/newsfirstlive-kannada/media/post_attachments/wp-content/uploads/2025/02/NAMMA_METRO-1.jpg)
ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ಬೆಲೆ ಭಾರೀ ಮಟ್ಟದಲ್ಲಿ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಸರ್ಕಾರ ಬಿಗ್ ಶಾಕ್ ನೀಡಿತ್ತು. ಇದರಿಂದ ಬೇಸರಗೊಂಡಿದ್ದ ಸಾರ್ವಜನಿಕರು ಮೆಟ್ರೋ ಪ್ರಯಾಣವೇ ಬೇಡವೆಂದು ಬಿಎಂಟಿಸಿ, ಖಾಸಗಿ ವಾಹನಗಳ ಮೊರೆ ಹೋಗಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡು ಇದೀಗ ಕೆಲವೆಡೆ ಮಾತ್ರ ಹೊಸ ದರ ಜಾರಿ ಮಾಡಿದ್ರೆ, ಇನ್ನು ಕೆಲವೆಡೆ ಅದೇ ಟಿಕೆಟ್ ಬೆಲೆ ಇದೆ.
ಟಿಕೆಟ್ ದರ ಬದಲಾವಣೆ ಆಗದ ಮೆಟ್ರೋ ಸ್ಟೇಷನ್ಗಳ ವಿವರ ಇಲ್ಲಿದೆ
- ಮೆಜೆಸ್ಟಿಕ್ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣ- 60 ರೂಪಾಯಿ
- ಮೆಜೆಸ್ಟಿಕ್ನಿಂದ ಸಿಂಗಯ್ಯನಪಾಳ್ಯ ಮೆಟ್ರೋ ನಿಲ್ದಾಣ- 60 ರೂಪಾಯಿ
- ಮೆಜೆಸ್ಟಿಕ್ ಟು ಕೆಂಗೇರಿ ಮೆಟ್ರೋ ನಿಲ್ದಾಣ- 60 ರೂ.
- ಮೆಜೆಸ್ಟಿಕ್ ಟು ಸೀತಾರಾಮನಪಾಳ್ಯ- 60 ರೂ.
- ಮೆಜೆಸ್ಟಿಕ್ನಿಂದ ಕೋಣನಕುಂಟೆ ಕ್ರಾಸ್- 60 ರೂ.
- ಮೆಜೆಸ್ಟಿಕ್ನಿಂದ ರಾಜರಾಜೇಶ್ವರಿ ನಗರ- 50 ರೂ.
ಇದನ್ನೂ ಓದಿ:ಕರುಳ ಕುಡಿ ಅನುಬಂಧ; ಮತ್ತೆ ತಾಯಿ ಮಡಿಲು ಸೇರಿದ ಮರಿಗಳು.. ಅರಣ್ಯ ಇಲಾಖೆ ಕಾರ್ಯಾಚರಣೆ ಹೇಗಿತ್ತು?
ಟಿಕೆಟ್ ಬೆಲೆ ಕಡಿಮೆ ಮಾಡಲು ಸೂಚಿಸಿದ್ದ ಸಿಎಂ ಸಿದ್ದರಾಮಯ್ಯ
ಮೆಟ್ರೋ ಟಿಕೆಟ್ ಬೆಲೆ ಎಲ್ಲೆಲ್ಲಿ ಹೆಚ್ಚಳ ಆಗಿದೆಯೋ ಅಲ್ಲೆಲ್ಲಾ ತುಸು ಕಡಿಮೆ ಮಾಡಲಾಗಿದ್ದು ಇನ್ನು ಕೆಲವೆಡೆ ಬೆಲೆ ಹಾಗೆ ಇರಲಿದೆ. ಈ ಬೆಲೆ ಇಳಿಕೆಯು ಇಂದಿನಿಂದಲೇ ಜಾರಿಯಲ್ಲಿದೆ. ಮೆಟ್ರೋ ಟಿಕೆಟ್ ಬೆಲೆ ಹೆಚ್ಚಳ ಕುರಿತು ಪರಿಶೀಲನೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಇದರ ಬೆನ್ನಲ್ಲೇ ಫೆ.13 ರಂದು ಮಾಧ್ಯಮಗೋಷ್ಠಿ ನಡೆಸಿ ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ಮಾತನಾಡಿ, ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆ ಆಗಿದೆಯೋ ಅಲ್ಲಿ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡುವ ಮೂಲಕ ದರ ಇಳಿಸುತ್ತೇವೆ ಎಂದು ಹೇಳಿದ್ದರು. ಆದರೆ ಈ ಮೇಲೆ ತಿಳಿಸಿದ ಕೆಲ ನಿಲ್ದಾಣಗಳಲ್ಲಿ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಿಲ್ಲ. ಎಷ್ಟು ದರ ಹೆಚ್ಚಳ ಮಾಡಿದ್ದರೋ ಅಷ್ಟೂ ಹಣ ಕೊಟ್ಟು ಪ್ರಯಾಣಿಸಬೇಕು.
ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ
ಫೆಬ್ರುವರಿ 9 ರಂದು ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರ ಜೇಬಿಗೆ ಬಿಎಂಆರ್‌ಸಿಎಲ್ ಕತ್ತರಿ ಹಾಕಿತ್ತು. ಇದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿತ್ತು. ನಮ್ಮ ಮೆಟ್ರೋ ದರ ಹೆಚ್ಚಳದಿಂದ ಬೇಸರಗೊಂಡ ಬೆಂಗಳೂರಿನ ಜನ ಮೆಟ್ರೋದಲ್ಲಿ ಪ್ರಯಾಣಿಸುವುದನ್ನೇ ಕಡಿಮೆ ಮಾಡಿದ್ದರು. ದರ ಏರಿಕೆಗೂ ಮೊದಲು ನಿತ್ಯ 8 ಲಕ್ಷದಾಟಿದ್ದ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ. ಈಗ 7.5 ಲಕ್ಷ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ.
ಅಂದರೆ 50,000 ಪ್ರಯಾಣಿಕರು ಮೆಟ್ರೋಗೆ ಗುಡ್ಬೈ ಹೇಳಿದಂತೆ ಆಗಿದೆ. ಮೆಟ್ರೋ ಪ್ರಯಾಣಿಕರಲ್ಲಿ ಕೇವಲ 4 ದಿನಗಳಲ್ಲಿ ಒಟ್ಟು 80 ಸಾವಿರ ಪ್ರಯಾಣಿಕರು ಕಡಿಮೆ ಆಗಿದ್ದಾರೆ. ಮೆಟ್ರೋ ಬದಲಿಗೆ ಬಿಎಂಟಿಸಿ ಬಸ್, ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ. ಇದರ ಜೊತೆಗೆ ಬಿಎಂಆರ್‌ಸಿಎಲ್ ಇನ್ನಷ್ಟು ಪ್ರಯಾಣಿಕರನ್ನು ಕಳೆದುಕೊಳ್ಳುವ ಆತಂಕದಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ