Advertisment

ನ್ಯಾಷನಲ್ ಅಲ್ಯೂಮಿನಿಯಂ ಕಂಪನಿಯಲ್ಲಿ ವಿವಿಧ ಹುದ್ದೆಗಳು.. 500ಕ್ಕೂ ಹೆಚ್ಚಿನ ಕೆಲಸಗಳಿಗೆ ಅಪ್ಲೇ ಮಾಡಿ

author-image
Bheemappa
Updated On
ಬ್ಯಾಂಕ್​​ನಿಂದ ಗುಡ್​ನ್ಯೂಸ್​; ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು.. ನಾಳೆ ಅರ್ಜಿ ಆರಂಭ
Advertisment
  • ಅರ್ಜಿ ಶುಲ್ಕ ಕೇವಲ 100 ರೂ. ಮಾತ್ರ, ನಿಮಗಾಗಿ ಈ ಅವಕಾಶ
  • ಯಾವ್ಯಾವ ಕೋರ್ಸ್ ಮುಗಿಸಿದವ್ರು ಇವಕ್ಕೆ ಅಪ್ಲೇ ಮಾಡಬಹುದು?
  • 10ನೇ ತರಗತಿ ಓದಿದವರು ಈ ಕೆಲಸಗಳಿಗೆ ಅರ್ಹರು ಆಗಿರುತ್ತಾರೆ

ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (NALCO) ಅಡಿ ಬರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಹೊಸ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದ್ದು ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು. ಈಗಾಗಲೇ ಅರ್ಜಿಗಳು ಆರಂಭಗೊಂಡಿದ್ದು ಕೂಡಲೇ ಉದ್ಯೋಗಾಕಾಂಕ್ಷಿಗಳು ಆನ್​​ಲೈನ್​ ಮೂಲಕ ಅಪ್ಲೇ ಮಾಡಬಹುದಾಗಿದೆ.

Advertisment

ಪ್ರಯೋಗಾಲಯ, ಆಪರೇಟರ್, ಫಿಟ್ಟರ್, ಎಲೆಕ್ಟ್ರಿಕಲ್, ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್, ಜಿಯಾಲಜಿಸ್ಟ್, ಮೈನಿಂಗ್, ಪ್ರಥಮ ಸಹಾಯಕ, ಪ್ರಯೋಗಾಲಯ ತಂತ್ರಜ್ಞ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದಕ್ಕಾಗಿ ಅಧಿಸೂಚನೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 35 ವರ್ಷದ ಒಳಗಿನವರಿಗೆ ಅವಕಾಶ ಇದೆ. ಅರ್ಜಿ ಶುಲ್ಕ, ವೇತನ ಶ್ರೇಣಿ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ ಇತ್ಯಾದಿ ಮಾಹಿತಿ ಇಲ್ಲಿ ವಿವರವಾಗಿ ನೀಡಲಾಗಿದೆ. ವೆಬ್​ಸೈಟ್​- mudira.nalcoindia.co.in

ಒಟ್ಟು ಹುದ್ದೆಗಳು- 518 ಇವೆ

ವಿದ್ಯಾರ್ಹತೆ
10ನೇ ತರಗತಿ, ದ್ವಿತಿಯ ಪಿಯುಸಿ, ಐಟಿಐ, ಡಿಪ್ಲೋಮಾ, ಬಿಎಸ್​ಸಿ, ಬಿಇ
ಹುದ್ದೆಗಳಿಗೆ ತಕ್ಕಂತೆ ಇನ್ನು ಕೆಲ ಕೋರ್ಸ್​ಗಳನ್ನು ಕೇಳಲಾಗಿದೆ.

ಇದನ್ನೂ ಓದಿ: ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ CBSC.. ಪಿಯುಸಿ ಮುಗಿಸಿದವ್ರಿಗೂ ಗೋಲ್ಡನ್ ಚಾನ್ಸ್​

Advertisment

publive-image

ವಯೋಮಿತಿ
18 ರಿಂದ 35 ವರ್ಷಗಳು

ಅರ್ಜಿ ಶುಲ್ಕ ಎಷ್ಟು ಇದೆ?
ಜನರಲ್, ಇಡಬ್ಲುಎಸ್, ಒಬಿಸಿ- 100 ರೂಪಾಯಿ
ಎಸ್​​ಸಿ, ಎಸ್​ಟಿ, ವಿಶೇಷ ಚೇತನ- ಇಲ್ಲ

ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಬೇಸಡ್ ಟೆಸ್ಟ್
ಟ್ರೇಡ್ ಟೆಸ್ಟ್ (ಹುದ್ದೆಗೆ ಅನ್ವಯಿಸಿದರೆ)

ಪ್ರಮುಖ ದಿನಾಂಕ
ನೋಟಿಫಿಕೆಶನ್ ಬಿಡುಗಡೆಯಾದ ದಿನಾಂಕ- 20 ಡಿಸೆಂಬರ್ 2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 21 ಜನವರಿ 2025

Advertisment

ಸಂಪೂರ್ಣ ಮಾಹಿತಿಗಾಗಿ- https://static-cdn.publive.online/newsfirstlive-kannada/media/pdf_files/iorms/Uploaded_Data/Advertisement638702412164203980_12240214.pdf

ಅರ್ಜಿ ಸಲ್ಲಿಕೆಗೆ- https://mudira.nalcoindia.co.in/Account/LoginRecruitment.aspx

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment