ಒಂದೊಳ್ಳೆ ಕೆಲ್ಸಕ್ಕೆ ಮುಂದಾದ ನಮ್ಮ ಮೆಟ್ರೋ; ಗೌರವ ಮತ್ತಷ್ಟು ಹೆಚ್ಚಾಯ್ತು ಎಂದ ಪ್ರಯಾಣಿಕರು..!

author-image
Ganesh
Updated On
ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ; ಪ್ರಯಾಣಿಕರ ಜೇಬಿಗೆ ಬೀಳಲಿದೆ ಭಾರೀ ಕತ್ತರಿ
Advertisment
  • ನಮ್ಮ ಮೆಟ್ರೋ ಕನಸಿನ ಪ್ಲಾನ್​ಗೆ 5.28 ಕೋಟಿ ಹಣ ಮೀಸಲು
  • ಮೂರು ವರ್ಷದ ಅವಧಿಯಲ್ಲಿ 4 ಹಂತದಲ್ಲಿ ಕಾರ್ಯ ನಡೆಯಲಿದೆ
  • ಬಿಎಂಆರ್​ಸಿಎಲ್​ನ ಈ ನಿರ್ಧಾರಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬೆಂಗಳೂರು ನಗರದ ಸಂಚಾರ ನಾಡಿ ‘ನಮ್ಮ ಮೆಟ್ರೋ’ ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬರೋಬ್ಬರಿ 5.28 ಕೋಟಿ ವೆಚ್ಚದಲ್ಲಿ 20,000 ಸಸಿಗಳನ್ನು ನೆಡಲು ಮುಂದಾಗಿದೆ.

ಯಾಕೆ ಈ ಕಾರ್ಯ..?

ನಮ್ಮ ಮೆಟ್ರೋದ 2ಎ, 2 ಬಿ ಹಂತದ ಯೋಜನೆಗಾಗಿ 7,252 ಮರಗಳಿಗೆ ಕತ್ತರಿ ಹಾಕಲಾಗಿದೆ. ಈ ಮರಗಳಿಗೆ ಪರ್ಯಾಯವಾಗಿ ಬೆಂಗಳೂರು ಹೊರವಲಯದಲ್ಲಿ 20 ಸಾವಿರ ಗಿಡಗಳನ್ನು ನಡೆಲು ಬಿಎಂಆರ್​ಸಿಎಲ್ ಮುಂದಾಗಿದೆ.

ಇದನ್ನೂ ಓದಿ: ಯುವಿಗೆ ಗುರುವಂದನೆ ಸಲ್ಲಿಸಿದ ಅಭಿ.. ಬೆನ್ನು ತಟ್ಟೋರೂ ಬೇಕು ಗುರು ಎಂದ ಕ್ರಿಕೆಟ್ ಜಗತ್ತು..!

ನಮ್ಮ ಮೆಟ್ರೋ ಯೋಜನೆಗಳಿಗಾಗಿ 2021-2023 ಅವಧಿಯಲ್ಲಿ 3626 ಮರಗಳಿಗೆ ಕತ್ತರಿ ಹಾಕಲಾಗಿದೆ. 2021 ರಿಂದ 2022 ರವರೆಗೆ 856 ಮರಗಳನ್ನು ನಗರದ ವಿವಿಧ ಭಾಗಗಳಿಗೆ ಹಾಗೂ ಹೊರವಲಯಕ್ಕೆ ಸ್ಥಳಾಂತ ಮಾಡಲಾಗಿದೆ. ಅದೇ ರೀತಿ 2022 ರಿಂದ ಜನವರಿ 2023ರವರೆಗೆ ಹಂತ 2 ಎ ಮತ್ತು ಹಂತ 2 ಬಿ ಗಾಗಿ 107 ಮರಗಳನ್ನು ಸ್ಥಳಾಂತರ ಮಾಡಲಾಗಿದೆ. ಮತ್ತು 1165 ಮರಗಳನ್ನು ಕಡಿಯಲಾಗಿದೆ. 1193 ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರ ಮಾಡಲಾಗಿದೆ.

ಇದೀಗ ತಲಾ 1.32 ಕೋಟಿ ವೆಚ್ಚದಲ್ಲಿ 4 ಹಂತದಲ್ಲಿ ಬೆಂಗಳೂರು ಗ್ರಾಮಾಂತರದ ವಿವಿಧೆಡೆ ಸಸಿಗಳನ್ನು 20 ಬಿಎಂಆರ್​ಸಿಎಲ್ ಮುಂದಾಗಿದೆ. ಮೂರು ವರ್ಷ ನಾಲ್ಕು ತಿಂಗಳ ಕಾಲ ನಿರ್ವಹಣೆ ಮಾಡುವ ಷರತ್ತನ್ನು ಒಳಗೊಂಡು ಡೆಂಡರ್ ಕರೆದಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಬೇಸಿಗೆಗೆ ಮೊದಲೇ ಬಿಸಿಲಿನ ಝಳ.. ಹವಾಮಾನ ಇಲಾಖೆ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment