/newsfirstlive-kannada/media/post_attachments/wp-content/uploads/2024/03/PANIPURI.jpg)
ಭಾರತದ ಅತ್ಯಂತ ಜನಪ್ರಿಯ ಸ್ಟ್ರೀಟ್ ಫುಡ್ ಪಾನಿಪುರಿ. ಇದನ್ನು ಗೋಲಗಪ್ಪ ಎಂದು ಕೂಡ ಕರೆಯಲಾಗುತ್ತದೆ. ಪಾನಿಪುರಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈಗ ಮಹಾರಾಷ್ಟ್ರದ ಗೋಲಗಪ್ಪ ವ್ಯಾಪಾರಿಯೊಬ್ಬರು ಪಾನಿಪುರಿ ಪ್ರಿಯರಿಗೆ ವಿಶೇಷ ಆಫರ್ ಒಂದು ಕೊಟ್ಟಿದ್ದಾರೆ.
ಏನಿದು ಆಫರ್?
ಗೋಲಗಪ್ಪ ವ್ಯಾಪಾರಿ ಜನರಿಗೆ ನೀಡಿರೋ ವಿಶೇಷ ಆಫರ್ ಹೀಗಿದೆ. ಗ್ರಾಹಕರು ಒಂದು ಸಲ 99 ಸಾವಿರ ನೀಡಿದ್ರೆ ಸಾಕು ಜೀವನಪೂರ್ತಿ ಎಷ್ಟು ಬೇಕಾದ್ರೂ ಪಾನಿಪುರಿ ತಿನ್ನಬಹುದು. ಒಮ್ಮೆ ಹಣ ನೀಡಿದ್ರೆ ಮತ್ಯಾವತ್ತೂ ತಮ್ಮ ಜೀವಿತಾವಧಿಯಲ್ಲಿ ಗೋಲಗಪ್ಪ ತಿನ್ನಲು ಹಣ ನೀಡಬೇಕಿಲ್ಲ ಎಂಬುದು ಆಫರ್.
99 ಸಾವಿರ ನೀಡಿದ ಮೇಲೆ ಗ್ರಾಹಕರು ಯಾವುದೇ ಸಮಯದಲ್ಲಿ ಬಂದು ಎಷ್ಟು ಬೇಕಾದರೂ ಗೋಲ್ಗಪ್ಪಗಳನ್ನು ತಿನ್ನಬಹುದು. ಈ ರೀತಿ ವಿಶೇಷ ಆಫರ್ ನೀಡಿದ್ದು ಮತ್ಯಾರು ಅಲ್ಲ, ಬದಲಿಗೆ ನಾಗ್ಪುರದ ವಿಜಯ್ ಮೇವಾಲಾಲ್ ಗುಪ್ತಾ ಅನ್ನೋ ವ್ಯಾಪಾರಿ.
ಏನಂದ್ರು ವಿಜಯ್?
ನಾನು ಪ್ರತಿ ದಿನ ಸಂಜೆ 6 ಗಂಟೆಗೆ ಸ್ಟಾಲ್ ಓಪನ್ ಮಾಡುತ್ತೇನೆ. ಜನರಿಗೆ ಪಾನಿಪುರಿ ಎಂದರೆ ಇಷ್ಟ. ಒಂದೇ ಬಾರಿ ದೊಡ್ಡ ಮೊತ್ತದ ಹಣ ಪಾವತಿಸಿ ಜೀವನ ಪರ್ಯಂತ ಲಾಭ ಪಡೆಯಬಹುದು. ಪಾನಿಪುರಿ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಜನರಿಗೆ ಪಾನಿಪುರಿ ಮೇಲಿರೋ ಪ್ರೀತಿಯೇ ನಾನು ಈ ಆಫರ್ ನೀಡಲು ಕಾರಣ ಎಂದಿದ್ದಾರೆ.
ಇದನ್ನೂ ಓದಿ:6,6,6,6,6,6,6; ಸ್ಫೋಟಕ ಶತಕ ಸಿಡಿಸಿದ ರೋಹಿತ್ ಶರ್ಮಾ; ಯುವರಾಜ್ ಸಿಂಗ್ ದಾಖಲೆ ಉಡೀಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ