/newsfirstlive-kannada/media/post_attachments/wp-content/uploads/2024/07/namma-metro1.jpg)
ಬೆಂಗಳೂರು: ರಾತ್ರಿ ಆದ್ರೂ ನಮ್ಮ ಮೆಟ್ರೋ ಅನೌನ್ಸ್​ಮೆಂಟ್​ ಕೇಳಿಸ್ತಿತ್ತು. ‘ಬಾಗಿಲು ಎಡಕ್ಕೆ ತೆರೆಯಲಿದೆ. ಮುಂದಿನ ನಿಲ್ದಾಣ..’ ಹೀಗೆ ಪ್ರಯಾಣಿಕರಿಗೆ ಈ ಅಗೋಚರ ಧ್ವನಿ ದಾರಿ ತೋರಿಸ್ತಿತ್ತು. ಈ ಧ್ವನಿಯ ಹಿಂದಿನ ಶರೀರವೇ ಅಪರ್ಣಾ ಅವರದ್ದಾಗಿತ್ತು. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅಪರ್ಣಾ ಇನ್ನು ನೆನಪು ಮಾತ್ರ.
ಅಪರ್ಣಾ ನಿಧನರಾದ ಬೆನ್ನಲ್ಲೇ ಮೆಟ್ರೋದ ಹೊಸ ಮಾರ್ಗಗಳಿಗೆ ಯಾರು ಧ್ವನಿ ಆಗ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಸದ್ಯದಲ್ಲೇ ಆರ್​ವಿ ರಸ್ತೆ-ಬೊಮ್ಮಸಂದ್ರ, ನಾಗಸಂದ್ರ-ಮಾದವಾರ, ನಾಗವಾರ-ಗೊಟ್ಟಿಗೆರೆ ಏರ್​​ಪೋರ್ಟ್ ನೂತನ ಮಾರ್ಗಗಳು ಸದ್ಯದಲ್ಲೇ ಉದ್ಘಾಟನೆ ಆಗಲಿದೆ. ಈ ಮಾರ್ಗಗಳಲ್ಲಿ ಪ್ರಯಾಣಿಸುವ ಮೆಟ್ರೋದಲ್ಲಿ ಅಪರ್ಣಾ ಧ್ವನಿ ಇರುವುದಿಲ್ಲ. ನೂತನ ಮೆಟ್ರೋ ಮಾರ್ಗಗಳಿಗೆ ಅನೌನ್ಸ್​ಮೆಂಟ್ ಮಾಡಲು ಹೊಸ ಧ್ವನಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಮಾಹಿತಿಗಳ ಪ್ರಕಾರ ಈಗಾಗಲೇ ಉದ್ಘಾಟನೆ ಆಗಿರುವ ಎಲ್ಲಾ ಮಾರ್ಗದಲ್ಲಿಯೂ ಅಪರ್ಣಾ ಅವರ ಧ್ವನಿಯೇ ಇರಲಿದೆ. ಚಲ್ಲಘಟ್ಟ-ವೈಟ್ ಫೀಲ್ಡ್, ಯಲಚೇನಹಳ್ಳಿ- ನಾಗಸಂದ್ರ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಯಲಿದೆ. ಈ ಮೂಲಕ ಅರ್ಪಣಾ ನಿಧನ ಬಳಿಕವೂ ನಮ್ಮ ಮೆಟ್ರೋದ ಹಳೆ ರೈಲುಗಳಲ್ಲಿ ಅವರ ಧ್ವನಿ ಜೀವಂತವಾಗಿರಲಿದೆ.
ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡವನ್ನು ಸವಿಯಿರಿ ಎಂದು ಬಿಎಂಆರ್​ಸಿಎಲ್ ಹೇಳಿದೆ. ಕಳೆದ 13 ವರ್ಷಗಳಿಂದ ಅಪರ್ಣಾ ನಮ್ಮ ಮೆಟ್ರೋಗೆ ಧ್ವನಿ ನೀಡುತ್ತಾ ಬಂದಿದ್ದರು. ಅವರ ನಿಧನ ಬಳಿಕವೂ ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಸೂಚನೆಗಳು ಮೊಳಗಲಿವೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ದಾರುಣ ಘಟನೆ.. ಜಮೀನಿಗೆ ಹೊರಟಿದ್ದ ದಂಪತಿ ರೈಲಿಗೆ ಸಿಲುಕಿ ಸಾವು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ