/newsfirstlive-kannada/media/post_attachments/wp-content/uploads/2024/10/namrutha3.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಮತ್ತೆ ಸಖತ್ ಸುದ್ದಿಯಾಗಿದ್ದಾರೆ. ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿಯೋ ಕಿರುತೆರೆ ನಟಿ ನಮ್ರತಾ ಗೌಡ ಗ್ಲಾಮರಸ್ ಫೋಟೋಶೂಟ್ ಮೂಲಕ ಫ್ಯಾನ್ಸ್ಗಳ ಗಮನವನ್ನು ತನ್ನತ್ತ ಸೆಳೆಯುತ್ತಾ ಇರುತ್ತಾರೆ. ಸ್ಯಾಂಡಲ್ವುಡ್ನ ಪ್ರೀತಿಯ ಪವರ್ ಸ್ಟಾರ್ ಅಪ್ಪು ಅವರ ಹುಟ್ಟುಹಬ್ಬದಂದು ನೂತನ ಕೆಲಸಕ್ಕೆ ಕೈ ಹಾಕಿದ್ದರು.
ಇದನ್ನೂ ಓದಿ:ಅಪ್ಪು ಹೆಸರಲ್ಲಿ ಪ್ರತಿ ತಿಂಗಳು ಬಡವರಿಗೆ ಊಟ; ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ ಮಹತ್ವದ ನಿರ್ಧಾರ!
View this post on Instagram
ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ನಿಮಿತ್ತ ಬೀದಿ ಬದಿಯಲ್ಲಿ ಹಸಿವಿನಿಂದ ಬಳಲುವವರಿಗೆ, ಅನಾಥರಿಗೆ, ಎಲ್ಲರಿಗೂ ಹೊಟ್ಟೆ ತುಂಬುವಷ್ಟು ಉಟ ನೀಡಿದ್ದರು. ಈ ಕಾರ್ಯವನ್ನು ನಾನು ಪ್ರತಿ ತಿಂಗಳು ಮಾಡಬೇಕು ಅಂತಾ ಅಂದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದರು. ಇದೀಗ ಅಪ್ಪು ಅವರನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾನು ಅವರ ತುಂಬಾ ಅಭಿಮಾನಿ. ಅವರು ನಿಧನದ ಸುದ್ದಿ ಗೊತ್ತಾದಾಗ ದೇವರ ಮುಂದೆ ಕುಳಿತು ನಾನು ಆ ಸುದ್ದಿ ಸುಳ್ಳಾಗಿರಲಿ ಎಂದು ದೇವರಲ್ಲಿ ಬೇಡಿಕೊಂಡೆ. ಯಾವಾಗಲೂ ನನ್ನ ವಿಷಯಕ್ಕೆ ದೇವರನ್ನು ಬೇಡಿಕೊಳ್ಳುವುದಿಲ್ಲ. ಅವರನ್ನು ಇಷ್ಟು ಬೇಗ ಕಳೆದುಕೊಳ್ತೀನಿ ಎಂದು ಗೊತ್ತಿರಲಿಲ್ಲ. ಅವರು ನನಗೆ ಗೊತ್ತಿಲ್ಲ. ಚಿಕ್ಕವಳಿದ್ದಾಗ ಅವರ ಜೊತೆ ಒಮ್ಮೆ ಆ್ಯಕ್ಟ್ ಮಾಡಿದ್ದೆ ಅಷ್ಟೇ. ಆದರೆ ಅವರು ನನಗೆ ದೇವರು ಆಗಿದ್ದರು. ಅವರಂತೆ ಆ್ಯಕ್ಟ್ ಮಾಡಬೇಕು, ಹೆಲ್ಪ್ ಮಾಡಬೇಕು ಅಂದುಕೊಂಡೇ ಬೆಳೆದವಳು. ಪುನೀತ್ ಸರ್ ಯಾವಾಗಲೂ ನನ್ನ ಜೊತೆನೇ ಇರಬೇಕು ಎನ್ನುವ ಕಾರಣಕ್ಕೆ ಅವರ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ಕೈಮೇಲೆ ಹಾಕಿಸಿಕೊಂಡ ಟ್ಯಾಟೂ ತೋರಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ