/newsfirstlive-kannada/media/post_attachments/wp-content/uploads/2025/04/kiran.jpg)
ಕರ್ಣ.. ಸಿಕ್ಕಾಪಟ್ಟೆ ಚರ್ಚೆ ಆಗ್ತಿರೋ ಧಾರಾವಾಹಿ. ಕಿರಣ್ ರಾಜ್ ಮತ್ತೇ ಕಿರುತೆರೆಗೆ ಕಮ್ಬ್ಯಾಕ್ ಮಾಡ್ತಿರೋದರ ಜೊತೆಗೆ ಇನ್ನಿಬ್ಬರೂ ಜನಪ್ರಿಯ ನಾಯಕಿಯರು ಮತ್ತೊಮ್ಮೆ ಸೀರಿಯಲ್ ಲೋಕವನ್ನು ಆಳೋದಕ್ಕೆ ರೆಡಿಯಾಗ್ತಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೇಸ್ ನೆನಪಿಸಿದ ವಿನಯ್ ಗೌಡ, ರಜತ್ ಕಿಶನ್.. ಕೊನೆಗೂ ಸತ್ಯ ಒಪ್ಪಿಕೊಂಡ್ರಂತೆ..!
ಹೌದು, ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಡ್ತಿದ್ದಾರೆ. ಒಂದಲ್ಲಾ.. ಎರಡಲ್ಲ.. ಬರೋಬ್ಬರಿ ಮೂವರು ಸ್ಟಾರ್ಸ್ನ ಒಟ್ಟಿಗೆ ತೆರೆಮೇಲೆ ತರ್ತಿದ್ದಾರೆ. ಈಗಾಗಲೇ ಗೊತ್ತಿರೋ ಹಾಗೇ ಕರ್ಣನ ಪಾತ್ರ ಕಿರಣ್ ರಾಜ್ ಅಭಿನಯಿಸ್ತಿದ್ದಾರೆ. ಹಾಗೇ ಈ ಸೀರಿಯಲ್ನಲ್ಲಿ ಇಬ್ಬರು ನಾಯಕಿಯರು ಇರ್ತಾರೆ ಅಂತ ನಾವು ಹೇಳಿದ್ವಿ. ಒಬ್ಬರನ್ನ ಈಗಾಗಲೇ ರಿವೀಲ್ ಮಾಡಿದ್ದೀವಿ. ಅವರೇ ಭವ್ಯಾ ಗೌಡ. ಇದೀಗ ಮತ್ತೊಬ್ಬ ನಾಯಕಿ ಯಾರು ಅನ್ನೋ ಎಕ್ಸ್ಕ್ಲೂಸಿವ್ ಮಾಹಿತಿ ನ್ಯೂಸ್ಫಸ್ಟ್ಗೆ ಲಭಿಸಿದೆ.
ಈಗಾಗಲೇ ಕರ್ಣ ಸೀರಿಯಲ್ ಶೂಟಿಂಗ್ ಜೋರಾಗಿಯೇ ನಡೆಯುತ್ತಿದೆ. ಭವ್ಯಾ ಗೌಡ ಡಾಕ್ಟರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂಟ್ರಡಕ್ಷನ್ ಸೀನ್ಗಳ ಶೂಟಿಂಗ್ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ. ಕರ್ಣ ಮೆಡಿಕಲ್ ಸ್ಟೂಡೆಂಟ್ ಆಗಿದ್ದಾಗ ಭವ್ಯಾ ಗೌಡ ಕೂಡ ಅದೇ ಕಾಲೇಜಿನ ವಿದ್ಯಾರ್ಥಿ ಆಗಿರುತ್ತಾಳೆ. ಮಳೆಯಲ್ಲಿ ಡ್ಯಾನ್ಸ್ ಮಾಡ್ತಾ ಎಂಜಾಯ್ ಮಾಡ್ತಿರೋ ಭವ್ಯಾ ಮೇಲೆ ಕರ್ಣನಿಗೆ ಲವ್ ಆ್ಯಟ್ ಫಸ್ಟ್ ಸೈಟ್ ಆಗುತ್ತೆ. ಇಲ್ಲಿಂದ ಕತೆ ಶುರುವಾಗಿತ್ತೆ. ಆ ಮಳೆ.. ರೋಮ್ಯಾಂಟಿಕ್ ಸಾಂಗೂ.. ಇಬ್ಬರೂ ಫೇವರಿಟ್ ನಾಯಕ-ನಾಯಕಿ. ಇದನ್ನೂ ನೋಡಿದ ಫ್ಯಾನ್ಸ್ಗೆ ಹಬ್ಬಾನೋ ಹಬ್ಬ. ಇದು ಭವ್ಯಾ ಇಂಟ್ರಡಕ್ಷನ್ ಆಯ್ತು. ಮತ್ತೋರ್ವ ನಟಿ ಯಾರು ಅಂದ್ರಾ? ಅವರೇ ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ.
ಹೌದು, ಕರ್ಣನಿಗೆ ರಂಜನಿ ರಾಘವನ್.. ಇಲ್ಲ ಮೋಕ್ಷಿತಾ ಪೈ ಬರ್ಬೇಕು ಅಂತ ಫ್ಯಾನ್ಸ್ ಆಸೆ ಪಟ್ಟಿದ್ರು. ಇವ್ರು ಇಬ್ಬರೂ ಅಲ್ಲ. ಕರ್ಣನಿಗೆ ಜೋಡಿಯಾಗಿ ಮತ್ತೆ ಬಣ್ಣ ಹಚ್ಚುತಿದ್ದಾರೆ ನಟಿ ನಮ್ರತಾ. ನಾಗಿಣಿ ಸೀರಿಯಲ್ ಮೂಲಕ ಸೂಪರ್ ಸಕ್ಸಸ್ ಕಂಡಿದ್ದ ನಟಿ, ಅಲ್ಲಿಂದ ಬಿಗ್ ಬಾಸ್ನತ್ತ ಮುಖ ಮಾಡಿದ್ರು. ಸೀಸನ್ 10ರಲ್ಲಿ ಸದ್ದು ಮಾಡಿದ್ರು.
ಇದಾದ ಬಳಿಕ ಯಾವುದೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿರಲಿಲ್ಲ ನಟಿ. ಸಿನಿಮಾ ಮಾಡ್ತಾರಾ..? ಸೀರಿಯಲ್ ಮಾಡ್ತಾರಾ..? ಯಾವುದು ನಮ್ಮು ಪ್ರಾಜೆಕ್ಟ್ ಅಂತ ಫ್ಯಾನ್ಸ್ ಕೇಳ್ತಾನೆ ಇದ್ರು. ಸದ್ಯ ಈ ಪ್ರಶ್ನೆ ಉತ್ತರ ಕರ್ಣ. ಪಾತ್ರ ಯಾವ ರೀತಿ ಇರುತ್ತೆ ಅನ್ನೋದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಕರ್ಣನ ನಾಯಕಿ ಆಗಿ ನಮ್ರತಾ ತೆರೆಗೆ ಬರ್ತಿರೋ ಕನ್ಫರ್ಮ್ ಆಗಿದೆ. ಒಟ್ಟಿನಲ್ಲಿ ಕರ್ಣ ಧಾರಾವಾಹಿ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ ವೀಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ