ಅಶ್ಲೀಲ ಚಾಟ್ ಹಾಗೂ ಆಡಿಯೋ ಕಾಲ್ ಇಟ್ಟುಕೊಂಡು ಬ್ಲ್ಯಾಕ್‌ಮೇಲ್!
ಗರುಡ ಮಾಲ್ ಬಳಿ ಮಂಜುಳಾ, ಪತಿ ಶಿವರಾಜ್ ಪಾಟೀಲ್ ಬಂಧನ
ಮಂಜುಳಾ ಪಾಟೀಲ್, ಕಲಬುರಗಿಯ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ
ಈ ರಾಜಕಾರಣವೆಂಬ ಮಹಾಸಾಗರದಲ್ಲಿ ಇರದ ಪಟುಗಳಿಲ್ಲ. ಇಲ್ಲಿ ನೇರಾನೇರ ಫೈಟ್ ಇದೆ. ಒಳೇಟು ಇದೆ. ವೈಷಮ್ಯವಿದೆ. ಕೊನೆಗೆ ಹೆಣ್ಣನ್ನು ಮುಂದಿಟ್ಟುಕೊಂಡು ಆಡುವ ಹೊಲಸು ರಾಜಕಾರಣವೂ ಇದರ ಭಾಗವೇ. ಸದ್ಯ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹನಿಟ್ರ್ಯಾಪ್ ಬಯಲಾಗಿದೆ.
ಇದನ್ನೂ ಓದಿ: ಬೇಲಿಕೇರಿ ಪ್ರಕರಣದಲ್ಲಿ 44.54 ಕೋಟಿ ರೂ ದಂಡ; ಯಾವ ಕೇಸ್ನಲ್ಲಿ ಎಷ್ಟೆಷ್ಟು ಫೈನ್?
ಇವರ ಹೆಸರು ಮಂಜುಳಾ ಪಾಟೀಲ್. ಕಲಬುರಗಿಯ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ. ರೀಲ್ಸ್ ಮಾಡ್ತಾ ತನ್ನ ಕೆಲಸ ಆಯ್ತು ಅಂತಿದ್ರೆ ಏನೂ ಆಗ್ತಿರಲಿಲ್ಲ. ಉತ್ತರ ಕರ್ನಾಟದ ಜಾನಪದ ಹಾಡುಗಳಿಗೆ ಜಬರ್ದಸ್ತ್ ಆಗಿ ರೀಲ್ಸ್ ಮಾಡ್ತಿದ್ದವರು ಈಗ ಪೊಲೀಸ್ ಜೀಪ್ ಹತ್ತಿದ್ದಾರೆ. ಕಲಬುರಗಿ ಮೂಲದ ರೀಲ್ಸ್ ರಾಣಿ ಮಂಜುಳಾ ಸಿಸಿಬಿ ಪೊಲೀಶರ ವಶದಲ್ಲಿದ್ದಾರೆ.
ಇದು ಸಾಮಾನ್ಯ ಕೇಸ್ ಅಲ್ಲ. ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಆರೋಪದ ಕೇಸ್. ಅಶ್ಲೀಲ ಆಡಿಯೋ, ಅಶ್ಲೀಲ ಚಾಟಿಂಗ್, ಅಶ್ಲೀಲ ವಿಡಿಯೋ ಕಾಲ್ ಇಟ್ಕೊಂಡ್ 20 ಲಕ್ಷಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಮಾತ್ರವಲ್ಲದೇ ಇದೇ ಆರೋಪ ಸಂಬಂಧ ಮಂಜುಳಾ ಪಾಟೀಲ್ ಮತ್ತು ಪತಿ ಶಿವರಾಜ್ ಪಾಟೀಲ್ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಸ್ಲೋ ಪಾಯಿಸನ್ ಕೊಟ್ಟರೂ ಸಾಯಲಿಲ್ಲ.. ಬದುಕಿದ್ದ ಗಂಡನ ಉಸಿರು ನಿಲ್ಲಿಸಿದ ಪಾಪಿ ಹೆಂಡತಿ; ಕಂಪ್ಲೀಟ್ ಸ್ಟೋರಿ ಇಲ್ಲಿದೆ!
20 ಲಕ್ಷಕ್ಕೆ ಮಾಜಿ ಸಚಿವರ ಹನಿಟ್ರ್ಯಾಪ್?
ಮಾಜಿ ಸಚಿವರ ಜೊತೆ ಚಾಟಿಂಗ್ ಮಾಡಿದ್ದನ್ನ ಇಟ್ಟುಕೊಂಡು ಆರೋಪಿಗಳು ಬ್ಲಾಕ್ ಮೇಲ್ ಮಾಡ್ತಿದ್ದರು. ವಾಟ್ಸಾಆ್ಯಪ್ನಲ್ಲಿ ಅಶ್ಲೀಲ ಚಾಟ್ ಹಾಗೂ ಆಡಿಯೋ ಕಾಲ್ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ರಂತೆ. 3 ದಿನದ ಹಿಂದೆ ಮಾಜಿ ಸಚಿವರ ಪುತ್ರನ ಭೇಟಿ ಮಾಡಿದ್ದ ಆರೋಪಿಗಳು, ನಿಮ್ಮ ತಂದೆ ನಿಂದನೆಯ ಸಂದೇಶ ಕಳಿಸಿದ್ದಾರೆ. ಇದೆಲ್ಲ ಹೊರಗಡೆ ಬರಬಾರದು ಅಂದ್ರೆ 20 ಲಕ್ಷ ರೂಪಾಯಿ ಕೊಡಬೇಕೆಂದು ಪದೇ ಪದೇ ಬೇಡಿಕೆ ಇಡ್ತಿದ್ರಂತೆ. ಈ ಸಂಬಂಧ ಮಾಜಿ ಸಚಿವರ ಪುತ್ರ ನೀಡಿದ ದೂರಿನಡಿ ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ಹಣ ಕೊಡುವುದಾಗಿ ಕರೆದಿದ್ದು ಬಂದ ಮಂಜುಳಾ ಹಾಗೂ ಪತಿ ಶಿವರಾಜ್ ಪಾಟೀಲ್ ದಂಪತಿಯನ್ನು ಬೆಂಗಳೂರಿನ ಗರುಡ ಮಾಲ್ ಬಳಿ ಬಂಧಿಸಿದ್ದಾರೆ. ಈಗ ಪೊಲೀಸರು ಪತಿ-ಪತ್ನಿಯನ್ನು ಬಂಧಿಸಿದ್ದು ವಿಚಾರಣೆಗೆ 8 ದಿನ ಕಸ್ಟಡಿಗೆ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ