ಸರ್ಕಾರದಿಂದ ಭರ್ಜರಿ ಗುಡ್​​ನ್ಯೂಸ್.. ದೊಡ್ಡದಾಗ್ತಿದೆ ನಮ್ಮ ಮೆಟ್ರೋ ಜಾಲ..!

author-image
Ganesh
Updated On
ಸರ್ಕಾರದಿಂದ ಭರ್ಜರಿ ಗುಡ್​​ನ್ಯೂಸ್.. ದೊಡ್ಡದಾಗ್ತಿದೆ ನಮ್ಮ ಮೆಟ್ರೋ ಜಾಲ..!
Advertisment
  • ​28,405 ಕೋಟಿ ವೆಚ್ಚದಲ್ಲಿ 36.59 ಕಿಮೀ ಉದ್ದದ ಮಾರ್ಗ
  • ಗ್ರೀನ್, ಪರ್ಪಲ್ ಲೈನ್! ಹೊಸ ಮಾರ್ಗದ ಹೆಸರು ಏನು?
  • 28 ನಿಲ್ದಾಣಗಳು! 17 ಮಹಡಿ, 11 ಸುರಂಗದಲ್ಲಿ ನಿಲ್ದಾಣ

ಬೆಂಗಳೂರು: ನಮ್ಮ ಮೆಟ್ರೋ ಜಾಲ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನಮ್ಮ ಮೆಟ್ರೋ 3A ಹಂತಕ್ಕೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದೆ.

3A ಮಾರ್ಗ
ಸರ್ಜಾಪುರ-ಹೆಬ್ಬಾಳದವರೆಗೆ 3A ಮಾರ್ಗ ನಿರ್ಮಾಣವಾಗಲಿದೆ. 3A ಮಾರ್ಗವನ್ನು ಕೆಂಪು ಮಾರ್ಗ (ರೆಡ್ ಲೈನ್) ಎಂದು ಕರೆಯಲಾಗುತ್ತದೆ. ಈವರೆಗಿನ ಹಂತಗಳ ಪೈಕಿ ಅತೀ ದುಬಾರಿ ವೆಚ್ಚದ ಮಾರ್ಗ ಇದಾಗಿರಲಿದೆ.

28,405 ಕೋಟಿ ರೂಪಾಯಿ ವೆಚ್ಚದಲ್ಲಿ 36.59 ಕಿಮೀ ಮೆಟ್ರೋ ಮಾರ್ಗ ನಿರ್ಮಿಸಲು ಸಂಪುಟ ತೀರ್ಮಾನ ಮಾಡಿದೆ. ಕೆಂಪು ಮಾರ್ಗದ ಪ್ರತಿ ಕಿಲೋ ಮೀಟರ್​ ನಿರ್ಮಾಣಕ್ಕೆ 776 ರೂಪಾಯಿ ಕೋಟಿ ವೆಚ್ಚ ತಗುಲಲಿದೆ. ಈ ಹಂತ ಪೂರ್ಣಗೊಂಡರೆ 258 ಕಿಲೋ ಮೀಟರ್ ಮೆಟ್ರೊ ಮಾರ್ಗ ಸಿದ್ಧವಾಗಲಿದೆ.

ಇದನ್ನೂ ಓದಿ:ಜೀವಕ್ಕೆ ಸಂಚಕಾರ ತರುತ್ತೆ ಟೀ, ಕಾಫಿ! ಕುಡಿಯುವಾಗ ಇರಲಿ ಈ ಎಚ್ಚರ! ಸತ್ಯ ಬಿಚ್ಚಿಟ್ಟ ಆರೋಗ್ಯ ಇಲಾಖೆ

ಸಂಪುಟದ ಅನುಮೋದನೆ ಪಡೆದ ಈ ಯೋಜನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಮುಂದಿನ ಒಂದು ವರ್ಷದೊಳಗೆ ಕೇಂದ್ರದ ಅನುಮೋದನೆ ಸಿಗುವ ಸಾಧ್ಯತೆ ಇದೆ. 2026ರಲ್ಲಿ ಇದರ ಕಾಮಗಾರಿ ಆರಂಭವಾದಲ್ಲಿ 2031ಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.

ಎಲ್ಲಿಂದ ಎಲ್ಲಿವರೆಗೆ? ಎಲ್ಲೆಲ್ಲೆ ಸ್ಟೇಷನ್?

  • ಸರ್ಜಾಪುರ-ಹೆಬ್ಬಾಳ- 36.59 ಕಿಮೀ ಉದ್ದದ ಮೆಟ್ರೋ ಮಾರ್ಗ
  • 36.59 ಕಿಮೀ ಪೈಕಿ 22.14 ಕಿಮೀ ಫ್ಲೈ ಓವರ್ ಮಾರ್ಗ, 14.45 ಕಿಮೀ ಸುರಂಗ ಮಾರ್ಗ
  • ಒಟ್ಟು 28 ಸ್ಟೇಷನ್​ಗಳು- 17 ಮಹಡಿ ನಿಲ್ದಾಣಗಳು, 11 ಸುರಂಗ ಮಾರ್ಗ ನಿಲ್ದಾಣಗಳು
  • 5 ಇಂಟರ್ ಚೇಂಜ್ ಸ್ಟೇಷನ್ ನಿರ್ಮಾಣ- ಇಬ್ಬಲೂರು, ಅಗರ, ಡೈರಿ ಸರ್ಕಲ್, ಕೆಆರ್ ಸರ್ಕಲ್‌ ಹಾಗೂ ಹೆಬ್ಬಾಳ

ಎಲ್ಲೆಲ್ಲಿ ನಿಲ್ದಾಣಗಳು..?

ಸರ್ಜಾಪುರ, ಕಾಡ ಅಗ್ರಹಾರ ರೋಡ್, ಸೋಮಪುರ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮಲ್ ರಾಂ, ದೊಡ್ಡಕನ್ನೆಲಿ, ಕಲ್ಕೊಂಡರಹಳ್ಳಿ, ಬೆಳ್ಳಂದೂರು ಗೇಟ್, ಇಬ್ಬಲೂರು, ಅಗರ, ಜಕ್ಕಸಂದ್ರ, ಕೋರಮಂಗಲ 3rd ಬ್ಲಾಕ್, ಕೋರಮಂಗಲ 2nd ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿನಗರ, ಟೌನ್ ಹಾಲ್, ಕೆಆರ್ ಸರ್ಕಲ್, ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್, ಮೇಕ್ರಿ ಸರ್ಕಲ್, ಪ್ಯಾಲೇಸ್ ಗುಟ್ಟಳ್ಳಿ, ವೆಟರ್ನರಿ ಕಾಲೇಜು, ಗಂಗಾನಗರ, ಹೆಬ್ಬಾಳ.

ಇದನ್ನೂ ಓದಿ:ಟವಲ್​ ಕಟ್ಟಿಕೊಂಡು ಇಂಡಿಯಾ ಗೇಟ್ ಬಳಿ ಡಾನ್ಸ್ ಮಾಡಿದ ಮಾಡೆಲ್​! ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment