newsfirstkannada.com

ಕ್ರಿಕೆಟ್​ ಪ್ರೇಮಿಗಳಿಗೆ ಗುಡ್​ನ್ಯೂಸ್​​.. ಇಂದು ಬೆಂಗಳೂರಲ್ಲಿ ಎಷ್ಟು ಗಂಟೆವರೆಗೂ ಮೆಟ್ರೋ ಲಭ್ಯ?

Share :

Published March 25, 2024 at 8:12pm

    ಮಾರ್ಚ್ 25, 29, ಏಪ್ರಿಲ್​ 02ರ ವೇಳಾಪಟ್ಟಿ ಹೀಗಿದೆ

    ಕ್ರಿಕೆಟ್ ಪ್ರೇಮಿಗಳಿಗೆ ಆಫರ್ ನೀಡಿದ ನಮ್ಮ ಮೆಟ್ರೋ​

    ಸಿಲಿಕಾನ್​ ಸಿಟಿ ಮಂದಿ ಓದಲೇಬೇಕಾದ ಸ್ಟೋರಿ ಇದು!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯತ್ತಿರುವ ಟಾಟಾ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಗಳ ವೀಕ್ಷಣೆಗಾಗಿ ಹೋಗುವ ಎಲ್ಲ ಕ್ರಿಕೆಟ್‌ ಪ್ರೇಮಿಗಳಿಗೆ ನಮ್ಮ ಮೆಟ್ರೋ ಪ್ರಕಟಣೆಯೊಂದನ್ನು ಹೊರಡಿಸಿದೆ.

ಇದನ್ನೂ ಓದಿ: RCB, ಪಂಜಾಬ್ ಪಂದ್ಯಕ್ಕೆ ಮಳೆ ಅಡ್ಡಿ.. ಹೇಗಿದೆ ಬೆಂಗಳೂರು ಹವಾಮಾನ..?

ಮಾರ್ಚ್ 25, 29 ಮತ್ತು ಏಪ್ರಿಲ್ 2ರಂದು ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ತನ್ನ ಕೊನೆಯ ರೈಲು ಸೇವೆಗಳನ್ನು ರಾತ್ರಿ 12.30ಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಇನ್ನು, ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯದ ದಿನಗಳಲ್ಲಿ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2.00 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳು ₹50ಕ್ಕೆ ಮಾರಾಟಕ್ಕೆ ಲಭ್ಯವಿರುತ್ತದೆ.  ಜೊತೆಗೆ ನಾಲ್ಕು ಟರ್ಮಿನಲ್​ಳಿಂದ ಮತ್ತು ಇಂಟರ್‌ಚೇಂಜ್ ಸ್ಟೇಷನ್ ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್-ಮೆಜೆಸ್ಟಿಕ್‌ನಿಂದ ಬೆಳಿಗ್ಗೆ 07:00 ಗಂಟೆ ಬದಲಾಗಿ 04:30 ಗಂಟೆಯಿಂದ ಮೆಟ್ರೋ ರೈಲು ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ.

ಪ್ರತಿ ಬಾರಿಯಂತೆ ಪ್ರಯಾಣಿಕರು QR ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು NCMC ಕಾರ್ಡ್‌ಗಳನ್ನು ಸಹ ಬಳಸಬಹುದು. ಕಬ್ಬನ್‌ ಪಾರ್ಕ್ ಮತ್ತು ಎಂ.ಜಿ ರೋಡ್ ಮೆಟ್ರೊ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳುವಂತೆ ವಿನಂತಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರಿಕೆಟ್​ ಪ್ರೇಮಿಗಳಿಗೆ ಗುಡ್​ನ್ಯೂಸ್​​.. ಇಂದು ಬೆಂಗಳೂರಲ್ಲಿ ಎಷ್ಟು ಗಂಟೆವರೆಗೂ ಮೆಟ್ರೋ ಲಭ್ಯ?

https://newsfirstlive.com/wp-content/uploads/2024/01/namma-metro-4.jpg

Load More