newsfirstkannada.com

ಯೇಸು ಒಲಿಯುತ್ತಾನೆಂದು ಉಪವಾಸ; ಸತ್ತವರ ಸಂಖ್ಯೆ 403ಕ್ಕೆ ಏರಿಕೆ

Share :

20-07-2023

    ನಕಲಿ ಕ್ರೈಸ್ತ ಬೋಧಕನ ಮಾತು ಕೇಳಿ ಜನರ ಸಾವು

    ಉಪವಾಸ ಮಾಡಿದರೆ ದೇವರು ಒಲಿಯುತ್ತಾನೆ ಎಂದು ಪ್ರಚಾರ

    ಕಾಡಿಗೆ ಕರೆದುಕೊಂಡು ಹೋಗಿ ಉಪವಾಸ ಮಾಡಿಸಿದ ಪಾದ್ರಿ

ನೈರೋಬಿ: ಕೀನ್ಯಾದ ಶಕಹೊಲ ಅರಣ್ಯದಲ್ಲಿ ಮತ್ತೆ 12 ಶವಗಳು ಪತ್ತೆಯಾಗಿವೆ. ಇವರೆಲ್ಲರು ನಕಲಿ ಕ್ರೈಸ್ತ ಬೋಧಕನ ಮಾತು ಕೇಳಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟು ಈವರೆಗೆ ಸುಮಾರು 403 ಜನರು ಉಪವಾಸ ಮಾಡಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಪೌಲ್​​ ಮೆಕೆಂಝಿ ಎಂಬ ನಕಲಿ ಧರ್ಮ ಪ್ರಚಾರಕ ಉಪವಾಸ ಮಾಡಿದರೆ ದೇವರು ಒಲಿಯುತ್ತಾನೆ ಎಂದು ಕ್ರೈಸ್ತ ಧರ್ಮದ ಜನರಿಗೆ ಹೇಳಿ ಅವರನ್ನು ಕಾಡಿಗೆ ಕರೆಸಿ ಉಪವಾಸ ಮಾಡಿಸಿದ್ದಾನೆ. ಹೀಗೆ ಉಪವಾಸ ಮಾಡಿದವರಲ್ಲಿ ಈವರೆಗೆ 403 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಪೌಲ್​​ ಮೆಕೆಂಝಿ 2003ರಲ್ಲಿ ಗುಡ್​ ನ್ಯೂಸ್​​ ಎಂಬ ಚರ್ಚ್​ ಸ್ಥಾಪಿಸಿದ್ದ ಮತ್ತು ಅಲ್ಲೇ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದ. 2017ರಲ್ಲಿ ಅಲ್ಲಿನ ‘ಮಕ್ಕಳಿಗೆ ಶಾಲೆಗೆ ಹೋಗಬೇಡಿ, ಬೈಬಲ್​ ಶಿಕ್ಷಣವನ್ನು ಮಾನ್ಯ ಮಾಡುವುದಿಲ್ಲ’ ಎಂದು ಪ್ರಚಾರವನ್ನು ಮಾಡಿದ್ದ.

ಇದಾದ ಬಳಿ ಇತ್ತೀಚಿನ ವರ್ಷದಲ್ಲಿ ಜನರನ್ನು ಅರಣ್ಯಕ್ಕೆ ಕರೆಸಿಕೊಂಡು ಉಪವಾಸ ಮಾಡಿಸಿದ್ದಾನೆ. ಇದನ್ನು ನಂಬಿ ಉಪವಾಸಕ್ಕೆ ಇಳಿದ ನೂರಾರು ಜನರು ಸಾವನ್ನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯೇಸು ಒಲಿಯುತ್ತಾನೆಂದು ಉಪವಾಸ; ಸತ್ತವರ ಸಂಖ್ಯೆ 403ಕ್ಕೆ ಏರಿಕೆ

https://newsfirstlive.com/wp-content/uploads/2023/07/Nairobi.jpg

Load More