ಜನರ ಆಕ್ರೋಶಕ್ಕೆ ಗುರಿಯಾದ Namma Metro.. ಇದೀಗ ಮತ್ತೊಂದು ಬಿಗ್ ಶಾಕ್..!

author-image
Bheemappa
Updated On
ಬೆಂಗಳೂರಿಗರಿಗೆ ಗುಡ್​ ನ್ಯೂಸ್.. ನಾಗಸಂದ್ರ-ಮಾದಾವರ ಮೆಟ್ರೋ ಓಡಾಟ ಆರಂಭ
Advertisment
  • ಮೆಟ್ರೋಗೆ ಕೊಡುವ ಹಣದಲ್ಲಿ ಆಟೋದಲ್ಲಿ ಹೋಗಬಹುದಾ?
  • ಕೆಎಸ್​ಆರ್​ಟಿಸಿ ಬಸ್​ನಂತೆ ಬೆಲೆ ಏರಿಕೆ ಮಾಡಿದ್ದ ಮೆಟ್ರೋ
  • ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ

ಬೆಂಗಳೂರು: ಇದೇ ಫೆಬ್ರುವರಿ 9 ರಂದು ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿತ್ತು. ಟಿಕೆಟ್​ ದರ ಏರಿಸಿದ ಬೆನ್ನಲ್ಲೇ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿದೆ.

ನಮ್ಮ ಮೆಟ್ರೋ ದರ ಹೆಚ್ಚಳದಿಂದ ಬೇಸರಗೊಂಡ ಬೆಂಗಳೂರಿನ ಜನ ಮೆಟ್ರೋದಲ್ಲಿ ಪ್ರಯಾಣಿಸುವುದನ್ನೇ ಕಡಿಮೆ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ದರ ಏರಿಕೆಗೂ ಮೊದಲು ನಿತ್ಯ 8 ಲಕ್ಷದಾಟಿದ್ದ ಪ್ರಯಾಣಿಕರ ಸಂಖ್ಯೆಯಲ್ಲಿ ಈಗ ಭಾರೀ ಕುಸಿತವಾಗಿದೆ. ಈಗ 7.5 ಲಕ್ಷ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಅಂದರೆ 50,000 ಪ್ರಯಾಣಿಕರು ಮೆಟ್ರೋಗೆ ಗುಡ್​ಬೈ ಹೇಳಿದ್ದಾರೆ. ಈ ಮೂಲಕ ಪ್ರಯಾಣಿಕರು ಮೆಟ್ರೋದಿಂದ ದೂರ ಆಗುತ್ತಿದ್ದಾರೆ ಎನ್ನಲಾಗಿದೆ.

publive-image

ಇದನ್ನೂ ಓದಿ:ಸಂಚಲನ ಮೂಡಿಸಿದ ಗಾಯಕ ಅಭಿನವ್ ಸಾವು ಪ್ರಕರಣ.. ಱಪರ್​ಗೆ ವಿಷ ಸಿಕ್ಕಿದ್ದು ಹೇಗೆ ಗೊತ್ತಾ..?

ಮೆಟ್ರೋ ಪ್ರಯಾಣಿಕರಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಒಟ್ಟು 80 ಸಾವಿರ ಪ್ರಯಾಣಿಕರು ಕಡಿಮೆ ಆಗಿದ್ದಾರೆ. ಮೆಟ್ರೋ ಬದಲಿಗೆ ಬಿಎಂಟಿಸಿ ಬಸ್, ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರ ಜೊತೆಗೆ ಬಿಎಂಆರ್‌ಸಿಎಲ್‌ ಇನ್ನಷ್ಟು ಪ್ರಯಾಣಿಕರನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ಒಂದೇ ಬಾರಿಗೆ ಕೆಎಸ್​ಆರ್​ಟಿಸಿ ಬಸ್​ನಂತೆ ಟಿಕೆಟ್ ಬೆಲೆಯನ್ನು ಹೆಚ್ಚಿಗೆ ಮಾಡಿದ್ದೇ ಇದಕ್ಕೆ ಕಾರಣವಾಗಿದೆ.

ಮೆಟ್ರೋ ಪ್ರಯಾಣಿಕರ ಸಂಖ್ಯೆ

  • ಪ್ರಯಾಣ ದರ ಏರಿಕೆಗೂ ಮೊದಲು ಫೆ.8 ರಂದು 8.07 ಲಕ್ಷ ಪ್ರಯಾಣಿಕರು
  • ಫೆ.9ರಂದು ದರ ಏರಿಕೆ ಬಳಿಕ ಪ್ರಯಾಣಿಕರ ಸಂಖ್ಯೆ 6.23 ಲಕ್ಷಕ್ಕೆ ಇಳಿಕೆ
  • ಫೆಬ್ರುವರಿ 10 ರಂದು ಪ್ರಯಾಣಿಕರ ಸಂಖ್ಯೆ 8.28 ಲಕ್ಷ
  • ಫೆಬ್ರುವರಿ 11 ರಂದು ಪ್ರಯಾಣಿಕರ ಸಂಖ್ಯೆ 7.78 ಲಕ್ಷಕ್ಕೆ ಇಳಿಕೆ

ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಕೆ ಕಂಡಿದೆ. ಬೇಗ ಕೆಲಸಕ್ಕೆ ಹೋಗಬಹುದೆಂದು ಮೆಟ್ರೋ ಅವಲಂಬಿಸಿದ್ದ ಮಹಿಳೆಯರು ಈಗ ಬಿಎಂಟಿಸಿಯತ್ತ ಮುಖ ಮಾಡಿದ್ದಾರೆ. ಮೆಟ್ರೋಗೆ ಹಣ ನೀಡುವ ಬದಲು ಕ್ಯಾಬ್‌, ಆಟೋನಲ್ಲಿ ಪ್ರಯಾಣಿಸಬಹುದು. ಕೆಲವರು ಸ್ವಂತ ವಾಹನಗಳನ್ನು ಬಳಕೆಗೆ ಸಿದ್ಧರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment