/newsfirstlive-kannada/media/post_attachments/wp-content/uploads/2025/07/RAMAYANA-3.jpg)
ಅತಿ ದೊಡ್ಡ ಹಿಟ್ ಚಿತ್ರ ‘ರಾಮಾಯಣ’ಕ್ಕಾಗಿ (Ramayana) ಪ್ರೇಕ್ಷಕರು ಕಾತುರದಿಂದ ಕಾಯ್ತಿದ್ದಾರೆ. ಚಿತ್ರದ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ಮೊದಲ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಎರಡನೇ ಭಾಗದ ಚಿತ್ರೀಕರಣ ಕೂಡ ಶೀಘ್ರದಲ್ಲೇ ಆರಂಭವಾಗಲಿದೆ. ಇದೀಗ ಚಿತ್ರದ ಟೀಟಲ್ ಟೀಸರ್ ರಿಲೀಸ್ ಆಗಿದ್ದು, ಪೌರಾಣಿ ಸಿನಿಮಾದ ಎಕ್ಸೈಟ್ಮೆಂಟ್ ಹೆಚ್ಚಿಸಿದೆ.
ಹೇಗೆ ಪರಿಚಯ ಮಾಡಲಾಗಿದೆ..?
ಟೀಸರ್ನಲ್ಲಿ.. ಬ್ರಹ್ಮಾಂಡ ಸೃಷ್ಟಿಯಾದ ಸಮಯದಿಂದ ತ್ರಿಮೂರ್ತಿಗಳು ಬ್ರಹ್ಮಾಂಡವನ್ನು ರಕ್ಷಿಸುತ್ತಿದ್ದಾರೆ. ಬ್ರಹ್ಮ ಸೃಷ್ಟಿಕರ್ತನಾಗಿ, ವಿಷ್ಣು ಸಂರಕ್ಷಕನಾಗಿ, ಶಿವ ವಿನಾಶಕನಾಗಿ.. ಆದರೆ ತ್ರಿಮೂರ್ತಿಗಳಿಂದಾದ ಸೃಷ್ಟಿಯೇ ಬ್ರಹ್ಮಾಂಡವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಹೊರಟಾಗ ಎಲ್ಲ ಯುದ್ಧಗಳಿಗೆ ಅಂತ್ಯ ಹಾಡುವಂತಹ ಮಹಾ ಯುದ್ಧ ಪ್ರಾರಂಭವಾಯಿತು. 2.5 ಶತಕೋಟಿ ಜನರು 5000 ವರ್ಷಗಳಿಂದ ಆರಾಧಿಸುತ್ತಿರುವ ರಾಮ-ರಾವಣರ ಅಮರಕತೆ. ರಾವಣ ಶಕ್ತಿ ಮತ್ತು ಪ್ರತೀಕಾರ. ರಾಮ ಧರ್ಮ ಮತ್ತು ತ್ಯಾಗ ಎನ್ನುತ್ತ ಟೀಸರ್ನಲ್ಲಿ ಪಾತ್ರ ಪರಿಚಯ ಮಾಡಿಕೊಡಲಾಗಿದೆ.
ಇದನ್ನೂ ಓದಿ: ಯಶ್ ತೋಳಿನಲ್ಲಿ ಮಗುವಾದ ಸಿಂಡ್ರೆಲಾ ರಾಧಿಕಾ ಪಂಡಿತ್..! Cute Photo
ರಾಕಿಂಗ್ ಸ್ಟಾರ್ ಯಶ್ ನಟಿಸಿ, ನಿರ್ಮಾಣ ಮಾಡಿರೋ ಸಿನಿಮಾ ರಾಮಾಯಣ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ನಟನೆ ಮಾಡಿದ್ದಾರೆ. ರಾವಣನ ಪಾತ್ರದಲ್ಲಿ ನಟಿಸ್ತಿರೋ ಯಶ್ ಅಭಿನಯಿಸಿದ್ದಾರೆ.
ಪಾತ್ರ ಪರಿಚಯ
- ಶ್ರೀ ರಾಮ - ರಣಬೀರ್ ಕಪೂರ್
- ಸೀತೆ - ಸಾಯಿ ಪಲ್ಲವಿ
- ಲಕ್ಷ್ಮಣ - ರವಿ ದುಬೆ
- ಹನುಮಂತ - ಸುನ್ನಿ ಡಿಯೋಲ್
- ಎ.ಆರ್.ರೆಹಮಾನ್ - ಹಾನ್ಸ್ ಝಿಮ್ಮರ್
- ಶ್ರೀಧರ್ ರಾಘವನ್ - ಲೇಖಕ
- ನಿರ್ದೇಶಕ- ನಿತೇಶ್ ತಿವಾರಿ
ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್ ಪ್ರಸ್ತುತ ಪಡಿಸ್ತಿದೆ. ಜೊತೆಗೆ ಯಶ್ ಅವರ ಮೋನ್ಸ್ಟರ್ ಮೈಂಡ್ ಕ್ರಿಯೇಷನ್ ಕೂಡ ಸಾಥ್ ನೀಡಿದೆ. ಇನ್ನು ರಾಮಾಯಣ ಚಿತ್ರದ ಟೈಟಲ್ಗೆ ನಮ್ಮ ಸತ್ಯ, ನಮ್ಮ ಇತಿಹಾಸ ಎಂಬ ಅಡಿಬರಹ ನೀಡಲಾಗಿದೆ. 2026 ದೀಪಾವಳಿಗೆ ರಾಮಾಯಣ ಭಾಗ ಒಂದು ಬಿಡುಗಡೆಯಾದರೆ, ಬಾಗ ಎರಡು 2027 ದೀಪಾವಳಿಗೆ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಕಿರಣ್ ರಾಜ್ ಅಭಿಮಾನಿಗಳಿಗೆ ಇಂದು ಹಬ್ಬ.. ಕರ್ಣನ ಮನೆ ತುಂಬಿಸಿಕೊಳ್ಳಲು ಫ್ಯಾನ್ಸ್ ಎಕ್ಸೈಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ