newsfirstkannada.com

BBK10: ಬಿಗ್‌ಬಾಸ್ ‘ಆನೆ’ಯ ಗುಂಪಿನಲ್ಲಿ ನಮ್ರತಾ, ಮೈಕಲ್, ಇಶಾನಿ, ರಕ್ಷಕ್‌; ಸ್ನೇಹಿತ್ ಮಾತ್ರ ಕಾಣೆ!

Share :

Published February 3, 2024 at 2:55pm

    ವಿನಯ್, ಪವಿ ಪೂವಪ್ಪ, ನಮ್ರತಾ ಗೌಡ, ಮೈಕಲ್, ಇಶಾನಿ, ರಕ್ಷಕ್

    ‘ಗುಂಪು’ ಅನ್ನೋ ಟ್ಯಾಗ್ ಕೊಟ್ಟ ವಿನಯ್ ಗೌಡ ಅವರ ಗ್ಯಾಂಗ್

    ಬಿಗ್‌ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟಿದ್ದ ಸ್ನೇಹಿತ್ ಯಾಕೆ ಕಾಣೆ?

ಬಿಗ್‌ಬಾಸ್‌ ಸೀಸನ್ 10ರ ಹ್ಯಾಪಿ ಎಂಡಿಂಗ್, ಹ್ಯಾಂಗ್ ಓವರ್ ಇನ್ನೂ ನಿಂತಿಲ್ಲ. ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಕಂಟೆಸ್ಟೆಂಟ್‌ಗಳೂ ಅಷ್ಟೇ ಜೋಶ್‌ನಲ್ಲಿದ್ದಾರೆ. ಸೀಸನ್‌ 10ರ ಸ್ಪರ್ಧಿಗಳು ಮತ್ತೆ ಒಂದಾಗೋ ಮೂಲಕ ಸಖತ್ ಪಾರ್ಟಿ ಮಾಡಿದ್ದಾರೆ. ವಿನಯ್ ಗೌಡ ಅವರ ಗುಂಪು ಪಾರ್ಟಿಯ ವಿಡಿಯೋವನ್ನು ಹಂಚಿಕೊಂಡಿದೆ.

ವಿನಯ್‌ ಗೌಡ ಅವರು ಬಿಗ್‌ಬಾಸ್ ಸೀಸನ್‌ 10ರಲ್ಲಿ ಆನೆ ಎಂದೇ ಖ್ಯಾತಿಗಳಿಸಿದ್ದರು. ಬಿಗ್‌ಬಾಸ್‌ ಮನೆಯಲ್ಲಿ ಒಂದು ಗ್ಯಾಂಗ್ ಕೂಡ ಕಟ್ಟಿದ್ದರು ಅನ್ನೋ ಮಾತು ಕೇಳಿ ಬಂದಿತ್ತು. ಬಿಗ್‌ಬಾಸ್ ಮನೆಯ ಸಮರ್ಥರ ಆ ಗ್ಯಾಂಗ್ ಮತ್ತೆ ಸೇರಿಕೊಂಡು ಸಖತ್ ಎಂಜಾಯ್ ಮಾಡಿದೆ.

ಬಿಗ್‌ಬಾಸ್‌ ಮನೆಯಲ್ಲಿ ಹಲವು ಟಾಸ್ಕ್‌ಗಳಲ್ಲಿ ಒಟ್ಟಿಗೆ ಸ್ಟ್ರಾಟಜಿ ಮಾಡಿದ್ದ ಗೆಳೆಯರು ಒಟ್ಟಿಗೆ ಸೇರಿ ಒಂದು ಪಾರ್ಟಿ ಮಾಡಿದ್ದಾರೆ. ಆ ಸ್ನೇಹ ಮಿಲನಕ್ಕೆ ಗುಂಪು ಅನ್ನೋ ಟ್ಯಾಗ್ ಕೂಡ ಕೊಡಲಾಗಿದೆ. ಈ ಪಾರ್ಟಿಯಲ್ಲಿ ವಿನಯ್ ಗೌಡ, ಪವಿ ಪೂವಪ್ಪ, ನಮ್ರತಾ ಗೌಡ, ಮೈಕಲ್, ಇಶಾನಿ, ರಕ್ಷಕ್ ಕಾಣಿಸಿಕೊಂಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಅವರ ಜೊತೆಗಿದ್ದ ಬಹುತೇಕ ಮಂದಿ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಆದರೆ, ಸ್ನೇಹಿತ್ ಅವರು ಮಾತ್ರ ಕಾಣೆಯಾಗಿದ್ದಾರೆ. ಬಿಗ್‌ಬಾಸ್ ಮನೆಯ ಕೊನೇ ಹಂತದಲ್ಲಿ ಸ್ನೇಹಿತ್‌ ಅವರು ಬಿಗ್‌ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟಿದ್ದರು. ಆಗ ನಮ್ರತಾ ಮತ್ತು ಸ್ನೇಹಿತ್ ಮಧ್ಯೆ ದೊಡ್ಡ ಜಗಳವಾಗಿತ್ತು. ಮನೆಯಿಂದ ಎಲಿಮಿನೇಟ್ ಆಗಿ ಹೋಗಿದ್ದ ಸ್ಪರ್ಧಿಗಳು ಮತ್ತೆ ಯಾಕೆ ಬಂದ್ರು ಎಂದು ನಮ್ರತಾ ಕಣ್ಣೀರು ಸುರಿಸಿದ್ದರು. ಇದಾದ ಮೇಲೆ ವಿನಯ್ ಗೌಡ ಅವರ ಜೊತೆ ನಡೆದ ಪಾರ್ಟಿಯಲ್ಲಿ ಸ್ನೇಹಿತ್ ಮಾತ್ರ ಮಿಸ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಬಿಗ್‌ಬಾಸ್ ‘ಆನೆ’ಯ ಗುಂಪಿನಲ್ಲಿ ನಮ್ರತಾ, ಮೈಕಲ್, ಇಶಾನಿ, ರಕ್ಷಕ್‌; ಸ್ನೇಹಿತ್ ಮಾತ್ರ ಕಾಣೆ!

https://newsfirstlive.com/wp-content/uploads/2024/02/bigg-boss-5.jpg

Load More