/newsfirstlive-kannada/media/post_attachments/wp-content/uploads/2025/03/JOB_METRO.jpg)
ನಮ್ಮ ಮೆಟ್ರೋದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರವವರಿಗೆ ಇಲ್ಲೊಂದು ಶುಭ ಸುದ್ದಿಯೊಂದು ಹೊರ ಬಿದ್ದಿದೆ. ಸಿಲಿಕಾನ್ ಸಿಟಿಯ ಮೆಟ್ರೋ ಇಡೀ ದೇಶದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಗರದಲ್ಲಿ ಮೆಟ್ರೋ ತನ್ನ ವಿಸ್ತರಣೆಯನ್ನು ಇನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಮಾನವ ಸಂಪನ್ಮೂಲ ಕೂಡ ಅಧಿಕವಾಗಿ ಬೇಕಾಗುತ್ತದೆ. ಈ ಸಂಬಂಧ ಹೊಸ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಉದ್ಯೋಗಗಳನ್ನು ಆಹ್ವಾನ ಮಾಡಿದೆ. ಮೆಟ್ರೋ ರೈಲುಗಳ ಚಾಲಕರ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಲು ಮುಂದಾಗಿದೆ. ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಆಗಿದೆ. ಆನ್‌ಲೈನ್ ಅಥವಾ ಆಫ್‌ಲೈನ್ ಈ ಎರಡರ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಹುದ್ದೆಯ ಹೆಸರು-
ಮೆಟ್ರೋ ರೈಲು ಚಾಲಕ (Train Operator(TO))
ಒಟ್ಟು ಹುದ್ದೆಗಳು- 50 ಇವೆ
ಉದ್ಯೋಗದ ಸ್ಥಳ- ಬೆಂಗಳೂರು
ವೇತನ ಶ್ರೇಣಿ- 35,000 ದಿಂದ ₹82,660 ರೂಪಾಯಿಗಳು
ಅರ್ಜಿ ಶುಲ್ಕ ಎಷ್ಟು ಇದೆ?
ಉಲ್ಲೇಖಿಸಲಾಗಿಲ್ಲ
ಶೈಕ್ಷಣಿಕ ಅರ್ಹತೆ-
10ನೇ ತರಗತಿ ಜೊತೆ ಡಿಪ್ಲೊಮಾ (ಮೆಕಾನಿಕಲ್, ಇಲೆಕ್ಟ್ರಿಕಲ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಟೆಲಿಕಮ್ಯೂನಿಕೇಶನ್, ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್, ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ ಇಂಜಿನಿಯರಿಂಗ್)
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?
38 ವರ್ಷದ ಒಳಗಿನವರಿಗೆ ಅವಕಾಶ
ಆಯ್ಕೆ ಪ್ರಕ್ರಿಯೆ
- ಲೇಖಿತ ಪರೀಕ್ಷೆ
- ಮೌಲ್ಯಮಾಪನ ಪರೀಕ್ಷೆ (Aptitude Test)
- ವೈದ್ಯಕೀಯ ಪರೀಕ್ಷೆ
- ದಾಖಲೆ ಪರಿಶೀಲನೆ
ಆಫ್‌ಲೈನ್ ಅರ್ಜಿ ಸಲ್ಲಿಕೆ ಮಾಡಲು ವಿಳಾಸ-
ಮಹಾ ವ್ಯವಸ್ಥಾಪಕರು (ಮಾನವ ಸಂಪತ್ತ್)
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್,
3ನೇ ಮಹಡಿ, BMTC ಕಾಂಪ್ಲೆಕ್ಸ್, ಕೆ.ಎಚ್. ರಸ್ತೆ, ಶಾಂತಿನಗರ,
ಬೆಂಗಳೂರು- 560027.
ಪ್ರಮುಖ ದಿನಾಂಕಗಳು-
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 12 ಮಾರ್ಚ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 04 ಏಪ್ರಿಲ್ 2025
ಸಹಿ ಮಾಡಿದ ಅರ್ಜಿಯ ಪ್ರಿಂಟ್ ಔಟ್ ಸ್ವೀಕರಿಸುವ ಕೊನೆ ದಿನಾಂಕ- 09 ಏಪ್ರಿಲ್ 2025
ಪೂರ್ಣ ಮಾಹಿತಿಗಾಗಿ-https://english.bmrc.co.in:8282/Kannada/uploads/career/kannada//fileuploads/1741957499587$@!!FModified%20on%2014%20March%202025.pdf
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ