Advertisment

ನಮಸ್ತೆ ಲಾರೆನ್ಸ್ ಭಾಯ್​.. ಸಲ್ಲು ಮಾಜಿ ಪ್ರೇಯಸಿ ಗ್ಯಾಂಗ್​ಸ್ಟಾರ್​ ಎದುರು ಇಟ್ಟ ಮನವಿ ಎಂತಹದು?

author-image
Gopal Kulkarni
Updated On
ನಮಸ್ತೆ ಲಾರೆನ್ಸ್ ಭಾಯ್​.. ಸಲ್ಲು ಮಾಜಿ ಪ್ರೇಯಸಿ ಗ್ಯಾಂಗ್​ಸ್ಟಾರ್​ ಎದುರು ಇಟ್ಟ ಮನವಿ ಎಂತಹದು?
Advertisment
  • ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಗ್ಯಾಂಗ್​ಸ್ಟಾರ್​ಗೆ ಮಾಡಿದ ಮನವಿ ಏನು?
  • ಸಲ್ಮಾನ್​ ಖಾನ್​ಗೂ ಸೋಮಿ ಅಲಿಗೂ ಈ ಹಿಂದೆ ಇದ್ದ ನಂಟು ಎಂತಹದು?
  • ಸಲ್ಲು ಹತ್ಯೆಗೆ ಪ್ರಯತ್ನ ಪಡುತ್ತಿರುವ ಗ್ಯಾಂಗ್​ಸ್ಟಾರ್​ ನಂಬರ್ ಕೇಳಿದ್ದು ಯಾಕೆ?

ಬಾಲಿವುಡ್​ನ ಮಾಜಿ ನಟಿ ಹಾಗೂ ಸಲ್ಮಾನ್ ಖಾನ್​​ ಅವರ ಮಾಜಿ ಪ್ರೇಯಸಿ ಸೋಮಿ ಅಲಿ, ಸಾರ್ವಜನಿಕವಾಗಿ ನಾನು ನಿಮಗೆ ಜೂಮ್ ಕಾಲ್ ಮಾಬೇಕೆಂದು ಸದ್ಯ ಗುಜರಾತ್​ನ ಸಾಬರಮತಿ ಜೈಲಿನಲ್ಲಿರುವ ಗ್ಯಾಂಗ್​ಸ್ಟಾರ್ ಲಾರೆನ್ಸ್​ ಬಿಷ್ಣೋವಿಗೆ ಮನವಿ ಮಾಡಿದ್ದಾಳೆ.

Advertisment

ಅದರಲ್ಲೂ ಈ ಒಂದು ಜೂಮ್​ ಕಾಲ್ ವಿಷಯ ಮಹಾರಾಷ್ಟ್ರದ ಮಾಜಿ ಮಂತ್ರಿ ಹಾಗೂ ಎನ್​ಸಿಪಿ ಲೀಡರ್ ಬಾಬಾ ಸಿದ್ಧಕಿ ಹತ್ಯೆಯನ್ನು ಲಾರೆನ್ಸ್ ಬಿಷ್ಣೋವಿ ತಂಡವೇ ಒಪ್ಪಿಕೊಂಡ ಮೇಲೆ ಮುನ್ನೆಲೆಗೆ ಬಂದಿದ್ದು, ಮತ್ತಷ್ಟು ಕುತೂಹಲಕ್ಕೆ ಈಡು ಮಾಡಿದೆ. ಅದು ಮಾತ್ರವಲ್ಲ ಖಾನ್​ಗಳ ಜೊತೆ ಯಾರೆ ನಂಟು ಹೊಂದಿದ್ದರು ಅವರಿಗೆ ಒಂದು ಗತಿ ಕಾದಿದೆ ಎಂದೇ ಬಿಷ್ಣೋವಿ ಪಡೆ ಹೇಳಿಕೊಂಡಿದೆ. ಈ ಸಂದರ್ಭದಲ್ಲಿ ಸೋಮಿ ಅಲಿಯ ಈ ಒಂದು ಮನವಿ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಂತಾಗಿದೆ.

ಇದನ್ನೂ ಓದಿ:24/7 ಪೊಲೀಸ್ ಗಸ್ತು, AI ವ್ಯವಸ್ಥೆಯ CCTV ಕ್ಯಾಮೆರಾ; ಹೇಗಿದೆ ಸಲ್ಮಾನ್ ಖಾನ್​ ನಿವಾಸಕ್ಕೆ ಭದ್ರತೆ..?

publive-image

ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್ ಹಾಕಿರುವ ಸೋಮಿ ಅಲಿ, ‘ನಮಸ್ತೆ ಲಾರೆನ್ಸ್​ ಭಾಯ್, ನೀವು ಜೈಲಿನಲ್ಲಿದ್ದರೂ ಕೂಡ ಜೂಮ್ ಮೂಲಕ ವಿಡಿಯೋ ಕಾಲ್ ಮಾಡುತ್ತಿರಿ ಎಂಬ ಬಗ್ಗೆ ನಾನು ಕೇಳಿದ್ದೇನೆ ಹಾಗೂ ನೋಡಿದ್ದೇನೆ. ಹೀಗಾಗಿ ನಾನು ನಿಮ್ಮ ಜೊತೆ ಕೆಲವು ವಿಷಯಗಳನ್ನು ಚರ್ಚಿಸಬೆಕಿದೆ. ದಯವಿಟ್ಟು ಅದು ಹೇಗೆ ಸಾಧ್ಯ ಎನ್ನುವುದನ್ನು ಸ್ವಲ್ಪ ಹೇಳಿ. ರಾಜಸ್ಥಾನ ಜಗತ್ತಿನಲ್ಲಿಯೇ ನನಗೆ ಅತ್ಯಂತ ಅಚ್ಚುಮೆಚ್ಚಿನ ತಾಣ, ನಾನು ನಿಮ್ಮ ಮಂದಿರಕ್ಕೆ ಭೇಟಿ ನೀಡಬೇಕಾಗಿದೆ. ಅದಕ್ಕೂ ಮೊದಲು ನಾನು ನಿಮಗೆ ಜೂಮ್ ಕಾಲ್ ಮಾಡಬೇಕಿದೆ. ನನ್ನನ್ನು ನಂಬಿ, ಒಂದು ಕಾಲ್ ನಿಮ್ಮ ಒಳ್ಳೆಯದಕ್ಕಾಗಿಯೇ ಇದೆ. ದಯವಿಟ್ಟು ನಿಮ್ಮ ನಂಬರ್ ನನಗೆ ಕೊಡಿ. ಧನ್ಯವಾದಗಳು‘ ಎಂದು ಸೋಮಿ ಅಲಿ ಬರೆದುಕೊಂಡಿದ್ದಾರೆ.

Advertisment

ಇದನ್ನೂ ಓದಿ:ಸಲ್ಮಾನ್ ಖಾನ್​ಗೆ ನೀಡಿರುವ Y plus ಭದ್ರತೆಗೆ ಸರ್ಕಾರ ಎಷ್ಟು ಖರ್ಚು ಮಾಡುತ್ತದೆ..?

1990ರಲ್ಲಿ ಸೋಮಿ ಅಲಿ ಹಾಗೂ ಸಲ್ಮಾನ್ ಖಾನ್ ನಡುವೆ ಗಾಢವಾದ ಒಂದು ಸ್ನೇಹ ಬೆಸೆದುಕೊಂಡಿತ್ತು. ಅದು ಸಾರ್ವಜನಿಕವಾಗಿಯೇ ಮುರಿದು ಬಿದ್ದು ಇತಿಹಾಸದ ಪುಟ ಸೇರಿತು. ಸಲ್ಮಾನ್ ಖಾನ್ ವಿರುದ್ಧ ಸೋಮಿ ಅಲಿ ಕೌಟುಂಬಿಕ ಹಿಂಸೆ ನಡೆಸುತ್ತಾರೆ ಎಂದು ಸೋಮಿ ಅಲಿ ಆರೋಪ ಮಾಡಿದ್ದರು.ಅದನ್ನು ಸಲ್ಮಾನ್ ಖಾನ್ ಸಾರಸಗಟವಾಗಿ ತಳ್ಳಿ ಹಾಕಿದ್ದರು.ಸದ್ಯ ಇದೇ ನಟಿ ಈಗ ಬಿಷ್ಣೋಯಿಗೆ ಜೂಮ್ ವಿಡಿಯೋ ಕಾಲ್ ಮಾಡಬೇಕು ನನಗೆ ನಂಬರ್ ಕೊಡಿ ಎಂದು ಗೋಗರೆಯುತ್ತಿದ್ದಾಳೆ. ಈಗಾಗಲೇ ಅತ್ಯಾಧುನಿಕ ಗನ್​ ಎಕೆ 47,ಎಂ16 ಹಾಗೂ ಎಕೆ 92 ಬಳಸಿ ಸಲ್ಮಾನ್ ಖಾನ್ ಹತ್ಯೆ ಮಾಡಬೇಕೆಂದಿದ್ದ ಪ್ಲ್ಯಾನ್​ನ್ನು ಮುಂಬೈ ಪೊಲೀಸರು ಭೇದಿಸಿದ್ದರು. ಪನ್ವೇಲ್​ನಲ್ಲಿರುವ ತಮ್ಮ ಫಾರ್ಮಸಿಗೆ ತೆರಳುತ್ತಿದ್ದಾಗ ಸಲ್ಮಾನ್ ಹತ್ಯೆ ಮಾಡಲು ಇದೇ ಬಿಷ್ಣೋಯಿ ಗ್ಯಾಂಗ್ ಪ್ಲ್ಯಾನ್ ಮಾಡಿತ್ತು. ಅದನ್ನು ಕೂಡ ಪೊಲೀಸರು ಪತ್ತೆಹಚ್ಚಿ ಅದನ್ನು ಕೂಡ ಹೊಸಕಿ ಹಾಕಿದ್ದರು.

ಹೀಗೆ ಸಲ್ಮಾನ್ ವಿರುದ್ಧ ಇಡೀ ಬಿಷ್ಣೋಯಿ ಗ್ಯಾಂಗ್ ಬೆನ್ನತ್ತಿದ ಬೇತಾಳನಂತೆ ಗಂಟು ಬಿದ್ದಿದೆ. ಇದೇ ಸಮಯದಲ್ಲಿ ಸೋಮಿ ಅಲಿ ಈ ರೀತಿಯೊಂದು ಮನವಿ ಮಾಡಿ ವಾಪಸ್ ಆ ಪೋಸ್ಟ್​ನ್ನು ಡಿಲೀಟ್ ಮಾಡಿದ್ದು ಅನೇಕ ಸಂಶಯಗಳಿಗೆ ಕಾರಣವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment