Advertisment

ಬೆಳ್ಳಂಬೆಳಗ್ಗೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್​ ಶಾಕ್​; ಏನಾಯ್ತು?

author-image
Veena Gangani
Updated On
ಬೆಳ್ಳಂಬೆಳಗ್ಗೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್​ ಶಾಕ್​; ಏನಾಯ್ತು?
Advertisment
  • ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ನಮ್ಮ ಮೆಟ್ರೋ
  • ಪರ್ಪಲ್ ಲೈನ್‌ನ ನಮ್ಮ ಮೆಟ್ರೋ ಸೇವೆಗಳಲ್ಲಿ ವ್ಯತ್ಯಯ
  • ಬೆಳಿಗ್ಗೆ ಕಾಡುಗೋಡಿಯಲ್ಲೇ ಕೆಟ್ಟು ನಿಂತ ನಮ್ಮ ಮೆಟ್ರೋ

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್ ಎದುರಾಗಿದೆ. ನಮ್ಮ ಮೆಟ್ರೋ ಸೇವೆಯು ಎಂದಿನಂತೆ ಇಂದು ಶುಕ್ರವಾರವು (ಮೇ 23) ಸಹ ಕಾರ್ಯಾಚರಣೆ ನಡೆಸಬೇಕಿತ್ತು.

Advertisment

ಇದನ್ನೂ ಓದಿ: ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ನಟಿಗೆ ಬ್ಲಾಕ್ ಮೇಲ್.. ಮಡೆನೂರು ಮನು ಮೇಲೆ ಸಾಲು ಸಾಲು ಆರೋಪ

publive-image

ಆದರೆ ತಾಂತ್ರಿಕ ದೋಷದಿಂದಾಗಿ ಮೆಟ್ರೋ ನೇರಳೆ ಮಾರ್ಗದಲ್ಲಿ ಬೆಳ್ಳಂಬೆಳಗ್ಗೆ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ತಾಂತ್ರಿಕ ಸಮಸ್ಯೆಯಿಂದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಕಂಗಾಲಾಗಿದ್ದರು. ಪರ್ಪಲ್ ಲೈನ್​​ನಲ್ಲಿ ಕಾಡುಗೋಡಿ ಟು ಚಲ್ಲಘಟ್ಟ ಸಂಚಾರ ಮಾಡುತ್ತದೆ. ಆದ್ರೆ ಇಂದು ಮುಂಜಾನೆ 05 ಗಂಟೆಗೆ ಕಾಡುಗೋಡಿಯಲ್ಲಿ ಮೆಟ್ರೋ ಕೆಟ್ಟು ನಿಂತಿದೆ. ಪರಿಣಾಮ ಉಜ್ವಾಲ ಟು ಚಲ್ಲಘಟ್ಟ ನಡುವೆ ಮೆಟ್ರೋ ಸಂಚಾರ ಮಾಡುತ್ತಿದೆ. ಹೀಗಾಗಿ 05 ಗಂಟೆಗೆ ಆರಂಭವಾಗಬೇಕಿದ್ದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

publive-image

ಇನ್ನೂ, ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲ್ ನಿಗಮ (BMRCL) ಅಧಿಕೃತವಾಗಿ ಮಾಹಿತಿ ನೀಡಿದ್ದು, ವಿಷಾಧಿಸಿದೆ. ತಾಂತ್ರಿಕ ದೋಷದ ಕಾರಣ ಇಂದು ಮುಂಜಾನೆ ನೇರಳೆ ಮಾರ್ಗದ ಸೇವೆಗಳಲ್ಲಿ ವ್ಯತ್ಯಯದಿಂದ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಇಂದು, 23ನೇ ಮೇ 2025 ರಂದು ಬೆಳಿಗ್ಗೆ 5:00 ಗಂಟೆಯಿಂದ ನೇರಳೆ ಮಾರ್ಗದ ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ಸ್ಟೇಷನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಸ್ಟೇಷನ್‌ನಿಂದ ಟ್ರೇನ್​ಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎಂದು ತಿಳಿಸಲಾಗುತ್ತದೆ. ಹಾಗಾಗಿಯು, ಮೆಟ್ರೋ ಸೇವೆ ನೇರಳೆ ಮಾರ್ಗದ ಹೋಪ್‌ಫಾರ್ಮ್ ಚನ್ನಸಂದ್ರ ನಿಲ್ದಾಣ ಮತ್ತು ಚಲ್ಲಘಟ್ಟ ನಿಲ್ದಾಣಗಳ ನಡುವೆ ಮಾತ್ರ ಕಾರ್ಯನಿರ್ವಹಿಸಲಿವೆ. ಹಸಿರು ಮಾರ್ಗದಲ್ಲಿ ಸಾಮಾನ್ಯ ಸೇವೆಗಳು ಮುಂದುವರಿಯುತ್ತವೆ. ಪ್ರಯಾಣಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದಿದೆ.

Advertisment

ಸದ್ಯ ಮೆಟ್ರೋ ಸಿಬ್ಬಂದಿ ತಾಂತ್ರಿಕ ದೋಷವನ್ನ ಸರಿಪಡಿಸಿದ್ದಾರೆ. ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಎಂದಿನಂತೆ ಮೆಟ್ರೋ ಸಂಚಾರ ಮಾಡಲಿದೆ. 9.55ಕ್ಕೆ ಕಾಡುಗೋಡಿಯಿಂದ ಚಲ್ಲಘಟ್ಟ ಸಂಚರಿಸುತ್ತಿದೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment