ಕರ್ನಾಟಕದ ನಾಗಾ ಸಾಧು ರಿವೀಲ್‌ ಮಾಡಿದ್ದಾರೆ.

publive-image

ಈ ಜಾಗದಲ್ಲಿ ನಾಗಾಬಾಬಾಗಳು, ಅಘೋರಿಗಳು ಇಂದಿಗೂ ನಿಗೂಢವಾಗಿ ಜ್ಞಾನದಲ್ಲಿ ಮಗ್ನರಾಗಿದ್ದಾರಂತೆ. ಸಿದ್ಧಿಗಾಗಿ ತಪಸ್ಸು ಮಾಡ್ತಿದ್ದಾರೆ ಅನ್ನೋ ನಂಬಿಕೆ ಸ್ಥಳೀಯ ಜನರದಲ್ಲಿದೆ. ಅಂತಹ ಬಾಬಾಗಳು ಆಗಾಗ ಕಾಣಿಸ್ಕೊಂಡಿರೋದನ್ನ ಸ್ಥಳೀಯರೇ ಹೇಳ್ಕೊಂಡಿದ್ದಾರೆ. ಹಾಗೆಯೇ ಇಲ್ಲಿ ಕಣಿವಿಸಿದ್ದೇಶ್ವರ ಮತ್ತು ತಾಯಿ ದುರ್ಗಾಪರಮೇಶ್ವರಿ ನೆಲೆ ನಿಂತಿದ್ದಾಳೆ ಎನ್ನುವ ನಂಬಿಕೆಯೂ ಇದೆ.

publive-image

ಇದು ಹುಬ್ಬಳ್ಳಿಯಲ್ಲಿರೋ ಸಿದ್ಧಾರೂಢ ಮಠದಲ್ಲಿರೋ ಆರೂಢ ಜ್ಯೋತಿ. ಈ ಮಠ ಭೂ ಕೈಲಾಸ ಅಂತಾನೇ ಖ್ಯಾತಿ ಪಡ್ಕೊಂಡಿರೋ ಮಠ. ಇಲ್ಲಿಯ ಮಹತ್ವವನ್ನ, ಇದರ ಚರಿತ್ರೆಯನ್ನ ಶಬ್ಧಗಳಲ್ಲಿ ಹೇಳೋದಕ್ಕೆ ಸಾಧ್ಯವೇ ಇಲ್ಲ. ಮಹಾಕುಂಭದಲ್ಲಿ ನಾಗಾ ಸಾಧು ಇದೇ ಆರೂಢ ಜ್ಯೋತಿ ಬಗ್ಗೆ ಹೇಳಿದ್ದಾರೆ. ಆರೂಢ ಜ್ಯೋತಿ ಅಂದ್ರೆ ಆರದ ಜ್ಯೋತಿ ಅಂತಾ ಅರ್ಥ ಬರುತ್ತೆ. ನೂರಾರು ವರ್ಷಗಳ ಹಿಂದೆ ಪವಾಡ ಪುರುಷ, ಶಿವನ ಅವತಾರ ಅಂತಲೇ ಹೇಳಲಾಗುವ ಸಿದ್ಧಾರೂಢರು ಹಚ್ಚಿರೋ ಜ್ಯೋತಿ ಇದು. ಇದನ್ನ ಹಚ್ಚಿದ ಮೇಲೆ ಅದೆಷ್ಟೋ ಬಿರುಗಾಳಿ ಬಂದಿದೆ, ಪ್ರಾಕೃತಿಕ ವಿಕೋಪಗಳು ಸಂಭವಿಸಿವೆ. ಆದ್ರೂ, ಈ ಜ್ಯೋತಿ ಯಾವತ್ತೂ ಆರಿಲ್ಲ, ಆರೋದೂ ಇಲ್ಲ. ಈ ಜ್ಯೋತಿಯನ್ನ ದೃಷ್ಟಿಯಿಟ್ಟು, ಭಕ್ತಿಭಾವದಿಂದ ನೋಡಿ ನಮ್ಮಲ್ಲಿರೋ ಕಷ್ಟ ಹೇಳ್ಕೊಂಡ್ರೆ ಆ ಕಷ್ಟಗಳು ದೂರವಾಗ್ತಾವೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಹುಬ್ಬಳ್ಳಿ ಅಕ್ಕ ಪಕ್ಕ ಇರೋರು ಯಾವುದಾದ್ರೂ ಶುಭಕಾರ್ಯ ಮಾಡೋ ಸಂದರ್ಭದಲ್ಲಿ ಇಲ್ಲಿಂದ ಜ್ಯೋತಿ ಹೊತ್ತಿಸಿಕೊಂಡು ಹೋಗ್ತಾರೆ.

publive-image

ನಾಗಾ ಸಾಧು ಹೇಳೋ ಪ್ರಕಾರ ಸಿದ್ಧಾರೂಢರಿಗೆ ಆರೂಢ ಶಕ್ತಿ ಸಿಕ್ಕಿರೋ ಪುಣ್ಯ ಭೂಮಿ ಅಂದ್ರೆ ಅದು ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನಿಂದ 6 ಕಿಲೋ ಮೀಟರ್‌ ದೂರದಲ್ಲಿರೋ ಕಣವಿಸಿದ್ದಗೇರಿಯಲ್ಲಿ.

ನಾಗಾ ಸಾಧುಗಳು ಸುಖಾಸುಮ್ಮನೆ ಭವಿಷ್ಯ ನುಡಿಯೋದಿಲ್ಲ, ಯಾವುದೋ ಕ್ಷೇತ್ರದ ಮಹಿಮೆಯನ್ನು ಸಾರೋದಿಲ್ಲ. ಅವ್ರು ಹಾಗೇ ಹೇಳ್ತಾರೆ ಅಂತಾದ್ರೆ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಹಾಗೇ ಅದನ್ನು ಶೇಕಡಾ 100ರಷ್ಟು ನಂಬುತ್ತಾರೆ ಜನ. ಸಿದ್ಧಾರೂಢರಿಗೆ ಆರೂಢ ಜ್ಯೋತಿ ಸಿಕ್ಕಿದ್ದು ಇದೇ ಸ್ಥಳದಲ್ಲಿ ಅಂತಾ ಹೇಳಿದ್ದು ನಾಗಾ ಸಾಧು. ಅವರೇ ಇಂದಿಗೂ ಸಿದ್ಧಾರೂಢರು ಕಣವಿಸಿದ್ದಗೇರಿಯಲ್ಲಿ ಶಿವನನ್ನು ತೋಡೆಯ ಮೇಲೆ ಕೂರಿಸಿಕೊಂಡು ಪೂಜೆ ಮಾಡ್ತಾ ಇದ್ದಾರಂತೆ. ಹೌದು, ಇಂದಿಗೂ ಆ ಪೂಜೆ ನಿಗೂಢವಾಗಿ ನಡೀತಾ ಇದೆ.

ಇದನ್ನೂ ಓದಿ: ವಿಮಾನಗಳ ಟಿಕೆಟ್ ಸೋಲ್ಡ್‌ ಔಟ್.. KKRTC ಇಂದ ಕುಂಭಮೇಳಕ್ಕೆ ವಿಶೇಷ ಬಸ್​ ವ್ಯವಸ್ಥೆ 

ಕಣವಿಸಿದ್ದಗೇರಿ ಕ್ಷೇತ್ರದ ಮಹಿಮೆಯನ್ನ ಮಹಾಕುಂಭ ಮೇಳದಲ್ಲಿರೋ ನಾಗಾ ಸಾಧು ತುಂಬು ಮನಸ್ಸಿನಿಂದ ಪ್ರಶಂಸಿಸಿದ್ದಾರೆ. ಹಾಗೇ ಅವ್ರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಣವಿಸಿದ್ದೇಶ್ವರ ದೇವಸ್ಥಾನದಿಂದ ಸುಮಾರು ಒಂದೂವರೆ ಕಿಲೋ ಮೀಟರ್‌ ದೂರದಲ್ಲಿ ಓಂ ಬೆಟ್ಟವಿದೆ. ಆ ಬೆಟ್ಟದ ಮೇಲೊಂದ್‌ ದೀಪದ ಬೃಹತ್‌ ಕಂಬವಿದೆ. ಆ ಕಂಬದ ಮೇಲೆ ದೀಪ ಹಚ್ಚಿದ್ರೆ ಆ ಜ್ಯೋತಿ ಬೆಟ್ಟದ ಕೆಳಭಾಗದಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್‌ ದೂರದಲ್ಲಿರೋ ಕಣವಿಸಿದ್ದೇಶ್ವರ ಲಿಂಗದ ಮೇಲೆ ಹಾಗೇ ಕಣವಿ ದುರ್ಗಾಪರಮೇಶ್ವರಿ ಮುಖದ ಮೇಲೆ ಪ್ರಜ್ವಲಿಸುತ್ತೆ. ಹೌದು, ಇದು ಅಕ್ಷರಶಃ ಸತ್ಯ ಅಂತಾ ಸ್ಥಳೀಯರೂ ಹೇಳ್ತಿದ್ದಾರೆ.

ನಾಗಾ ಸಾಧುಗಳು ಹೇಳ್ತಿರೋ ಪ್ರತಿಯೊಂದು ವಿಚಾರವೂ ಅಚ್ಚರಿ ಮೂಡಿಸುತ್ತಿದೆ. ಹಾಗೇ ನಾಗಾ ಸಾಧು ಏನ್‌ ಹೇಳಿದ್ದಾರೋ ಅದೆಲ್ಲವೂ ಸತ್ಯ ಅನ್ನೋದನ್ನು ಸ್ಥಳೀಯರು ಹೇಳ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಕಾಣಿಸ್ತಿವೆ. ಇನ್ನು ಅಲ್ಲಿರೋ ಗುಹೆಗಳಲ್ಲಿಯೂ ನಿಗೂಢತೆ ಇದೆ, ಸಾವಿರಾರು ಗುಹೆಗಳಿವೆ ಅನ್ನೋ ಉಲ್ಲೇಖವೂ ಇದೆ. ಅಷ್ಟೇ ಅಲ್ಲ ಅಲ್ಲಿಯ ಓಂ ಬೆಟ್ಟದಲ್ಲಿ ಸರ್ವರೋಗವೂ ವಾಸಿಯಾಗೋ ಸಸ್ಯಸಂಪತ್ತು ಇದೆ ಅಂತೆ. ಹೀಗಾಗಿ ಈ ಪುಣ್ಯ ಭೂಮಿಯಲ್ಲಿ ನಾಗಾ ಸಾಧುಗಳು, ಅಘೋರಿಗಳು ತಪಸ್ಸು ಮಾಡ್ತಿದ್ದಾರೆ ಅನ್ನೋ ನಂಬಿಕೆಯೂ ಇದೆ.

publive-image

ನಾಗಾ ಸಾಧುಗಳು ಹೇಳೋ ಪ್ರಕಾರ ಇಲ್ಲಿರೋದು ಒಂದಲ್ಲ ಎರಡೂ ಅಲ್ಲ ಸಾವಿರಾರು ಗುಹೆಗಳಿವೆಯಂತೆ. ಈ ವಿಚಾರವನ್ನೂ ಅಲ್ಲಗೆಳೆಯೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ, ಇಲ್ಲಿ ಕೆಲವು ಗುಹೆಗಳು ಕಾಣಿಸಬಹುದು. ಆ ಗುಹೆಗಳಲ್ಲಿ ಸ್ವಲ್ಪ ದೂರದವರೆಗೂ ಹೋಗಬಹುದು. ಆನಂತರ ಅವುಗಳ ದಾರಿ ಎಲ್ಲಿಗೆ ಹೋಗಿ ತಲುಪುತ್ತವೆ. ಅದೆಷ್ಟು ಗುಹೆಗಳಿಗೆ ಸಂಪರ್ಕವಿದೆ ಅನ್ನೋದನ್ನ ಕಲ್ಪಿಸಿಕೊಳ್ಳೋದಕ್ಕೂ ಆಗಲ್ಲ. ಇಂತಹ ಕಡೆಗಳಲ್ಲೇ ನಾಗಾಸಾಧುಗಳು, ಅಘೋರಿಗಳು ಸಿದ್ಧಿಗಾಗಿ ತಪಸ್ಸು ಮಾಡ್ತಿದ್ದಾರೆ ಅನ್ನೋ ಮಾತಿದೆ.

publive-image

ನಡೆದಾಡುವ ದೇವರು, ಮತನಾಡುವ ಭಗವಂತ ಅಂತಾನೇ ಗುರ್ತಿಸಿಕೊಂಡಿದ್ರು ಶ್ರೀ ಸಿದ್ಧಾರೂಢರು. ಅವರನ್ನು ಸಾಕ್ಷಾತ್‌ ಶಿವನ ಅವತಾರ ಅಂತಾನೇ ಪರಿಗಣಿಸಲಾಗುತ್ತಿದೆ. 1836ರಲ್ಲಿ ಬೀದರ್‌ನಲ್ಲಿ ಜನಿಸಿದ್ದ ಅವ್ರು ತಮ್ಮ 6ನೇ ವಯಸ್ಸಿನಲ್ಲಿಯೇ ಮನೆಯನ್ನು ತ್ಯಜಿಸಿ ಗುರುವನ್ನು ಹುಡುಕಿಕೊಂಡು ಹೊರಡುತ್ತಾರೆ. ಸನ್ಯಾಸತ್ವ ಸ್ವೀಕಾರ ಪಡೆದ ಮೇಲೆ ಅಖಂಡ ಭಾರತವನ್ನು ಕಾಲ್ನಡಿಗೆಯಲ್ಲಿ ಸುತ್ತಿದ್ದಾರೆ. ಅಂತಿಮವಾಗಿ ಹುಬ್ಬಳ್ಳಿಯಲ್ಲಿ ಶಿವೈಕ್ಯರಾಗಿದ್ದು, ಇದೀಗ ಅದೇ ಸ್ಥಳದಲ್ಲಿ ಸಿದ್ಧಾರೂಢ ಮಠ ತಲೆ ಎತ್ತಿ ನಿಂತಿದೆ.

ಈ ಮಠದಲ್ಲಿ ಇಂದಿಗೂ ಪವಾಡಗಳು ನಡೀತಿವೆ. ದೇಶಾದ್ಯಂತ ಇರೋ ಭಕ್ತರು ಇಲ್ಲಿಗೆ ಬಂದು ಅಜ್ಜರ ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ. ಅದೇ ರೀತಿ ಡಾ.ರಾಜ್‌ಕುಮಾರ್‌ ಕುಟುಂಬ ಕೂಡ ಈ ಮಠದ ಭಕ್ತರಾಗಿದ್ದಾರೆ. ಅದನ್ನು ಒಮ್ಮೆ ಪುನೀತ್‌ ರಾಜ್‌ಕುಮಾರ್‌ ಹೇಳಿಕೊಂಡಿದ್ದರು. ಕಣವಿಸಿದ್ದಗೇರಿ ಬಗ್ಗೆ ಯಾರಿಗೂ ಗೊತ್ತಿಲ್ಲದ ರಹಸ್ಯವನ್ನು ನಾಗಾ ಸಾಧು ರಿವೀಲ್‌ ಮಾಡಿದ್ದಾರೆ. ನಿಜಕ್ಕೂ ವಿಸ್ಮಯ. ಆ ಪುಣ್ಯ ಭೂಮಿಗೆ ನ್ಯೂಸ್ಟ್‌ ಫಸ್ಟ್‌ ತಂಡ ಭೇಟಿ ನೀಡಿದಾಗ ಸ್ಥಳೀಯರು ಸತ್ಯ ಅಂತಾ ಹೇಳ್ಕೊಂಡಿದ್ದಾರೆ. ಇಂತಾ ಕ್ಷೇತ್ರಗಳ ಬಗ್ಗೆ ಜನ ಇನ್ನಷ್ಟು ಅರಿತುಕೊಳ್ಳುವಂತಾಗಲಿ ಅನ್ನೋದು ನಮ್ಮ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment