Namma Metro: ಬಿಎಂಆರ್​ಸಿಎಲ್ ವಿರುದ್ಧ ಭಾರೀ ಆಕ್ರೋಶ.. ಸಂಕಷ್ಟಕ್ಕೆ ಸಿಲುಕಿದ ಗುತ್ತಿಗೆದಾರರು..!

author-image
Ganesh
Updated On
ನಮ್ಮ ಮೆಟ್ರೋ ಪ್ರಯಾಣದ ಪರಿಷ್ಕೃತ ದರ ಹೇಗಿದೆ..? ಎಷ್ಟು ರೂಪಾಯಿ ಕಮ್ಮಿ ಆಗಿದೆ..?
Advertisment
  • BMRCL ವಿರುದ್ಧ ಆಕ್ರೋಶಗೊಂಡ ಪ್ರಯಾಣಿಕರು
  • ಬೆಲೆ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ
  • ಮೆಟ್ರೋ ಪಾರ್ಕಿಂಗ್ ಖಾಲಿ ಖಾಲಿ, ಎಷ್ಟೆಲ್ಲ ಆಗೋಯ್ತು?

ಮೆಟ್ರೋ ಟಿಕೆಟ್ ದರ ಏರಿಕೆಯ ಬಿಸಿ ಬರೀ ಪ್ರಯಾಣಿಕರಿಗೆ ಮಾತ್ರವಲ್ಲ, ಮೆಟ್ರೋ ಸ್ಟೇಷನ್ ಪಾರ್ಕಿಂಗ್ ಅವ್ರಿಗೂ ತಟ್ಟಿದೆ. ಬೆಲೆ ಏರಿಕೆಯಿಂದ ಒಂದ್ಕಡೆ ಮೆಟ್ರೋಗೆ ಪ್ರಯಾಣಿಕರು ಕಮ್ಮಿಯಾದರೆ ಮತ್ತೊಂದು ಕಡೆ ಪಾರ್ಕಿಂಗ್​ಗೆ ವಾಹನಗಳು ಕಮ್ಮಿ ಆಗಿದ್ದು, ಗುತ್ತಿಗೆದಾರರಿಗೆ ತಲೆಬಿಸಿ ತಂದಿದೆ.

ಇದನ್ನೂ ಓದಿ: publive-imageಇಂದು iPhone SE4 ಲಾಂಚ್​​; ಕಡಿಮೆ ಬೆಲೆಗೆ ಸಿಗುತ್ತೆ ಆ್ಯಪಲ್​ ಫೋನ್

ಮೆಟ್ರೋ ಟಿಕೆಟ್ ದರ ಜಾಸ್ತಿ ಆದ್ಮೇಲೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಕಮ್ಮಿ ಆಗಿದೆ. ‌ಮೆಟ್ರೋ ಸಹವಾಸವೇ ಬೇಡ, ನಾವು ಬಸ್ಸಲ್ಲಿ ಹೋಗ್ತೇವೆ, ನಮ್ಮದೇ ಗಾಡಿಲೀ ಹೋಗ್ತೇವೆ ಅಂತ ಜನ ಆಕ್ರೋಶ ಹೊರಹಾಕಿದ್ದರು. ಬೆನ್ನಲ್ಲೇ ಮೆಟ್ರೋ ಪಾರ್ಕಿಂಗ್ ಗುತ್ತಿಗೆದಾರರಿಗೆ ತಟ್ಟಿದೆ.
ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿಯುತ್ತಿದ್ದಂತೆ ಮೆಟ್ರೋ ಪಾರ್ಕಿಂಗ್​ನಲ್ಲಿ ವಾಹನಗಳ ಸಂಖ್ಯೆಯೂ ಕುಸಿದಿದೆ. ಹಲವು ಮೆಟ್ರೋ ಸ್ಟೇಷನ್ ಪಾರ್ಕಿಂಗ್​ಗಳು ಅರ್ಧಕರ್ಧ ಖಾಲಿ ಹೊಡೆಯೋಕೆ ಶುರುವಾಗಿದೆ. ಟಿಕೆಟ್ ದರ ಏರಿಕೆ ಆದ್ಮೇಲೆ ಪಾರ್ಕಿಂಗ್ ಸಂಖ್ಯೆಯೂ ಕಮ್ಮಿ ಆಗಿದೆ ಅಂತ ನಿರ್ವಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರೇ ಇವತ್ತೇ ಅಲರ್ಟ್ ಆಗಿ.. ನಾಳೆ ನೀವು 12 ಗಂಟೆ ಕಾಲ ತೊಂದರೆಗೆ ಸಿಲುಕಬಹುದು..!

publive-image

ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೆಟ್ರೋ ಸ್ಟೇಷನ್ ಪಾರ್ಕಿಂಗ್​ನಲ್ಲಿ ಪ್ರತಿನಿತ್ಯ 600-650 ದ್ವಿಚಕ್ರ ವಾಹನಗಳು ಪಾರ್ಕಿಂಗ್ ಮಾಡ್ತಿದ್ವು. ಟಿಕೆಟ್ ರೇಟ್ ಜಾಸ್ತಿ ಆದಾಗಿಂತ ಅದರ ಸಂಖ್ಯೆ ಕುಸಿದಿದೆ. 305-400 ವಾಹನಗಳು ಬಂದ್ರೆ ಹೆಚ್ಚು ಅಂತಿದ್ದಾರೆ. ಇದ್ರಿಂದ ದಿನನಿತ್ಯದ ವ್ಯವಹಾರದಲ್ಲಿ ನಷ್ಟ ಆಗ್ತಿದೆ.

ಪಾರ್ಕಿಂಗ್​ಗೆ ಬರ್ತಿರುವ ವೆಹಿಕಲ್​ಗಳ ಪೈಕಿ ಸ್ಥಳೀಯ ಕಂಪನಿಗಳಿಗೆ ಬರೋರೇ ಜಾಸ್ತಿ. ಹಾಗಾಗಿ ಮೆಟ್ರೋ ದರ ಇಳಿಕೆ ಮಾಡದೇ ಹೋದರೆ ಪಾರ್ಕಿಂಗ್ ತೆಗೆದುಕೊಂಡಿರುವ ಗುತ್ತಿಗೆದಾರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

ಇದನ್ನೂ ಓದಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜರ್ಸಿ ಮೇಲೆ ಪಾಕಿಸ್ತಾನದ ಹೆಸರು.. ಭಾರೀ ವಿರೋಧ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment