newsfirstkannada.com

×

ನ್ಯೂ ಇಂಡಿಯಾ ಅಶ್ಯೂರೆನ್ಸ್​ನಲ್ಲಿ ಉದ್ಯೋಗಗಳು.. ಆಯ್ಕೆ ಆದವರಿಗೆ 80 ಸಾವಿರ ರೂ. ಸ್ಯಾಲರಿ

Share :

Published September 9, 2024 at 1:32pm

Update September 9, 2024 at 2:20pm

    ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ

    ಪ್ರಮುಖ ದಿನಾಂಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ ಮಾಹಿತಿ ಇಲ್ಲಿದೆ

    ಅರ್ಜಿ ಶುಲ್ಕ ಎಷ್ಟು ಇರುತ್ತೆ, ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಗೊತ್ತಾ?

ವಿಮಾ ವಲಯದಲ್ಲಿ ಸರ್ಕಾರಿ ಉದ್ಯೋಗ ಬಯಸುವವರಿಗೆ ಅತ್ಯುತ್ತಮ ಅವಕಾಶವೊಂದು ಹುಡುಕಿಕೊಂಡು ಬಂದಿದೆ. ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ (ಎನ್​​ಎಐಸಿಎಲ್​) ಇಲಾಖೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಿದೆ. ಸರ್ಕಾರಿ ವಿಮಾ ಕಂಪನಿಯಲ್ಲಿ ಅಧಿಕಾರಿಯಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳು ಈ ಸುವರ್ಣಾವಕಾಶ ಉಪಯೋಗಿಸಿಕೊಳ್ಳಬಹುದು.

ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 6 ರಂದು ನೋಟಿಫಿಕೇಶನ್ ರಿಲೀಸ್ ಮಾಡಿತ್ತು. ಆಡಳಿತ ಅಧಿಕಾರಿ ಸ್ಕೇಲ್-1, ಅಕೌಂಟ್​ ಪೋಸ್ಟ್​ಗಳನ್ನು ಭರ್ತಿ ಮಾಡಲು ಈ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕವೇ ಅಪ್ಲೇ ಮಾಡಬೇಕು. ಇನ್ನು ಈ ಹುದ್ದೆಗೆ ಸಂಬಂಧಿಸಿದ ಪ್ರಮುಖವಾದ ದಿನಾಂಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ವಯೋಮಿತಿ ಸೇರಿ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ.

ಸಂಬಳ ಹಾಗೂ ಒಟ್ಟು ಹುದ್ದೆಗಳು
ಸ್ಯಾಲರಿ- 80,000 ರೂಪಾಯಿಗಳು
ಎನ್​​ಎಐಸಿಎಲ್​ನಲ್ಲಿ ಒಟ್ಟು 170 ಹುದ್ದೆಗಳು ಖಾಲಿ ಇವೆ

ವಯೋಮಿತಿ-
21 ವರ್ಷದಿಂದ 30 ವರ್ಷದ ಒಳಗಿನವರಿಗೆ ಅವಕಾಶ

ವಿದ್ಯಾರ್ಹತೆ-
ಅಭ್ಯರ್ಥಿಗಳು ಪದವಿ ಅಥವಾ ಸ್ನಾತ್ತಕೋತರ ಪದವಿಯನ್ನ ಪೂರ್ಣಗೊಳಿಸಿರಬೇಕು
ಜನರಲ್ ಅಭ್ಯರ್ಥಿಗಳು ಶೇಕಡಾ 60 ರಷ್ಟು ಅಂಕಗಳನ್ನು ಪಡೆದಿರಬೇಕು. ಎಸ್​​ಸಿ, ಎಸ್​​ಟಿ, ವಿಶೇಷ ಚೇತನರು ಶೇಕಡಾ 55 ರಷ್ಟು ಅಂಕಗಳನ್ನು ಹೊಂದಿರಲೇಬೇಕು.
ಅಕೌಂಟ್​ ಹುದ್ದೆಗೆ ಐಸಿಐಎ, ಎಂಬಿಎ ಫೈನಾನ್ಸ್​/ ಪಿಜಿಡಿಎಂ ಪೈನಾನ್ಸ್/ಎಂಕಾಮ್

ಆಯ್ಕೆ ಪ್ರಕ್ರಿಯೆ-
ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ ಮತ್ತು
ಸಂದರ್ಶನ

ಅರ್ಜಿ ಶುಲ್ಕ ಎಷ್ಟು ಇರುತ್ತದೆ..?
ಎಲ್ಲ ಜನರಲ್ ಅಭ್ಯರ್ಥಿಗಳಿಗೆ- 850 ರೂಪಾಯಿ
ಎಸ್​​ಸಿ, ಎಸ್​​ಟಿ, ವಿಶೇಷ ಚೇತನರು- 100 ರೂಪಾಯಿ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ- 10 ಸೆಪ್ಟೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 29 ಸೆಪ್ಟೆಂಬರ್ 2024
ಅಡ್ಮಿಟ್ ಕಾರ್ಡ್ (ಪ್ರವೇಶ ಪತ್ರ)- ಅಕ್ಟೋಬರ್ 1ನೇ ವಾರ
ಮೊದಲ ಹಂತದ ಆನ್​ಲೈನ್ ಪರೀಕ್ಷೆ- 13 ಅಕ್ಟೋಬರ್
2ನೇ ಹಂತದ ಆನ್​ಲೈನ್ ಪರೀಕ್ಷೆ- 17 ನವೆಂಬರ್

ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ newindia.co.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯೂ ಇಂಡಿಯಾ ಅಶ್ಯೂರೆನ್ಸ್​ನಲ್ಲಿ ಉದ್ಯೋಗಗಳು.. ಆಯ್ಕೆ ಆದವರಿಗೆ 80 ಸಾವಿರ ರೂ. ಸ್ಯಾಲರಿ

https://newsfirstlive.com/wp-content/uploads/2024/09/JOB_LIC.jpg

Load More