ತುಮಕೂರು ಒಂದೇ ಅಲ್ಲ.. ನಮ್ಮ ಮೆಟ್ರೋ ಪ್ರಯಾಣಿಕರು ಓದಲೇಬೇಕಾದ ಸ್ಟೋರಿ..!

author-image
Ganesh
Updated On
ನಮ್ಮ ಮೆಟ್ರೋ ಪ್ರಯಾಣದ ಪರಿಷ್ಕೃತ ದರ ಹೇಗಿದೆ..? ಎಷ್ಟು ರೂಪಾಯಿ ಕಮ್ಮಿ ಆಗಿದೆ..?
Advertisment
  • ತುಮಕೂರು ಬೆನ್ನಲ್ಲೇ ಮತ್ತೊಂದು ಜಿಲ್ಲೆಗೆ ಭರ್ಜರಿ ಸುದ್ದಿ!
  • ಚಲಘಟ್ಟದಿಂದ ರಾಮನಗರಕ್ಕೆ ಮೆಟ್ರೋ ವಿಸ್ತರಣೆ ಫಿಕ್ಸ್
  • ಮುಂದಿನ ತಿಂಗಳ ಆರಂಭದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ

ಮೆಟ್ರೋ ಪ್ರಿಯರಿಗೆ ಮತ್ತೊಂದು ಭರ್ಜರಿ ಸುದ್ದಿ ಸಿಕ್ಕಿದೆ. ಅದರಲ್ಲೂ ಮೈಸೂರು ರಸ್ತೆಯ ಜನರಿಗೆ ಇದು ಖುಷಿ ಕೊಡೋ ಸಮಾಚಾರ. ನಮ್ಮ ಮೆಟ್ರೋ ತುಮಕೂರಿಗೆ ಮಾತ್ರವಲ್ಲ, ರಾಮನಗರಕ್ಕೂ ಎಂಟ್ರಿ ಕೊಡಲಿದೆ.

ರಾಮನಗರಕ್ಕೂ ಭರ್ಜರಿ ಸುದ್ದಿ!

ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ ಈಗ ಅಂತರ ಜಿಲ್ಲೆ ಜನರಿಗೆ ಮೆಟ್ರೋ ಸೇವೆ ಒದಗಿಸಲು ಸಜ್ಜಾಗ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ವಿಸ್ತರಣೆ ಸಂಬಂಧ ಬಿಎಂಆರ್​ಸಿಎಲ್ ಸರ್ಕಾರಕ್ಕೆ ಕಾರ್ಯಾಸಾಧ್ಯತೆ ವರದಿ ಸಲ್ಲಿಸಿತ್ತು. ಮಾಧಾವರದಿಂದ ಶಿರಾ ಗೇಟ್ ವರೆಗೂ ಮೆಟ್ರೋ ವಿಸ್ತರಣೆ ಹಾಗೂ ಇಪ್ಪತೈದು ಸ್ಟೇಷನ್ ಗಳ ಜೊತೆಗೆ ಬಜೆಟ್ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಕೊಟ್ಟಿತ್ತು. ಇದೇ ಸಂದರ್ಭದಲ್ಲಿ ಅದ್ಯಾಕೆ ತುಮಕೂರಿಗೆ ಮಾತ್ರ ಮೆಟ್ರೋ ಅಂತ ಪ್ರಶ್ನೆ ಸಹ ಕೇಳಿಬಂತು. ಇದೀಗ ತುಮಕೂರಿನ ಬೆನ್ನಲ್ಲೇ ರಾಮನಗರಕ್ಕೂ ಮೆಟ್ರೋ ವಿಸ್ತರಿಸುವ ಯೋಜನೆಗೆ ಸರ್ಕಾರ ಮುಂದಾಗಿದೆ ಎನ್ನುವ ವಿಚಾರ ಹೊರಬಿದ್ದಿದೆ.

ನೇರಳೆ ಮಾರ್ಗದಲ್ಲಿ ವೈಟ್ ಫೀಲ್ಡ್​ನಿಂದ ಮೈಸೂರು ರಸ್ತೆಯ ಚಲಘಟ್ಟದವರೆಗೂ ಮೆಟ್ರೋ ಸಂಚಾರ ಮಾಡ್ತಿದೆ. ಇದನ್ನ ಬಿಡದಿವರೆಗೂ ವಿಸ್ತರಣೆ ಮಾಡಬೇಕು ಅನ್ನೋದು ಜನರ ಡಿಮ್ಯಾಂಡ್ ಆಗಿತ್ತು. ಸರ್ಕಾರದ್ದು ಯೋಜನೆ ಆಗಿತ್ತು. ಆದ್ರೀಗ ಸರ್​ಪ್ರೈಸ್ ಎನ್ನುವಂತೆ ಬಿಡದಿವರೆಗೂ ಮಾತ್ರವಲ್ಲ, ಅಲ್ಲಿಂದ ರಾಮನಗರದವರೆಗೂ ನಮ್ಮ ಮೆಟ್ರೋ ಸಂಚರಿಸಲು ಸಿದ್ಧತೆ ಆಗ್ತಿದೆ ಎನ್ನುವ ಎಕ್ಸ್​ಕ್ಲೂಸೀವ್ ವಿಚಾರ ನ್ಯೂಸ್ ಫಸ್ಟ್ ಗೆ ಲಭ್ಯವಾಗಿದೆ.

ಇದನ್ನೂ ಓದಿ: ದೂರು ದಾಖಲಾಗ್ತಿದ್ದಂತೆ ನಟ ಮಡೆನೂರು ಮನು ಬಂಧನ..!

publive-image

ಬೆಂಗಳೂರು ಟು ರಾಮನಗರ ಮೆಟ್ರೋ ಸಂಬಂಧ ಕಾರ್ಯಾಸಾಧ್ಯತೆ ವರದಿ ಸಿದ್ಧಪಡಿಸಲು ಟೆಂಡರ್ ಕೊಡಲಾಗಿದೆ. ಅಂತಿಮ ಹಂತದ ಕೆಲಸ ಸಾಗ್ತಿದೆಯಂತೆ. ಇನ್ನೆರಡು ವಾರದಲ್ಲಿ ರಿಪೋರ್ಟ್ ರೆಡಿ ಆಗುವ ಸಾಧ್ಯತೆಯಿದ್ದು, ಮುಂದಿನ ತಿಂಗಳ ಆರಂಭದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ರಾಮನಗರದ ಕೆಲವು ಹಳ್ಳಿಗಳು ಗ್ರೇಟರ್ ಬೆಂಗಳೂರಿಗೆ ಸೇರಿಸಲಾಗ್ತಿದೆ. ಇನ್ನು, ರಾಮನಗರವನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವ ಪ್ರಯತ್ನವೂ ಸಾಗ್ತಿದೆ. ಹಾಗಾಗಿ ಮೆಟ್ರೋ ವಿಸ್ತರಣೆಯೂ ಅನಿವಾರ್ಯ ಎನ್ನಲಾಗುತ್ತಿದೆ. ಇದರ ನಡುವೆ ನಮ್ಮ ಮೆಟ್ರೋ ಅಂತರ ಜಿಲ್ಲೆಗಳ ಸಂಚಾರಕ್ಕೆ ಸಜ್ಜುಗೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ಅನುಮತಿ ಸಿಗುತ್ತಾ? ಇಲ್ವಾ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಆರೋಗ್ಯ ಇಲಾಖೆ ಗುಡ್​ನ್ಯೂಸ್.. ತಿಳಿದುಕೊಳ್ಳಲೇಬೇಕಾದ ಸ್ಟೋರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment