ನಮ್ಮ ಮೆಟ್ರೋ ಗುಡ್ ನ್ಯೂಸ್‌.. R.V ರಸ್ತೆಯಿಂದ ಬೊಮ್ಮಸಂದ್ರ ಯೆಲ್ಲೋ ಲೇನ್‌ಗೆ ಬಂತು ಮೊದಲ ರೈಲು!

author-image
admin
Updated On
ನಮ್ಮ ಮೆಟ್ರೋ ಗುಡ್ ನ್ಯೂಸ್‌.. R.V ರಸ್ತೆಯಿಂದ ಬೊಮ್ಮಸಂದ್ರ ಯೆಲ್ಲೋ ಲೇನ್‌ಗೆ ಬಂತು ಮೊದಲ ರೈಲು!
Advertisment
  • ಬೆಂಗಳೂರಿನ ಯೆಲ್ಲೋ ಲೈನ್‌ಗೆ ಮೊದಲ ಮೆಟ್ರೋ ರೈಲು
  • ಜಯನಗರದ R.V ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮಾರ್ಗ
  • ಬೊಮ್ಮಸಂದ್ರದವರೆಗಿನ 18.8 ಕಿಮೀ ಉದ್ದದ ಹಳದಿ ಮಾರ್ಗ

ಸಿಲಿಕಾನ್ ಸಿಟಿ ಬೆಂಗಳೂರಿನ ಬಹುಕಾಲದ ಬೇಡಿಕೆ ಈಡೇರುವ ಕಾಲ ಹತ್ತಿರವಾಗಿದೆ. ಬೆಂಗಳೂರಿನ ಮೆಟ್ರೋ ಯೆಲ್ಲೋ ಲೈನ್‌ಗೆ ಮೊದಲ ಮೆಟ್ರೋ ರೈಲು ಇಂದು BMRCLಗೆ ಹಸ್ತಾಂತರ ಮಾಡಲಾಗಿದೆ. ಶೀಘ್ರದಲ್ಲೇ ಜಯನಗರದ R.V ರಸ್ತೆಯಿಂದ ಬೊಮ್ಮಸಂದ್ರದವರೆಗೆ ಯೆಲ್ಲೋ ಲೇನ್ ಸಂಚಾರ ಆರಂಭ ಮಾಡುವ ಸಿದ್ಧತೆ ಜೋರಾಗಿದೆ.

publive-image

ಬೆಂಗಳೂರಿನ ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈಗಾಗಲೇ ನಮ್ಮ ಮೆಟ್ರೋ ಯೆಲ್ಲೋ ಲೇನ್ ಕಾಮಗಾರಿ ಮುಗಿದಿದೆ. ಆದರೆ ಹಲವಾರು ಕಾರಣಗಳಿಂದ ಮೆಟ್ರೋ ಟ್ರೈನ್ ಇಲ್ಲದೇ ಸಂಚಾರ ಆರಂಭವಾಗಿರಲಿಲ್ಲ. ಈಗ ಪಶ್ಚಿಮ ಬಂಗಾಳದಲ್ಲಿರುವ ಟಿಟಾಘರ್ ರೈಲು ಸಿಸ್ಟಮ್ ಕಂಪನಿ ಮೊದಲ ಮೆಟ್ರೋ ಟ್ರೈನ್ ಅನ್ನ BMRCLಗೆ ಪೂರೈಸಿದೆ. ಈ ವೇಳೆ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಉಪಸ್ಥಿತರಿದ್ದರು.

publive-image

ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (BMRCL) ಚೀನಾದ ಕಂಪನಿಗೆ ಮೆಟ್ರೋ ಟ್ರೈನ್ ಪೂರೈಸುವ ಗುತ್ತಿಗೆ ನೀಡಿದೆ. ಚೀನಾ ಕಂಪನಿ ಭಾರತದ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ಈ ಮೊದಲ ಮೆಟ್ರೋ ರೈಲು ಹಸ್ತಾಂತರಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿರುವ ಟಿಟಾಘರ್ ರೈಲು ಸಿಸ್ಟಮ್ ಕಾರ್ಖಾನೆಯಲ್ಲಿ ಯೆಲ್ಲೋ ಲೇನ್ ಮೆಟ್ರೋ ರೈಲುಗಳನ್ನ ಉತ್ಪಾದಿಸಿ ಪೂರೈಕೆ ಮಾಡಲಾಗುತ್ತಿದೆ.

publive-image

ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ ಅವರು ಇಂದು ನಮ್ಮ ಮೆಟ್ರೋದ ಹಳದಿ ಮಾರ್ಗ ಆರಂಭದ ಕುರಿತಾಗಿ ಮಹತ್ವದ ಕಾರ್ಯಕ್ಕೆ ಸಾಕ್ಷಿಯಾದ ದಿನ. ಟೀಟಾಘರ್‌ನಲ್ಲಿ ತಯಾರಾಗಿರುವ ಮೊದಲ ಮೆಟ್ರೋ ಬೋಗಿಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರು ಚಾಲನೆ ನೀಡಿದ್ದಾರೆ. ಇದರೊಂದಿಗೆ ಪ್ರತಿ ತಿಂಗಳೂ ಒಂದು ಬೋಗಿ ನಿಯೋಜಿತ ಮೆಟ್ರೋ ಲೈನ್‌ಗೆ ಸೇರಿಕೊಳ್ಳಲಿದೆ. ನಂತರ ಪ್ರತೀ ತಿಂಗಳೂ 2 ಬೋಗಿಗಳು ಈ ಮಾರ್ಗಕ್ಕೆ ಸೇರಲಿವೆ.

publive-image

ಜಯನಗರದ ಆರ್.ವಿ ರೋಡ್‌ನಿಂದ, ಬೊಮ್ಮಸಂದ್ರದವರೆಗಿನ 18.8 ಕಿಮೀ ಉದ್ದದ ಹಳದಿ ಮಾರ್ಗ ಆರಂಭಗೊಂಡಲ್ಲಿ ಬೆಂಗಳೂರು ದಕ್ಷಿಣ & ಐಟಿ, ಬಿಟಿ ಕಾರಿಡಾರ್‌ಗಳ ಸಂಪರ್ಕಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment