newsfirstkannada.com

​​​​RCB ಪಂದ್ಯ ನೋಡಲು ಹೋಗೋರಿಗೆ ಗುಡ್​​ನ್ಯೂಸ್ ಕೊಟ್ಟ ನಮ್ಮ ಮೆಟ್ರೋ..!​​​​

Share :

Published March 29, 2024 at 12:12pm

    ಕೋಲ್ಕತ್ತ-ಆರ್​​​ಸಿಬಿ ನಡುವೆ ಇಂದು ಹೈವೋಲ್ಟೇಜ್ ಪಂದ್ಯ

    ಸಂಜೆ 7.30ಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆರಂಭ

    ಬಿಎಂಆರ್​ಸಿಎಲ್ ಮಾಡಿರುವ ಅನೌನ್ಸ್​ಮೆಂಟ್ ಏನು ಗೊತ್ತಾ?

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ‘ನಮ್ಮ ಮೆಟ್ರೋ’ ಸೇವೆಯ ಅವಧಿಯನ್ನು ವಿಸ್ತರಿಸಿದೆ. ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB v/s KKR ನಡುವೆ ಐಪಿಎಲ್ ಮ್ಯಾಚ್ ನಡೆಯಲಿದೆ.

ಐಪಿಎಲ್ ಪ್ರಿಯರಿಗಾಗಿ ಮೆಟ್ರೋ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಮೆಟ್ರೋ ಸಂಚಾರದ ಅವಧಿ ಮಧ್ಯರಾತ್ರಿವರೆಗೂ ವಿಸ್ತರಿಸಲಾಗಿದೆ. ಮಧ್ಯರಾತ್ರಿ 11.30 ರವರೆಗೂ ಮೆಟ್ರೋ ಸೇವೆ ಲಭ್ಯ ಇರಲಿದೆ.

ಸಂಜೆ 7.30ಕ್ಕೆ ಐಪಿಎಲ್ ಮ್ಯಾಚ್ ನಡೆಯಲಿದೆ. ಜೊತೆಗೆ ಮೆಟ್ರೋ ನಿಲ್ದಾಣಗಳಲ್ಲಿ ರಿಟರ್ನ್ ಪೇಪರ್ ಟಿಕೆಟ್ ವಿತರಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಎಲ್ಲಾ ನಿಲ್ದಾಣಗಳಲ್ಲೂ 50 ರೂಪಾಯಿ ಪೇಪರ್ ಟಿಕೆಟ್ ಲಭ್ಯ ಇರಲಿದೆ. ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪೇಪರ್ ಟಿಕೆಟ್​ಗೆ ವ್ಯವಸ್ಥೆ ಮಾಡಲಾಗಿದೆ. ಪೇಪರ್ ಟಿಕೆಟ್ ಪಡೆದು ಎಲ್ಲಾ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲು ಅವಕಾಶ ಇದೆ.

ಈ ಟಿಕೆಟ್ ರಾತ್ರಿ 8 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯ ಆಗಿರಲಿದೆ. QR ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್​ಗಳು, ಮತ್ತು NCMC ಕಾರ್ಡ್‌ಗಳನ್ನು ಸಹ ಬಳಸಬಹುದು. ವಾಟ್ಸ್ ಆ್ಯಪ್, ನಮ್ಮ ಮೆಟ್ರೋ ಆ್ಯಪ್, ಪೇಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅವಕಾಶ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​​​​RCB ಪಂದ್ಯ ನೋಡಲು ಹೋಗೋರಿಗೆ ಗುಡ್​​ನ್ಯೂಸ್ ಕೊಟ್ಟ ನಮ್ಮ ಮೆಟ್ರೋ..!​​​​

https://newsfirstlive.com/wp-content/uploads/2024/03/NAMMA-METRO.jpg

Load More