newsfirstkannada.com

ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್.. ಕಾರಣ ಇಲ್ಲಿದೆ

Share :

Published April 1, 2024 at 8:06am

    ಸಂಚಾರ ದಟ್ಟಣೆಗೆ ಸಾಕ್ಷಿಯಾಗಿದ್ದ ರಸ್ತೆಯಲ್ಲಿ ಮತ್ತಷ್ಟು ಟ್ರಾಫಿಕ್‌

    ಮುಖ್ಯರಸ್ತೆ ಬಗ್ಗೆ ಬಿಎಂಆರ್​ಸಿಎಲ್ ಅಧಿಕಾರಿಗಳು ಹೇಳಿದ್ದೇನು?

    ಸಿಲಿಕಾನ್ ಸಿಟಿಯ ಆ ಮೇನ್​ರೋಡ್ ಬಂದ್ ಮಾಡ್ತಿರುವುದೇಕೆ?​

ಬೆಂಗಳೂರು: ಸುರಂಗ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದ ಪ್ರವೇಶ ಕಾಮಗಾರಿಗಾಗಿ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷಗಳ ಕಾಲ ಬಂದ್​ ಆಗಲಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್​ಸಿಎಲ್​ ಅಧಿಕಾರಿಗಳು, ಲಕ್ಕಸಂದ್ರ ಸುರಂಗದಲ್ಲಿನ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದಲ್ಲಿನ ಪ್ರವೇಶ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆ ಬನ್ನೇರುಘಟ್ಟ ಮುಖ್ಯರಸ್ತೆಯ ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗುವುದು ಅಂತ ತಿಳಿಸಿದ್ದಾರೆ. ದಿನನಿತ್ಯ ಸಂಚಾರ ದಟ್ಟಣೆಗೆ ಸಾಕ್ಷಿಯಾಗುವ ರಸ್ತೆಯಲ್ಲಿ ಮತ್ತಷ್ಟು ಟ್ರಾಫಿಕ್‌ ಹೆಚ್ಚಾಗುವ ಸಾಧ್ಯತೆ ಇದ್ದು, ಪರ್ಯಾಯ ಮಾರ್ಗ ಬಳಸಬೇಕಾಗಿ ನಮ್ಮ ಮೆಟ್ರೋ ಅಧಿಕಾರಿಗಳು ವಾಹನ ಸವಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕರುನಾಡ ‘ಲೋಕ’ ಅಖಾಡಕ್ಕೆ ಬಿಜೆಪಿ ಚಾಣಕ್ಯ ಎಂಟ್ರಿ.. ನಾಳೆ ಡಿ.ಕೆ ಸುರೇಶ್ ಕ್ಷೇತ್ರದಲ್ಲಿ ಅಮಿತ್​ ಶಾ​ ಅಬ್ಬರ..!

ಆನೆಪಾಳ್ಯ ಜಂಕ್ಷನ್‌ನಿಂದ ಡೇರಿ ಸರ್ಕಲ್ ಕಡೆಗೆ ಚಲಿಸುವ ವಾಹನಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಡೇರಿ ಸರ್ಕಲ್​ ಕಡೆಯಿಂದ ಆನೆಪಾಳ್ಯ ಜಂಕ್ಷನ್​ ಕಡೆಗೆ ಚಲಿಸುವ ವಾಹನಗಳು ಮೈಕೊ ಸಿಗ್ನಲ್​ನಲ್ಲಿ ಬಲಕ್ಕೆ ತಿರುಗಿ ಬೋಸ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಮುಂದಕ್ಕೆ ಹೋಗಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್.. ಕಾರಣ ಇಲ್ಲಿದೆ

https://newsfirstlive.com/wp-content/uploads/2024/04/METRO_BANNERGHATTA.jpg

Load More